Indian Cricket Team: ಐಪಿಎಲ್ 2023 ರ ಸೀಸನ್ ಟೀಮ್ ಇಂಡಿಯಾದ ಈ ಮಾರಣಾಂತಿಕ ಬೌಲರ್ ಗೆ ಬಹಳ ಸ್ಮರಣೀಯವಾಗಿರಲಿದೆ. ಆದರೆ ಈತ ಸುಮಾರು 8 ವರ್ಷಗಳಿಂದ ಟೀಂ ಇಂಡಿಯಾ ಪರ ಯಾವುದೇ ಪಂದ್ಯವನ್ನು ಆಡಿಲ್ಲ ಎಂಬುದನ್ನು ಇಲ್ಲಿ ಹೇಳಲೇಬೇಕು. ಇದೀಗ ಐಪಿಎಲ್ 2023ರ ಪ್ರದರ್ಶನದ ನಂತರ ಈ ಆಟಗಾರ ಟೀಂ ಇಂಡಿಯಾಗೆ ಮರಳುವ ನಿರೀಕ್ಷೆ ಹೆಚ್ಚಾಗಿದೆ. ಈ ಆಟಗಾರ ಐಪಿಎಲ್ ನ ಈ ಸೀಸನ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದರು ಮತ್ತು ತಂಡವನ್ನು ಫೈನಲ್ ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ: IPL 2023 Final: ರಿಸರ್ವ್ ಡೇ ದಿನ ಸ್ಟೇಡಿಯಂಗೆ ಸಿಗುತ್ತೆ ಫ್ರೀ ಎಂಟ್ರಿ! ಬಿಸಿಸಿಐ ನೀಡಿದೆ ಕಂಪ್ಲೀಟ್ ಮಾಹಿತಿ
34 ವರ್ಷದ ಬೌಲರ್ ಮೋಹಿತ್ ಶರ್ಮಾ ಕಳೆದ ವರ್ಷ ಗುಜರಾತ್ ಟೈಟಾನ್ಸ್ ಪರ ಆಟವಾಡಿ, ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ವರ್ಷವು ಕೂಡ ಸತತ ಎರಡನೇ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಗೆ ಹತ್ತಿರವಾಗುವಂತೆ ಅದ್ಭುತ ಪ್ರದರ್ಶನ ನೀಡಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿಯನ್ನು ಗೆದ್ದ ಕೂಡಲೇ, ಹಾರ್ದಿಕ್ ಪಾಂಡ್ಯ ಅವರು ಈ ಸೀಸನ್ ನಲ್ಲಿ ತಮ್ಮ ಈ ಅಭಿಯಾನಕ್ಕೆ ಹರಿಯಾಣದ ವೇಗಿ ಮೋಹಿತ್ ಶರ್ಮಾ ಕೊಡುಗೆ ಹೆಚ್ಚಿತ್ತು ಎಂದು ಹೇಳಿಕೊಂಡಿದ್ದರು.
ಅಂತಿಮ ಪಂದ್ಯದ ಕೊನೆಯ ಓವರ್’ನಲ್ಲಿ ಮಾರಕ ಬೌಲಿಂಗ್:
ಐಪಿಎಲ್ 2023 ರ ಅಂತಿಮ ಪಂದ್ಯದಲ್ಲಿ, 15 ನೇ ಓವರ್ ನಲ್ಲಿ ಮೊದಲ ನಾಲ್ಕು ಎಸೆತಗಳನ್ನು ಬೌಲ್ ಮಾಡಿದ ನಂತರ ಮೋಹಿತ್ ಕೊನೆಯ ಎರಡು ಎಸೆತಗಳನ್ನು ಚೆನ್ನಾಗಿ ಬೌಲ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಋತುವಿನಲ್ಲಿ ಅವರ ಪ್ರಯತ್ನಗಳನ್ನು ಕಡಿಮೆ ಅಂದಾಜು ಮಾಡಲಾಗುವುದಿಲ್ಲ. 14 ಪಂದ್ಯಗಳಲ್ಲಿ 27 ವಿಕೆಟ್ ಗಳನ್ನು ಪಡೆದಿದ್ದಾರೆ. ಈ ಋತುವಿನಲ್ಲಿ ಸಹ ಆಟಗಾರ ಮೊಹಮ್ಮದ್ ಶಮಿ ನಂತರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
2015ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯ!
2015 ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತಕ್ಕಾಗಿ ಆಡಿದ ನಂತರ ಮೋಹಿತ್ ಬಹುತೇಕ ನಾಪತ್ತೆಯಾಗಿದ್ದರು. ಆದರೆ ಎಂಟು ವರ್ಷಗಳ ನಂತರ ಈ ಅನುಭವಿ ಆಟಗಾರ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. 2024 ರ T20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅವರು ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಉಳಿಸಿಕೊಳ್ಳಬಹುದೇ ಎಂಬುದು ಈಗದ ಪ್ರಶ್ನೆ. ಈ ಐಸಿಸಿ ಪಂದ್ಯಾವಳಿಯು ಮುಂದಿನ ಐಪಿಎಲ್ ನಂತರ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ಆಡಲಾಗುತ್ತದೆ.
ಇದನ್ನೂ ಓದಿ: ಮುಂದಿನ 5 ದಿನ ಬಿರುಗಾಳಿ ಸಹಿತ ಧಾರಾಕಾರ ಮಳೆ! ಈ ಭಾಗಗಳಲ್ಲಿ ಎಚ್ಚರಿಕೆ ಕೈಗೊಳ್ಳಲು ಮುನ್ಸೂಚನೆ
ಜುಲೈನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ ನಲ್ಲಿ ಭಾರತದ ಐದು ಪಂದ್ಯಗಳ T20I ಸರಣಿಯಲ್ಲಿ ಮೋಹಿತ್ ದೀಪಕ್ ಚಹಾರ್ ಅವರೊಂದಿಗೆ ಆಡುವುದನ್ನು ನೋಡಿದರೆ ಆಶ್ಚರ್ಯವೇನಿಲ್ಲ. 10 ವರ್ಷಗಳ ಹಿಂದೆ ಸಿ ಎಸ್ ಕೆಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಿದ ಮೋಹಿತ್ ಶರ್ಮಾ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ