China Issued 60000 visas to Indians: ಭಾರತೀಯರಿಗೆ ವೀಸಾ ವಿತರಣೆಗೆ ಸಂಬಂಧಿಸಿದಂತೆ ಚೀನಾ ಇತ್ತೀಚೆಗೆ ಹಲವು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಈ ವರ್ಷದ ಮೊದಲ ಐದು ತಿಂಗಳಲ್ಲಿ ಭಾರತೀಯರಿಗೆ 60,000 ವೀಸಾಗಳನ್ನು ನೀಡಲಾಗಿದೆ. ಈ ಬಗ್ಗೆ ಭಾರತದಲ್ಲಿನ ಚೀನಾ ರಾಯಭಾರಿ ಕಚೇರಿಯ ಪ್ರತಿನಿಧಿ ವಾಂಗ್ ಝೋಜಿಯಾನ್ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL ನಲ್ಲಿ ಧೂಳೆಬ್ಬಿಸಿದ್ದ ಈ ಆಟಗಾರ 8 ವರ್ಷಗಳ ಬಳಿಕ Team Indiaಗೆ ಮತ್ತೆ ಎಂಟ್ರಿ!


ಶಿಕ್ಷಣ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಕುಟುಂಬ ಸದಸ್ಯರ ಭೇಟಿಯಂತಹ ಕಾರಣಗಳಿಗಾಗಿ ಚೀನಾದ ರಾಯಭಾರಿ ಕಚೇರಿಗಳು ಈ ವರ್ಷ ಭಾರತೀಯರಿಗೆ 60,000 ವೀಸಾಗಳನ್ನು ನೀಡಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: NIA Raid: ಭಯೋತ್ಪಾದಕ ಕೃತ್ಯಕ್ಕೆ ಹಣ ಬಳಕೆ ಆರೋಪ: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ NIA ದಾಳಿ


ಭಾರತ ಸೇರಿದಂತೆ ವಿವಿಧ ದೇಶಗಳ ಜನರಿಗೆ ಮತ್ತೆ ಚೀನಾ ಪ್ರವೇಶಿಸಲು ಅವಕಾಶ ನೀಡುತ್ತಿರುವುದಾಗಿ ಅಲ್ಲಿನ ಸರ್ಕಾರ ಈ ವರ್ಷದ ಮಾರ್ಚ್‌ ನಲ್ಲಿ ಘೋಷಿಸಿತ್ತು. ಆ ಸಮಯದಲ್ಲಿ, ಸುಮಾರು ಮೂರು ವರ್ಷಗಳ ನಂತರ ವಿದೇಶಿಯರಿಗೆ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವುದಾಗಿ ಚೀನಾ ಹೇಳಿತ್ತು. ಭಾರತದಲ್ಲಿನ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್‌ಗಳು ನಂತರ ವೀಸಾ ನೀಡುವಿಕೆಯನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದವು. ಇನ್ನು ಮಾರ್ಚ್ 28, 2020 ರ ಮೊದಲು ನೀಡಲಾದ ಎಲ್ಲಾ ವೀಸಾಗಳು ಮಾನ್ಯವಾಗಿರುತ್ತವೆ ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಘೋಷಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ