ರಾಷ್ಟ್ರ ಪ್ರಶಸ್ತಿ ಪುರಸ್ಕೃತ ʼಅಮೆರಿಕಾ ಅಮೆರಿಕಾʼ ಸಿನಿಮಾಗೆ 25 ವರ್ಷ ಪೂರ್ಣ

ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬಹುತೇಕ ಶೂಟಿಂಗ್‌ ಮುಗಿಸಿದ್ದ ಈ ಸಿನಿಮಾಕ್ಕೆ ಇಂದು 25 ವರ್ಷಗಳ ಸಂಭ್ರಮ. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು. 

Written by - Bhavishya Shetty | Last Updated : Apr 11, 2022, 12:18 PM IST
  • ಅಮೆರಿಕಾ ಅಮೆರಿಕಾ ಸಿನಿಮಾಗೆ 25 ವರ್ಷ ಪೂರ್ಣ
  • ಅಮೆರಿಕಾದಲ್ಲಿ ಬಿಡುಗಡೆಯಾದ ಕನ್ನಡದ ಮೊಟ್ಟ ಮೊದಲ ಸಿನಿಮಾ
  • ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾ ಅಮೆರಿಕಾ ಅಮೆರಿಕಾ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ʼಅಮೆರಿಕಾ ಅಮೆರಿಕಾʼ ಸಿನಿಮಾಗೆ 25 ವರ್ಷ ಪೂರ್ಣ title=
America America

ಸ್ಯಾಂಡಲ್‌ವುಡ್‌(Sandalwood)ನಲ್ಲಿ 90 ದಶಕದಲ್ಲಿ ಸೂಪರ್‌ ಹಿಟ್‌ ಆಗಿದ್ದ ಅಮೆರಿಕಾ ಅಮೆರಿಕಾ (America America) ಸಿನಿಮಾಗೆ 25 ವರ್ಷ ತುಂಬಿದೆ. ಕೇಳಿದಷ್ಟು ಮತ್ತೂ ಕೇಳಬೇಕು, ನೋಡಿದಷ್ಟು ಮತ್ತೂ ನೋಡಬೇಕು ಎಂದೆನಿಸಿದ ಸಿನಿಮಾಗಳಲ್ಲಿ ಈ ಚಿತ್ರವೂ ಒಂದು. ಇನ್ನು ಅಮೆರಿಕಾದಲ್ಲಿ ಬಿಡುಗಡೆಯಾದ ಕನ್ನಡದ ಮೊಟ್ಟ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಈ ಸಿನಿಮಾಗಿದೆ. 

ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬಹುತೇಕ ಶೂಟಿಂಗ್‌ ಮುಗಿಸಿದ್ದ ಈ ಸಿನಿಮಾಕ್ಕೆ ಇಂದು 25 ವರ್ಷಗಳ ಸಂಭ್ರಮ. ನಾಗತಿಹಳ್ಳಿ ಚಂದ್ರಶೇಖರ್‌ (Nagathihalli Chandrashekhar) ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು. ಅಷ್ಟೇ ಅಲ್ಲದೆ, ಸಿನಿಮಾ ರಿಲೀಸ್ ಆಗಿ ಎರಡು ತಿಂಗಳಲ್ಲಿ ಕೋಟಿ ಕೋಟಿ ಹಣ ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿತ್ತು. 

ಇದನ್ನು ಓದಿ: ಇಂದು ಪ್ರಧಾನಿ ಮೋದಿ-ಯುಎಸ್ ಅಧ್ಯಕ್ಷ ಜೋ ಬೈಡೆನ್ ಮಹತ್ವದ ಸಭೆ

1997ರಲ್ಲಿ ರಿಲೀಸ್ ಆಗಿದ್ದ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್, ಈ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಹೇಮಾ ಪ್ರಭಾತ್, ಅಕ್ಷಯ್ ಆನಂದ್, ಹೆಚ್‌.ಜಿ ದತ್ತಾತ್ರೇಯ, ವೈಶಾಲಿ ಕಾಸರವಳ್ಳಿ, ಸಿ.ಆರ್ ಸಿಂಹ, ಶಿವರಾಮ್  ಹೀಗೆ ಪ್ರಸಿದ್ಧ ತಾರಾಗಣವೇ ಇತ್ತು. 

ಸಿನಿಮಾ ಹಿಟ್‌ ಜೊತೆಗೆ ಹಾಡುಗಳು ಸಹ ಎಲ್ಲರ ಮನಮುಟ್ಟುವಲ್ಲಿ ಯಶಸ್ವಿಯಾಗಿತ್ತು.  'ನೂರು ಜನ್ಮಕೂ..', 'ಯಾವ ಮೋಹನ ಮುರಳಿ ಕರೆಯಿತೋ' ಹಾಡು ಯಾರು ಕೇಳಿಲ್ಲ ಹೇಳಿ? ಹೀಗೆ 'ಅಮೆರಿಕಾ ಅಮೆರಿಕಾ' ಸಿನಿಮಾದ ಮೂಲಕ ವಿ ಮನೋಮೂರ್ತಿ ಅವರು ಸಂಗೀತ ನಿರ್ದೇಶಕ ಹುದ್ದೆಗೆ ಏರಿದ್ದಂತು ನಿಜ.

ರಾಜೇಶ್‌ ಕೃಷ್ಣನ್‌ ಅವರ ಧ್ವನಿಯಲ್ಲಿ ಕೇಳಿದ ಈ ಸಿನಿಮಾದ ಹಾಡುಗಳು ಇಂದಿನ ಪೀಳಿಗೆಗೂ ಅಚ್ಚುಮೆಚ್ಚು ಎಂದರೆ ತಪ್ಪಾಗಲ್ಲ. ರಮೇಶ್‌ ಅರವಿಂದ್‌- ಹೇಮಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಈ ಸಿನಿಮಾದ ಬಹುಭಾಗ ಶೂಟಿಂಗ್‌ ನಡೆದಿದ್ದು, ಅಮೆರಿಕಾದಲ್ಲಿಯೇ. 

ಇದನ್ನು ಓದಿ: RCB x Hombale Films : ಆರ್‌ಸಿಬಿ ಜೊತೆ ಹೊಸ ಸಾಹಸಕ್ಕೆ ಮುಂದಾದ ಹೊಂಬಾಳೆ ಫಿಲ್ಮ್ಸ್!

ಕನ್ನಡ ಸಿನಿಮಾದ ಲ್ಯಾಂಡ್ ಮಾರ್ಕ್ ಎಂದೇ ಸುಪ್ರಸಿದ್ದವಾಗಿದ್ದ 'ಅಮೆರಿಕಾ ಅಮೆರಿಕಾ ಸಿನಿಮಾ ಇದೀಗ ' 25 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ  ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿದಲ್ಲಿ ಪೋಸ್ಟರ್‌ನ್ನು ಶೇರ್ ಮಾಡಿದ್ದಾರೆ. ನಟ ರಮೇಶ್‌ ಅರವಿಂದ್‌ ಸಹ ಈ ಸಿನಿಮಾ ಚಿತ್ರೀಕರಣದ ಮೊದಲ ದಿನದ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನ, ರಮೇಶ್‌ ಅರವಿಂದ್‌- ಹೇಮಾ ಅಭಿನಯದಲ್ಲಿ ಮೂಡಿಬಂದ ಈ ಸಿನಿಮಾ ಜನಮನ ಗೆದ್ದಿದ್ದಂತೂ ನಿಜ. ಇಂದಿಗೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದ ಸಿನಿಮಾಗಳ ಪಟ್ಟಿಯಲ್ಲಿ ಅಮೆರಿಕಾ ಅಮೆರಿಕಾ ಕೂಡ ಒಂದು ಹೇಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News