Pravasi Bharathiya Diwas 2023: ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಹಿಂದಿರುಗಿದ ದಿನವನ್ನು ಆಚರಿಸಲು ಜನವರಿ 9 ರಂದು ಪ್ರವಾಸಿ ಭಾರತೀಯ ದಿವಸ್ ಅಥವಾ NRI ದಿನವನ್ನು ಔಪಚಾರಿಕವಾಗಿ ಆಚರಿಸಲಾಗುತ್ತದೆ. ಈ ಘಟನೆಯು 1915 ರಲ್ಲಿ ನಡೆದಿದೆ ಎಂಬುದು ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿ. ಪ್ರಸ್ತುತ ಭಾರತದ ಅಭಿವೃದ್ಧಿಗೆ ಅನಿವಾಸಿ ಭಾರತೀಯ ಸಮುದಾಯದ ಕೊಡುಗೆಯನ್ನು ಎತ್ತಿ ಹಿಡಿಯಲು ಈ ದಿನವನ್ನು ಆಚರಿಸಲಾಗುತ್ತದೆ. ಅನಿವಾಸಿ ಭಾರತೀಯ ದಿನವನ್ನು ಮೊದಲು 2003 ರಲ್ಲಿ ಭಾರತ ಗಣರಾಜ್ಯದ ಜನರು ಆಚರಿಸಿದರು ಎಂಬುದನ್ನು ಪ್ರತಿಯೊಬ್ಬರೂ ಗಮನಿಸಬೇಕು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರೆಸ್ಯೂಮ್ ಕಂಡು ಫಿದಾ ಆದ ನೆಟಿಜನ್ಸ್: NETFLIXನಲ್ಲಿ ಜಾಬ್ ಕೊಡಿ ಎಂದು ಕ್ಯಾಂಪೇನ್ ಪ್ರಾರಂಭ


ಇತ್ತೀಚಿನ ವಿವರಗಳ ಪ್ರಕಾರ, ಜನವರಿ 7 ರಿಂದ ಜನವರಿ 9 ರವರೆಗೆ ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ. ಇದನ್ನು ಆಯ್ದ ಭಾರತೀಯ ನಗರದಲ್ಲಿ ಫೋರಂ ಮತ್ತು ಪ್ರಶಸ್ತಿ ಸಮಾರಂಭವನ್ನಾಗಿ ಆಯೋಜನೆ ಮಾಡಿ ಸಂಭ್ರಮಿಸಲಾಗುತ್ತದೆ.


ದೇಶದ ಅಭಿವೃದ್ಧಿಗೆ ಸಹಾಯ ಮಾಡುವಲ್ಲಿ ಅನಿವಾಸಿ ಭಾರತೀಯ ಸಮುದಾಯದ ಕೊಡುಗೆಯನ್ನು ಗುರುತಿಸಲು ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಿಸಲಾಗುತ್ತದೆ. ಇನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಪ್ರವಾಸಿ ಭಾರತೀಯ ದಿವಸ್ 2023ರ ಅಧಿಕೃತ ಥೀಮ್ "Diaspora: Reliable Partners for India's Progress in Amrit Kaal" ಎಂಬುದಾಗಿದೆ.


ಇದನ್ನೂ ಓದಿ: Ban on Visa Free Entry: ಈ ದೇಶದಲ್ಲಿ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ಸೌಲಭ್ಯ ಇನ್ಮುಂದೆ ನಿಷೇಧ: ಕಾರಣವೇನು?


ಲಭ್ಯವಿರುವ ಇತ್ತೀಚಿನ ವಿವರಗಳ ಪ್ರಕಾರ ಪ್ರವಾಸಿ ಭಾರತೀಯ ದಿವಸ್ 2023ನ್ನು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನವರಿ 8 ರಿಂದ 10ರವರೆಗೆ ನಡೆಸಲಾಗುತ್ತಿದೆ. ಇದು 17ನೇ ಪ್ರವಾಸಿ ಭಾರತೀಯ ದಿವಸ್ ಆಗಿದ್ದು, ಈ ವರ್ಷ ನಡೆಯಲಿರುವ ಕಾರ್ಯಕ್ರಮಕ್ಕೆ ಡಾ.ಮೊಹಮ್ಮದ್ ಇರ್ಫಾನ್ ಅಲಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.