NRI News: ಭಾರತ-ರಷ್ಯಾ ನಡುವೆ ಜನ ಸಂಪರ್ಕ ಮತ್ತು ವ್ಯಾಪಾರ ಸಂಬಂಧ ಹೆಚ್ಚಳಕ್ಕೆ ವಿಸಾ ಮುಕ್ತ ಪ್ರಯಾಣ ಒಪ್ಪಂದದ ಪ್ರಸ್ತಾಪ

NRI News: ಉಜ್ಬೇಕಿಸ್ತಾನದ ಸಿಲ್ಕ್ ರೋಡ್ ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ವಾರ್ಷಿಕ ಶೃಂಗಸಭೆಯ ಹಿನ್ನೆಲೆಯಲ್ಲಿ ಮೋದಿ ಮತ್ತು ಪುಟಿನ್ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ, ರಷ್ಯಾದ ಅಧ್ಯಕ್ಷರು ಭಾರತದ ಶ್ರೀಮಂತ ಇತಿಹಾಸ ಮತ್ತು ಪ್ರಾಚೀನ ಸಂಸ್ಕೃತಿ, ಸಂಪ್ರದಾಯದಲ್ಲಿ ರಷ್ಯಾ ಜನರು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.  

Written by - Nitin Tabib | Last Updated : Sep 18, 2022, 12:55 PM IST
  • ಭಾರತ ಮತ್ತು ರಷ್ಯಾ ಮಧ್ಯೆ ವಿಸಾ ಮುಕ್ತ ಪ್ರಯಾಣ ಒಪ್ಪಂದದ ಪರವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಬ್ಯಾಟ್ ಬೀಸಿದ್ದಾರೆ.
  • ಸಮರ್ಕಂದ್ ನಲ್ಲಿ ನಡೆದ ಎಸ್ಸಿಓ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪುಟಿನ್ ಈ ಪ್ರಸ್ತಾಪ ಮುಂದಿಟ್ಟಿದ್ದಾರೆ.
  • ಇದು ಉಭಯ ದೇಶಗಳ ನಡುವಿನ ಜನ ಸಂಪರ್ಕ ಮತ್ತು ವ್ಯಾಪಾರ ಸಂಬಂಧಗಳಿಗೆ ಒತ್ತು ನೀಡುವ ಉದ್ದೇಶ ಹೊಂದಿದೆ ಎನ್ನಲಾಗಿದೆ
NRI News: ಭಾರತ-ರಷ್ಯಾ ನಡುವೆ ಜನ ಸಂಪರ್ಕ ಮತ್ತು ವ್ಯಾಪಾರ ಸಂಬಂಧ ಹೆಚ್ಚಳಕ್ಕೆ ವಿಸಾ ಮುಕ್ತ ಪ್ರಯಾಣ ಒಪ್ಪಂದದ ಪ್ರಸ್ತಾಪ title=
NRI News

ಸಮರ್ಕಂದ್: ಭಾರತ ಮತ್ತು ರಷ್ಯಾ ಮಧ್ಯೆ ವಿಸಾ ಮುಕ್ತ ಪ್ರಯಾಣ ಒಪ್ಪಂದದ ಪರವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಬ್ಯಾಟ್ ಬೀಸಿದ್ದಾರೆ. ಸಮರ್ಕಂದ್ ನಲ್ಲಿ ನಡೆದ ಎಸ್ಸಿಓ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪುಟಿನ್ ಈ  ಪ್ರಸ್ತಾಪ ಮುಂದಿಟ್ಟಿದ್ದಾರೆ. ಇದು ಉಭಯ ದೇಶಗಳ ನಡುವಿನ ಜನ ಸಂಪರ್ಕ ಮತ್ತು ವ್ಯಾಪಾರ ಸಂಬಂಧಗಳಿಗೆ ಒತ್ತು ನೀಡುವ ಉದ್ದೇಶ ಹೊಂದಿದೆ ಎನ್ನಲಾಗಿದೆ. 

ಉಜ್ಬೇಕಿಸ್ತಾನದ ಸಿಲ್ಕ್ ರೋಡ್ ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ವಾರ್ಷಿಕ ಶೃಂಗಸಭೆಯ ಹಿನ್ನೆಲೆಯಲ್ಲಿ ಮೋದಿ ಮತ್ತು ಪುಟಿನ್ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ, ರಷ್ಯಾದ ಅಧ್ಯಕ್ಷರು ಭಾರತದ ಶ್ರೀಮಂತ ಇತಿಹಾಸ ಮತ್ತು ಪ್ರಾಚೀನ ಸಂಸ್ಕೃತಿ, ಸಂಪ್ರದಾಯದಲ್ಲಿ ರಷ್ಯಾ ಜನರು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.

"ವಿಸಾ-ಮುಕ್ತ ಪ್ರವಾಸಿ ಪ್ರಯಾಣದ ಒಪ್ಪಂದದತ್ತ ಮಾತುಕತೆಗಳ ಪ್ರಕ್ರಿಯೆಯನ್ನು ವೇಗಗೊಳಿಸಲು ನಾವು ಇದನ್ನು ಪ್ರಸ್ತಾಪಿಸುತ್ತಿದ್ದೇವೆ" ಎಂದು ಈ ಸಂದರ್ಭದಲ್ಲಿ ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ-NRI News: ಯುಎಸ್ ಗೋಲ್ಡನ್ ವಿಸಾ ಪಡೆಯುವ ಪ್ರಕ್ರಿಯೆ ಇದೀಗ ಮತ್ತಷ್ಟು ಸುಲಭವಾಗಲಿದೆ

ಈ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿ ಹಾಗೂ ಮಾಸ್ಕೋ ನಡುವಿನ ಹಲವಾರು ದಶಕಗಳ ಸಂಬಂಧದ ಕುರಿತು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ಕಳೆದ ಫೆಬ್ರವರಿ ತಿಂಗಳಿನಲ್ಲಿ ನೆರೆ ರಾಷ್ಟ್ರದ ವಿರುದ್ಧ ರಷ್ಯಾ ಪಡೆಗಳು 'ವಿಶೇಷ ಸೇನಾ ಕಾರ್ಯಾಚರಣೆ' ಆರಂಭಿಸಿದ ಬಳಿಕ, ಉಕ್ರೇನ್ ನಲ್ಲಿ ಸಿಳುಕಿಗೊಂಡ ಸಾವಿರಾರು ಭಾರತೀಯ ವಿಧಾರ್ಥಿಗಳನ್ನು ಸ್ಥಳಾಂತರಿಸಲು ಸಹಕರಿಸಿದ್ದಕ್ಕಾಗಿ ಅಧ್ಯಕ್ಷ ಪುಟಿನ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ. 

ಇದನ್ನೂ ಓದಿ-“ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಭಾರತೀಯ ಕಾಲೇಜುಗಳಲ್ಲಿ ವಸತಿ ಸಾಧ್ಯವಿಲ್ಲ”

ರಷ್ಯನ್ನರಿಗಾಗಿ ಭಾರತ ಈಗಾಗಲೇ ಇ-ವಿಸಾ ವ್ಯವಸ್ಥೆಯನ್ನು ಹೊಂದಿರುವ ಕಾರಣ, ಭಾರತೀಯ ಪ್ರಜೆಗಳಿಗೂ ಕೂಡ ರಷ್ಯಾದ ಕಡೆಯಿಂದ ಪರಸ್ಪರ ಸಂಬಂಧವನ್ನು ಭಾರತ ನಿರೀಕ್ಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ರಷ್ಯಾದ ಬಾಂಧವ್ಯ ವೃದ್ಧಿಸುತ್ತದೆ ಮತ್ತು ಜನರೊಂದಿಗೆ ಜನರ ಸಂಪರ್ಕ ಮತ್ತು ಸಂಬಂಧ ಬಳಪದುತ್ತದೆ ಎಂದು ಮೂಲಗಳು ತಿಳಿಸಿವೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News