ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ ಇಬ್ಬರು ಅನಿವಾಸಿ ಭಾರತೀಯರ ಮೃತದೇಹಗಳು ಬದಲಾಗಿದೆ. ಕೇರಳದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರನ್ನು ತಪ್ಪಾಗಿ ಅಂತ್ಯಸಂಸ್ಕಾರ ಮಾಡಿದ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಉತ್ತರ ಪ್ರದೇಶದ ದುಃಖತಪ್ತ ಕುಟುಂಬವು ತಮ್ಮ ಪ್ರೀತಿಪಾತ್ರರನ್ನು ನೋಡಲು ಕೊನೆಯ ಬಾರಿಯೂ ಸಾಧ್ಯವಾಗಲಿಲ್ಲ, ಏಕೆಂದರೆ ಆ ಮೃತದೇಹ ತಪ್ಪಾಗಿ ಕೇರಳದ ಕುಟುಂಬವೊಂದಕ್ಕೆ ಹಸ್ತಾಂತರವಾಗಿತ್ತು. ಅವರು ತಮ್ಮದೇ ಸಂಬಂಧಿ ಮೃತದೇಹ ಎಂದು ಹಿಂದೂ ಧರ್ಮದ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದಾರೆ. ಆದರೆ ಆ ಬಳಿಕ ತಿಳಿದು ಬಂದಿದ್ದು, ಶವಗಳು ಅದಲು ಬದಲಾಗಿವೆ ಎಂದು.  


ಇದನ್ನೂ ಓದಿ: NRI ಬ್ಯುಸಿನೆಸ್ ಮ್ಯಾನ್ ಅಟ್ಲಾಸ್ ಗ್ರೂಪ್ ಅಧ್ಯಕ್ಷ ಎಂಎಂ ರಾಮಚಂದ್ರನ್ ನಿಧನ


ಮೃತರಲ್ಲಿ ಒಬ್ಬರು ಮುಸ್ಲಿಂ ಆಗಿದ್ದರೆ, ಮತ್ತೊಬ್ಬರು ಹಿಂದೂ. ಲೋಪವನ್ನು ಪತ್ತೆಹಚ್ಚುವ ಮೊದಲು, ಹಿಂದೂ ಸಂಪ್ರದಾಯದಂತೆ ಮುಸ್ಲಿಂ ವ್ಯಕ್ತಿಯ ದೇಹವನ್ನು ಈಗಾಗಲೇ ಅಂತ್ಯಸಂಸ್ಕಾರ ಮಾಡಲಾಗಿದೆ.


ಮೃತರನ್ನು ಕೇರಳದ ಅಲಪ್ಪುಳ ಜಿಲ್ಲೆಯ 46 ವರ್ಷದ ಶಾಜಿ ರಾಜನ್ ಮತ್ತು ಉತ್ತರ ಪ್ರದೇಶದ ವಾರಣಾಸಿ ಮೂಲದ ಜಾವೇದ್ ಅಹ್ಮದ್ ಇದ್ರಿಶಿ (45) ಎಂದು ಗುರುತಿಸಲಾಗಿದೆ. ರಾಜನ್ ಎರಡೂವರೆ ತಿಂಗಳ ಹಿಂದೆ ಅಲ್ ಅಹ್ಸಾ ಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇದ್ರಿಶಿ ಸೆಪ್ಟೆಂಬರ್ 25 ರಂದು ದಮಾಮ್‌ನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.


ಇದನ್ನೂ ಓದಿ: NRI: ಅಮೆರಿಕಾದಲ್ಲಿ ಭಾರತೀಯ ಮೂಲದ ಕುಟುಂಬ ಕಿಡ್ನಾಪ್: ದಿನಗಳ ಬಳಿಕ ತೋಟದಲ್ಲಿ ಪತ್ತೆಯಾಯ್ತು ನಾಲ್ವರ ಶವ


ರಾಜನ್ ಅವರ ಮೃತದೇಹವನ್ನು ದಮ್ಮಾಮ್‌ನಿಂದ ಕೊಲಂಬೊ ಮೂಲಕ ಕೇರಳದ ತಿರುವನಂತಪುರಕ್ಕೆ ಏರ್ ಲಂಕಾ ಮೂಲಕ ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಮತ್ತು ಜಾವೇದ್ ಅವರ ದೇಹವನ್ನು ಇಂಡಿಗೋ ಕ್ಯಾರಿಯರ್ ಮೂಲಕ ದಮಾಮ್‌ನಿಂದ ನವದೆಹಲಿ ಮೂಲಕ ವಾರಣಾಸಿಗೆ ವಾಪಾಸ್ ಕಳುಹಿಸಲಾಯಿತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.