ಕೆಲಸ, ಮದುವೆ ಅಥವಾ ಯಾವುದೇ ಕಾರಣಕ್ಕಾಗಿ ನೀವು ಕೋಲ್ಕತ್ತಾದಿಂದ ವಿದೇಶಕ್ಕೆ ಅಥವಾ ಬೇರೆ ಊರುಗಳಿಗೆ ತೆರಳಬಹುದು. ಆದರೆ. ಅಲ್ಲಿನ ಜನರ ಪದ್ಧತಿ, ಸಂಪ್ರದಾಯದಿಂದ ಅವರನ್ನು ದೂರ ಮಾಡಲು ಸಾಧ್ಯವಿಲ್ಲ. ಅಲ್ಲಿನ ದಾರಿಗಳು, ಟೀ ಅಂಗಡಿಗಳು ಅವರನ್ನು ಎಂದಿಗೂ ಬಂಗಾಳದ ಜನರಾಗಿಯೇ ಉಳಿಯುವಂತೆ ಮಾಡುತ್ತದೆ. ಇದು ಬೆಂಗಾಲಿಗಳ ವಿಶೇಷತೆ ಎನ್ನಬಹುದು. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಸಿಇಟಿ ಪರೀಕ್ಷೆಗೂ ಹಿಜಾಬ್ ಧರಿಸುವಂತಿಲ್ಲ: ಸಚಿವ ಅಶ್ವತ್ಥ ನಾರಾಯಣ


ಇನ್ನು ಕೆನಡಾದಲ್ಲಿರುವ ಬಂಗಾಳಿಗಳು ತಮ್ಮ ಮೂಲ ನೆಲೆಯ ಸಂಸ್ಕೃತಿಯಾಗಲಿ, ಅಲ್ಲಿನ ಜನರನ್ನಾಗಲಿ ಮಿಸ್‌ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಇಲ್ಲಿನ ಎನ್‌ಆರ್‌ಐಗಳು ಫೇಸ್‌ಬುಕ್‌ ಗ್ರೂಪ್‌ವೊಂದನ್ನು ಕ್ರಿಯೇಟ್‌ ಮಾಡಿದ್ದಾರೆ. ಇದರ ಮೂಲಕ ಬಂಗಾಳಿ ಸಂಘವು ತಮ್ಮ ನಗರವನ್ನು ನೆನಪಿಸಿಕೊಳ್ಳುತ್ತಾರೆ. ಇವಿಷ್ಟೇ ಅಲ್ಲದೆ, ಈ ಗುಂಪು ಬಂಗಾಳಿ ವಲಸಿಗರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತದೆ. 


ಕೆನಡಾ ಮತ್ತು ಟೊರೊಂಟೊದಲ್ಲಿ ವಾಸಿಸುವ ಸುಮಾರು 800 ವಲಸಿಗರನ್ನು ಈ ಸಾಮಾಜಿಕ ಮಾಧ್ಯಮ ಗುಂಪು ಹೊಂದಿದೆ. ಜೀವನದ ಸುಖ-ದುಃಖಗಳನ್ನು ಪರಸ್ಪರ ಹಂಚಿಕೊಳ್ಳುವುದು ಅವರ ಗುರಿಯಾಗಿದೆ. ಈ ಉಪಕ್ರಮದ ಕುರಿತು ಮಾತನಾಡಿದ ಸದಸ್ಯರಲ್ಲಿ ಒಬ್ಬರಾದ ರೇಣು ಚಂದಾ, "ಹಲವಾರು ಕಾರಣಗಳಿಗಾಗಿ ಕೋಲ್ಕತ್ತಾದಿಂದ ಕೆನಡಾಕ್ಕೆ ವಲಸೆ ಬಂದಿರುತ್ತೇವೆ. ನಿಮಗೆ ಅಗತ್ಯವಿರುವ ಮೊದಲನೆಯದು ಕೆಲಸ. ಈ ಗುಂಪಿನ ಸದಸ್ಯರು ಹೊಸ ವಲಸಿಗರಿಗೆ ಸರಿಯಾದ ಜನರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತಾರೆ. ಅಂತೆಯೇ, ಸ್ಥಳೀಯ ಕಾರ್ ಡೀಲರ್‌ಗಳ ಸಂಪರ್ಕಮತ್ತು ಅತ್ಯುತ್ತಮ ರೆಸ್ಟೋರೆಂಟ್‌ಗಳ ಸಂಪರ್ಕಗಳನ್ನು ನಾವು ಅವರಿಗೆ ನೀಡಿ ಸಹಾಯ ಮಾಡುತ್ತೇವೆ" ಎಂದು ಹೇಳಿದರು.


ಇದನ್ನು ಓದಿ: ಮೂರನೇ ದಿನವೂ ED ವಿಚಾರಣೆಗೆ ರಾಹುಲ್‌ ಹಾಜರು : ರೊಚ್ಚಿಗೆದ್ದ ಕಾಂಗ್ರೆಸ್ ನಾಯಕರು!


ಈ ಗುಂಪು ಕೆಲವೊಂದು ಬಾರಿ ಔತಣಕೂಟವನ್ನು ಸಹ ಆಯೋಜನೆ ಮಾಡಿಕೊಳ್ಳುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.