ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ನೇತೃತ್ವದ ರಾಷ್ಟ್ರೀಯ ಪಕ್ಷವನ್ನು ಬೆಂಬಲಿಸಿ ಯುರೋಪ್ ಪ್ರವಾಸ ಕೈಗೊಂಡಿರುವ ಟಿಆರ್‌ಎಸ್‌ ಎನ್ಆರ್‌ಐ ಸಂಯೋಜಕ ಮಹೇಶ್ ಬಿಗಾಲ, ಜೆಕ್‌ ರಿಪಬ್ಲಿಕ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Tomorrow's Planet Transit: ನಾಳೆ ಈ ಗ್ರಹದ ರಾಶಿ ಪರಿವರ್ತನೆ, 3 ರಾಶಿಗಳ ಜನರಿಗೆ ಅಪಾರ ಲಾಭ, ನಿಮ್ಮ ರಾಶಿ ಇದರಲ್ಲಿದೆಯಾ?


ಈ ಸಂದರ್ಭದಲ್ಲಿ ಮಾತನಾಡಿದ ಎನ್ಆರ್‌ಐ ಸಂಯೋಜಕ ಮಹೇಶ್ ಬಿಗಾಲ, "ಟಿಆರ್‌ಎಸ್ ಪಕ್ಷ ಜೆಕ್ ಗಣರಾಜ್ಯದಲ್ಲಿ ಸಹ ಶಾಖೆಯನ್ನು ತೆರೆಯಲಿದೆ. ಇದು ಪಕ್ಷದ 52ನೇ ಎನ್ಆರ್‌ಐ ಶಾಖೆಯಾಗಿದೆ. ಇತರ ಐರೋಪ್ಯ ರಾಷ್ಟ್ರಗಳಂತೆ ಇಲ್ಲಿಯೂ ವಿಶೇಷ ಪ್ರತಿಕ್ರಿಯೆ ವ್ಯಕ್ತವಾಗಿದೆ" ಎಂದರು. 


"ಯಾವುದೇ ಅನಿವಾಸಿ ಭಾರತೀಯರನ್ನು ಕೇಳಿದರೂ ಸಹ ದೇಶದ ರಾಜಕೀಯಕ್ಕೆ ಬರಲು ಬಯಸುತ್ತಾರೆ. ಮೋದಿ ಆಡಳಿತದಲ್ಲಿ ದೇಶವನ್ನು ಕಿತ್ತುಹಾಕಬೇಕು ಎನ್ನುತ್ತಾರೆ. ಅಷ್ಟೇ ಅಲ್ಲದೆ ಬಿಜೆಪಿ ಆಡಳಿತದಲ್ಲಿ ರೂಪಾಯಿ ಮೌಲ್ಯ ಕುಸಿದಿದೆ ವಾಗ್ದಾಳಿ ನಡೆಸಿದರು.


"ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಕೇಂದ್ರ ಸರ್ಕಾರ ತೆಲಂಗಾಣಕ್ಕೆ ಆರ್ಥಿಕ ನೆರವು ನೀಡದೆ ಸುಳ್ಳು ಪ್ರಚಾರ ಮಾಡುತ್ತಿದೆ. ಮೋದಿ ಆಡಳಿತದಲ್ಲಿ ಹಣದುಬ್ಬರ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ. ಹಳೆ ನೋಟು ರದ್ದತಿ, ಬೆಳೆಗಳ ಬೆಂಬಲ ಬೆಲೆ, ಅಗ್ನಿಪಥದಂತಹ ಮೋದಿಯವರು ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಅಟ್ಟರ್ ಫ್ಲಾಪ್ ಆಗಿವೆ" ಎಂದರು.


"ಹಾಗಾಗಿಯೇ ಜನ ಕೆಸಿಆರ್ ಜೈ ಜೈ, ಮೋದಿ ಬೈ ಬೈ ಎಂದು ಟೀಕಿಸುತ್ತಿದ್ದಾರೆ" ಎಂದು ಟೀಕಿಸಿದರು.


ಇದನ್ನೂ ಓದಿ: 2022 ರ ಟಾಪ್ 5 ಸಿನಿಮಾಗಳು : ಇವುಗಳ ಗಲ್ಲಾಪೆಟ್ಟಿಗೆ ಗಳಿಕೆ ಕೇಳಿದ್ರೆ ಶಾಕ್ ಆಗುತ್ತೆ!


ಈ ಕಾರ್ಯಕ್ರಮದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಚೆನ್ನೈ, ಕರ್ನಾಟಕ, ದೆಹಲಿಯ ಅನಿವಾಸಿ ಭಾರತೀಯರಾದ ರಾಘವ ರೆಡ್ಡಿ ಲೋಕಸಾನಿ, ಪಾವನಿ, ಪ್ರೇಮ್, ಸಿರಿಶಾ, ಜೈ ಪ್ರಕಾಶ್, ಆದಿತ್ಯ, ರವೀಂದ್ರ ಬಾಬು ಅರುಣ್, ಶ್ರೀನಾಥ್, ಪ್ರಶಾಂತ್, ಅಭಿನವ್, ಬಿರೇನ್ ಮತ್ತಿತರರು ಭಾಗವಹಿಸಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.