Tomorrow's Planet Transit: ನಾಳೆ ಈ ಗ್ರಹದ ರಾಶಿ ಪರಿವರ್ತನೆ, 3 ರಾಶಿಗಳ ಜನರಿಗೆ ಅಪಾರ ಲಾಭ, ನಿಮ್ಮ ರಾಶಿ ಇದರಲ್ಲಿದೆಯಾ?

Budh Gochar 2022: ಜುಲೈ ತಿಂಗಳ ಮೊದಲವಾರದಲ್ಲಿಯೇ ಬುಧ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಜುಲೈ 2 ರಂದು ಬೆಳಗ್ಗೆ 9:52ಕ್ಕೆ ಬುಧ ವೃಷಭ ರಾಶಿಯಿಂದ ಹೊರಟು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಬಳಿಕ ಜುಲೈ 16ರವರೆಗೆ ಅದು ಮಿಥುನ ರಾಶಿಯಲ್ಲಿಯೇ ಗೋಚರಿಸಲಿದೆ. 

Budh Gochar 2022: ಜುಲೈ ತಿಂಗಳ ಮೊದಲವಾರದಲ್ಲಿಯೇ ಬುಧ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಜುಲೈ 2 ರಂದು ಬೆಳಗ್ಗೆ 9:52ಕ್ಕೆ ಬುಧ ವೃಷಭ ರಾಶಿಯಿಂದ ಹೊರಟು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಬಳಿಕ ಜುಲೈ 16ರವರೆಗೆ ಅದು ಮಿಥುನ ರಾಶಿಯಲ್ಲಿಯೇ ಗೋಚರಿಸಲಿದೆ. ನಂತರ ಮತ್ತೆ ಅದು ತನ್ನ ರಾಶಿಯನ್ನು ಬದಲಾಯಿಸಲಿದೆ. ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ, ಬುದ್ಧಿ, ವ್ಯಾಪಾರ ಹಾಗೂ ವೃತ್ತಿಜೀವನದ ಕಾರಕ ಗ್ರಹ ಎಂದೇ ಹೇಳಲಾಗುತ್ತದೆ. ಬುಧನ ಈ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಬುಧನ ಈ ರಾಶಿ ಪರಿವರ್ತನೆಯಿಂದ ಯಾವ ರಾಶಿಗಳ ಜಾತಕದವರಿಗೆ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Shravan 2022: ಜುಲೈ 29 ರಿಂದ ಈ ರಾಶಿಗಳ ಜನರ ಜೀವನದಲ್ಲಿ ಖುಷಿಗಳ ಮಹಾಪೂರವೇ ಹರಿದುಬರಲಿದೆ, ಕಾರಣ ಇಲ್ಲಿದೆ

 

(ಹಕ್ಕುತ್ಯಾಗ -  ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1.  ಬುಧ ಗ್ರಹದ ಮಿಥುನ ರಾಶಿ ಪ್ರವೇಶ ಒಟ್ಟು ಮೂರು ರಾಶಿಗಳ ಜಾತಕದವರಿಗೆ ವಿಶೇಷ ಲಾಭ ನೀಡಲಿದೆ. ಈ ಮೂರು ರಾಶಿಗಳಲ್ಲಿ ಸಿಂಹ, ಕನ್ಯಾ ಹಾಗೂ ಮಕರ ರಾಶಿಗಳು ಶಾಮೀಲಾಗಿವೆ.

2 /5

2. ಸಿಂಹ ರಾಶಿ- ಬುಧನ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯ ಜಾತಕದವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳಲಿವೆ. ಹೊಸ ನೌಕರಿ ಸಿಗುವ ಸಾಧ್ಯತೆ ಇದೆ. ಹೂಡಿಕೆಯಿಂದ ಲಾಭದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ದಾಂಪತ್ಯ ಜೀವನ ಸುಖಮಯವಾಗಿರಲಿದೆ.

3 /5

3. ಕನ್ಯಾ ರಾಶಿ: ಬುಧನ ಮಿಥುನ ರಾಶಿ ಗೋಚರದಿಂದ ನೌಕರಿಯಲ್ಲಿ ಪ್ರಮೋಶನ್ ಯೋಗವಿದೆ. ಪರಿಶ್ರಮದಿಂದ ಸಫಲತೆ ಪ್ರಾಪ್ತಿಯಾಗಲಿದೆ. ಬಿಸ್ನೆಸ್ ನಲ್ಲಿ ಲಾಭದಿಂದ ಆರ್ಥಿಕ ಪಕ್ಷ ಬಲಗೊಳ್ಳಲಿದೆ. ಹೊಸ ನೌಕರಿ ಸಿಗುವ ಸಾಧ್ಯತೆ ಇದೆ.

4 /5

4. ಮಕರ ರಾಶಿ: ಬುಧನ ರಾಶಿ ಪರಿವರ್ತನೆಯಿಂದ ನಿಮಗೆ ಆಸ್ತಿ ವ್ಯವಹಾರದಲ್ಲಿ ಲಾಭ ಸಿಗುವ ಸಾಧ್ಯತೆ ಇದೆ. ವೃತ್ತಿಜೀವನದ ಸ್ಥಾನಮಾನದಲ್ಲಿ ವೃದ್ಧಿಯಾಗಲಿದೆ. ನಿಮ್ಮ ಯಶ ಮತ್ತು ಕೀರ್ತಿ ಹೆಚ್ಚಾಗಲಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ.

5 /5

5. ಮಿಥುನ ರಾಶಿಯಲ್ಲಿ ಬುಧ ಗ್ರಹ ಜೂನ್ 17ರ ಮಧ್ಯರಾತ್ರಿ 12.15ರವರೆಗೆ ಇರಲಿದೆ. ನಂತರ ಅದು ಕರ್ಕ ರಾಶಿಯನ್ನು ಪ್ರವೇಶಿಸಲಿದೆ. ವೃಷಭ ರಾಶಿಯಲ್ಲಿ ಬುಧನ ಪ್ರವೇಶ ಏಪ್ರಿಲ್ 25 ರ ಮಧ್ಯ ರಾತ್ರಿ 12.24ಕ್ಕೆ ನೆರವೇರಿದೆ.