ಭಾರತ-ಪಾಕ್ ಗಡಿಯಲ್ಲಿ ಅಲೆದಾಡುತ್ತಿದ್ದ ಎನ್‌ಆರ್‌ಐ ದಂಪತಿ ಬಂಧನ
ಈ ದಂಪತಿಯು ಕೆನಡಾದ ಪೌರತ್ವವನ್ನು ಹೊಂದಿದ್ದಾರೆ. ಚನನ್ ಖೇರಾ ಗ್ರಾಮದ ಕುಲ್ವಿಂದರ್ ಸಿಂಗ್ ಮತ್ತು ಪತ್ನಿ ಕರಮ್‌ಜಿತ್ ಕೌರ್ ದಂಪತಿ ಗಡಿ ಪ್ರದೇಶದಲ್ಲಿ ತಿರುಗುತ್ತಿದ್ದರು ಎಂದು ತಿಳಿದುಬಂದಿದೆ. ಇವರಿಗೆ ಎನ್‌ಆರ್‌ಐಗಳ ಮೇಲೆ ಕೇಂದ್ರವು ವಿಧಿಸಿರುವ ನಿರ್ಬಂಧಗಳ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ಆ ಪ್ರದೇಶದಲ್ಲಿ ತಿರುಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ರಾಜಸ್ಥಾನದ ಬಾರ್ಮರ್‌ನಲ್ಲಿರುವ ಮುನಾಬಾವೊ ಭಾರತ-ಪಾಕ್ ಗಡಿ ಭಾಗದಲ್ಲಿ ತಿರುಗುತ್ತಿದ್ದ ಎನ್‌ಆರ್‌ಐ ದಂಪತಿಯನ್ನು ಬಿಎಸ್‌ಎಫ್ ಬಂಧಿಸಿದೆ ಎಂದು ವರದಿಯಾಗಿದೆ. ವಿಚಾರಣೆಯ ನಂತರ ಬಿಎಸ್ಎಫ್ ಅವರನ್ನು ಪೊಲೀಸರಿಗೆ ಒಪ್ಪಿಸಿದೆ. ಬಾರ್ಮರ್‌ನಲ್ಲಿರುವ ಭದ್ರತಾ ಏಜೆನ್ಸಿಗಳಿಂದ ಜಂಟಿ ವಿಚಾರಣೆ ಕೇಂದ್ರದಲ್ಲಿ ಇಬ್ಬರನ್ನು ವಿಚಾರಣೆ ನಡೆಸಲಾಯಿತು. ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲವಾದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: MP Bus Accident: ಮಧ್ಯ ಪ್ರದೇಶದಲ್ಲಿ ನರ್ಮದಾ ನದಿಗೆ ಉರುಳಿದ ಬಸ್: 12 ಮಂದಿ ಸಾವು
ಈ ದಂಪತಿಯು ಕೆನಡಾದ ಪೌರತ್ವವನ್ನು ಹೊಂದಿದ್ದಾರೆ. ಚನನ್ ಖೇರಾ ಗ್ರಾಮದ ಕುಲ್ವಿಂದರ್ ಸಿಂಗ್ ಮತ್ತು ಪತ್ನಿ ಕರಮ್‌ಜಿತ್ ಕೌರ್ ದಂಪತಿ ಗಡಿ ಪ್ರದೇಶದಲ್ಲಿ ತಿರುಗುತ್ತಿದ್ದರು ಎಂದು ತಿಳಿದುಬಂದಿದೆ. ಇವರಿಗೆ ಎನ್‌ಆರ್‌ಐಗಳ ಮೇಲೆ ಕೇಂದ್ರವು ವಿಧಿಸಿರುವ ನಿರ್ಬಂಧಗಳ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ಆ ಪ್ರದೇಶದಲ್ಲಿ ತಿರುಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಡಿಂಪಲ್ ಕ್ವೀನ್ ರಚಿತಾ ರಾಮ್ ಹೊಸ ಫೋಟೋ ಶೂಟ್, ಬ್ರೇಕ್ ಯಾಕೆ ಎಂದ ನೆಟ್ಟಿಗರು?
ಈ ಪ್ರಕರಣವಲ್ಲದೆ, ಇತ್ತೀಚೆಗೆ ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಬಂದ ಪಾಕಿಸ್ತಾನ ಮೂಲದ ಮಗುವೊಂದನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಪೋಷಕರಿಗೆ ಹಸ್ತಾಂತರಿಸಿದ್ದರು. ಈ ಬೆಳವಣಿಗೆ ಭಾರತಕ್ಕೆ ಗೌರವವನ್ನು ತಂದುಕೊಟ್ಟಿತ್ತು. ಜುಲೈ 1ರಂದು ಸಂಜೆ 7.15ರ ಸುಮಾರಿಗೆ ಪಾಕಿಸ್ತಾನ ಮೂಲದ ಮೂರು ವರ್ಷದ ಬಾಲಕ ಅಂತಾರಾಷ್ಟ್ರೀಯ ಗಡಿ ದಾಟಿ ಆಕಸ್ಮಿಕವಾಗಿ ಬಂದಿದ್ದ. ಬಿಎಸ್‌ಎಫ್‌ನ 182ನೇ ಬೆಟಾಲಿಯನ್ ಫಿರೋಜ್‌ಪುರ್ ಸೆಕ್ಟರ್‌ನ ಸೈನಿಕರು ಈ ಬಾಲಕನನ್ನು ರಕ್ಷಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.