Labour Shortage In UK: ದೇಶದ ಕೈಗಾರಿಕಾ ವಲಯದಲ್ಲಿ ತೀವ್ರವಾದ ಕಾರ್ಮಿಕರ ಕೊರತೆಯನ್ನು ನಿಭಾಯಿಸಲು ದೇಶದ ವಿಸಾ ವ್ಯವಸ್ಥೆಯ ಪರಾಮರ್ಶೆಗೆ ಬ್ರಿಟಿಷ್ ಪ್ರಧಾನಿ ಲೀಜ್ ಟ್ರಸ್ ಮುಂದಾಗಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಕಾರ್ಮಿಕ ಕೊರತೆ ಎದುರಿಸುತ್ತಿರುವ ವಲಯಗಳಲ್ಲಿನ 'ಕೊರತೆ ಉದ್ಯೋಗ ಪಟ್ಟಿ'ಗೆ ಬದಲಾವಣೆಯನ್ನು ತರುವ ಮೂಲಕ ಬ್ರಿಟಿಷ್ ಪ್ರಧಾನಿ ನಮ್ಮ ಕೆಲ  ವಲಸೆ ವಿರೋಧಿ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ತಕ್ಕ ಉತ್ತರ ನೀಡಲು ಲೀಜ್ ಸಜ್ಜಾಗಿದ್ದಾರೆ ಎನ್ನಲಾಗಿದೆ. ಲೀಜ್ ಅವರ ಈ ಕ್ರಮ ಕೆಲವು ಕೈಗಾರಿಗೆಗಳಿಗೆ ವಿದೇಶಗಳಿಂದ ಬ್ರಾಡ್ ಬ್ಯಾಂಡ್ ಗಳಂತಹ ಹೆಚ್ಚುವರಿ ಸಿಬ್ಬಂದಿಯನ್ನು ಕರೆತರಲು ಅನುವು ಮಾಡಿಕೊಡಲಿದೆ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. 


ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕರೆತರಲು ಕೆಲವು ವಲಯಗಳಲ್ಲಿ ಇಂಗ್ಲಿಷ್ ಮಾತನಾಡುವ ಅವಶ್ಯಕತೆಯನ್ನು ಕೂಡ ಸಡಿಲಗೊಳಿಸುವುದು ಕೂಡ ಈ ವಿಮರ್ಶೆಯ ಭಾಗವಾಗಿರಲಿದೆ ಎಂದು ಡೌವ್ನಿಂಗ್ ಸ್ಟ್ರೀಟ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.


ಇದನ್ನೂ ಓದಿ-NRI News: ಕೆನಡಾ ತೆರಳ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ ಸರ್ಕಾರ


ವಲಸೆ ನಿಯಮಗಳ ಸಡಿಲಿಕೆಯ ಕುರಿತು ಪ್ರಶ್ನಿಸಿದಾಗ ಮಾತನಾಡಿರುವ ಯುಕೆ ಹಣಕಾಸು ಸಚಿವ, ಕ್ವಾಸಿ ಕ್ವಾರ್ಟೆಂಗ್, ಇದು ನಿಯಮಗಳ ಸಡಿಲಿಕೆಯ ವಿಷಯ ಅಲ್ಲ... ವಿಷಯ ಬ್ರೆಕ್ಸಿಟ್ ಡಿಬೇಟ್ ಗೆ ಸಂಬಂಧಿಸಿದ ವಿಷಯ. ವಲಸೆ ನಿಯಮ ಸಡಿಲಿಸುವುದಕ್ಕಿಂತ, ಯುಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಲಸೆಯನ್ನು ತಮ್ಮದೇ ಆದ ವಿಧದಲ್ಲಿ ತಡೆಯುವುದು ನಮ್ಮ ಆದ್ಯತೆ ಆದ್ಯತೆ ಆಗಿರಲಿದೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-NRI News: ಜರ್ಮನಿಗೆ ವ್ಯಾಸಂಗಕ್ಕಾಗಿ ತೆರಳಲು ಬಯಸುವ ವಿದ್ಯಾರ್ಥಿಗಳಿಗೆ ಇನ್ಮುಂದೆ APS ಸರ್ಟಿಫಿಕೇಟ್ ಅನಿವಾರ್ಯ


ಪಟ್ಟಿಗೆ ಒಳಪಡುವ ಉದ್ಯೋಗಗಳ ಸಂಖ್ಯೆ ಹೆಚ್ಚಳದ ಕುರಿತು ಕ್ವಾರ್ಟೆಂಗ್ ಅವರನ್ನು ಪ್ರಶ್ನಿಸಲಾಗಿ, ಆಂತರಿಕ ಸಚಿವರು ಮುಂಬರುವ ವಾರಗಳಲ್ಲಿ ಈ ಕುರಿತು ನಿಮಗೆ ಅಪ್ಡೇಟ್ ನೀಡಲಿದ್ದಾರೆ' ಎಂದಿದ್ದಾರೆ. "ಗೃಹ ಸಚಿವರು ಮುಂಬರುವ ಕೆಲ ವಾರಗಳಲ್ಲಿ ಈ ಕುರಿತು ಹೇಳಿಕೆ ನೀಡಲಿದ್ದಾರೆ. ಆದರೆ, ನಾವು ಆರ್ಥಿಕತೆಯನ್ನು ಉತ್ತೆಜಿಸಬೇಕಿದೆ" ಎಂದು ಕ್ವಾಸಿ ಕ್ವಾರ್ಟೆಂಗ್ ಹೇಳಿದ್ದಾರೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.