NRI News: ಬ್ರಿಟನ್ ನಲ್ಲಿ ಭಾರತೀಯ ಸಮುದಾಯದ ವಿರುದ್ಧ ಹಿಂಸಾಚಾರ, ಹೈಕಮಿಷನ್ ಕಠಿಣ ಕ್ರಮಕ್ಕೆ ಆಗ್ರಹ
UK News: 28 ಆಗಸ್ಟ್ನಲ್ಲಿ ಮೊದಲು ಈ ಹಿಂಸಾಚಾರ ಪ್ರಾರಂಭವಾಗಿದೆ, ಭಾರತವು ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ 2022 ಪಂದ್ಯವನ್ನು ಗೆದ್ದಾಗ, ಅದರ ನಂತರ ಬೆಲ್‌ಗ್ರೇವ್‌ನ ಮೆಲ್ಟನ್ ರಸ್ತೆಯಲ್ಲಿ ಕಾದಾಟ ಆರಂಭಗೊಂಡಿತ್ತು, ಇದರಲ್ಲಿ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ.
Leicester violence: ಲೀಸೆಸ್ಟರ್‌ನಲ್ಲಿ ಭಾರತೀಯ ಸಮುದಾಯದವರ ಮೇಲೆ ನಡೆದ ಹಿಂಸಾಚಾರವನ್ನು ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್ ಖಂಡಿಸಿದೆ ಮತ್ತು ದಾಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ. ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಹೈಕಮಿಷನ್,, ಯುಕೆ ಅಧಿಕಾರಿಗಳವರೆಗೆ ಈ ವಿಷಯವನ್ನು ತೆಗೆದುಕೊಂಡು ಹೋಗಿರುವುದಾಗಿ ಹೇಳಿದೆ. ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಟಿ20 ಪಂದ್ಯವನ್ನು ಭಾರತ ಗೆದ್ದ ನಂತರ, ಆಗಸ್ಟ್ 28 ರಂದು ಹಿಂಸಾಚಾರ ಆರಂಭಗೊಂಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಭಾರತೀಯ ಹೈಕಮಿಷನ್ “ಲೀಸೆಸ್ಟರ್‌ನಲ್ಲಿ ಭಾರತೀಯ ಸಮುದಾಯದ ವಿರುದ್ಧದ ಹಿಂಸಾಚಾರ ಮತ್ತು ಹಿಂದೂ ಧರ್ಮದ ಪ್ರತೀಕಗಳನ್ನು ಮತ್ತು ಕಟ್ಟಡಗಳನ್ನೂ ಧ್ವಂಸ ಮಾಡಿದ್ದನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಾವು ಯುಕೆ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದ್ದೇವೆ ಮತ್ತು ಈ ದಾಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣದ ಕ್ರಮಕ್ಕೆ ಆಗ್ರಹಿಸುತ್ತಿದ್ದೇವೆ. ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ನಾವು ಅಧಿಕಾರಿಗಳಿಗೆ ಕರೆ ನೀಡಿದ್ದೇವೆ" ಎಂದು ಹೇಳಿತ್ತು.
ಇದನ್ನೂ ಓದಿ-NRI News: ಅಧ್ಯಯನದ ದೃಷ್ಟಿಯಿಂದ ಆಸ್ಟ್ರೇಲಿಯಾ ವಿದ್ಯಾರ್ಥಿಗಳ ಜನಪ್ರೀಯ ತಾಣವಾಗುತ್ತಿರುವುದೇಕೆ?
ಭಾನುವಾರ ಲೀಸೆಸ್ಟರ್‌ಶೈರ್‌ನಲ್ಲಿ ಯುವಕರ ಘರ್ಷಣೆ
ಪೊಲೀಸ್ ಹೇಳಿಕೆಯ ಪ್ರಕಾರ, ಭಾನುವಾರ ಲೀಸೆಸ್ಟರ್‌ಶೈರ್‌ನಲ್ಲಿ ಯುವಕರ ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ಪ್ರಕರಣದಲ್ಲಿ ಇದುವರೆಗೆ ಕನಿಷ್ಠ 15 ಮಂದಿಯನ್ನು ಬಂಧಿಸಲಾಗಿದೆ. ಯುಕೆ ನಗರದ ಲೀಸೆಸ್ಟರ್‌ನಲ್ಲಿ ಪಾಕಿಸ್ತಾನಿ ಸಂಘಟಿತ ಗ್ಯಾಂಗ್‌ಗಳು ಹಿಂದೂಗಳನ್ನು ಹಿಂಸಿಸಿ ಅವರನ್ನು ಭಯಭೀತಗೊಳಿಸುತ್ತಿರುವುದನ್ನು ತೋರಿಸುವ ವಿವಿಧ ವೀಡಿಯೊಗಳು ಮತ್ತು ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಹಿಂಸಾಚಾರ ಸಂಭವಿಸಿದೆ ಎನ್ನಲಾಗಿದೆ.
ಯುಕೆ ಮೂಲದ ಮಾಧ್ಯಮ ಪ್ರಕಟಣೆಯ ಲೀಸೆಸ್ಟರ್ ಮರ್ಕ್ಯುರಿ ಪ್ರಕಾರ, ಹಿಂಸಾಚಾರವು ಮೊದಲು ಆಗಸ್ಟ್ 28 ರಂದು ಆರಂಭಗೊಂಡಿದೆ, ಭಾರತವು ಏಷ್ಯಾ ಕಪ್ 2022 ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಗೆದ್ದಿತ್ತು ಮತ್ತು ನಂತರ ಬೆಲ್‌ಗ್ರೇವ್‌ನ ಮೆಲ್ಟನ್ ರೋಡ್‌ನಲ್ಲಿ ನಡೆದ ಹೋರಾಟದಲ್ಲಿ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.