Babar Azam Test Captaincy: ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ ತವರಿನಲ್ಲಿ ಟೆಸ್ಟ್ ಪಂದ್ಯಗಳನ್ನಾಡುತ್ತಿದ್ದು, ಅಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ 3-0 ಕ್ಲೀನ್ ಸ್ವೀಪ್ ಎದುರಿಸಿದೆ. ಇದಾದ ಬಳಿಕ ತಂಡ ಹೇಗೋ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಉಳಿಸಿಕೊಂಡಿತ್ತು. ಈ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ, ಪಾಕಿಸ್ತಾನಿ ಪತ್ರಕರ್ತ ಬಾಬರ್ ಅಜಮ್ ಅವರ ಬಳಿ ಒಂದು ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ಬಾಬರ್ ಆಜಮ್ ಕೋಪದಿಂದ ಉತ್ತರಿಸಿದ್ದಾರೆ.
ಇದನ್ನೂ ಓದಿ: ODI ಪಂದ್ಯಕ್ಕಾಗಿ ಈ ಕೆಲಸ ಮಾಡುತ್ತಿರುವ Rohit Sharma: ಗಡಗಡ ನಡುಗಿದ ಲಂಕಾ ಪ್ಲೇಯರ್ಸ್!!
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಂತರ ಪತ್ರಕರ್ತರು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ. 'ತಂಡದ ಮೇಲಿನ ನಿಮ್ಮ ಹಿಡಿತ ದುರ್ಬಲವಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಪಾಕಿಸ್ತಾನ ತಂಡದಲ್ಲಿ ಗೆಳೆತನದ ಸರಣಿ ಅಂತ್ಯವಾಗಿದೆ. ಇದೀಗ ಶೀಘ್ರದಲ್ಲೇ ನಿಮ್ಮನ್ನು ಟೆಸ್ಟ್ ನಾಯಕತ್ವದಿಂದಲೂ ಕಿತ್ತೆಸೆಯಲಾಗುವುದು ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ನೀವು ಏನು ಹೇಳಲು ಬಯಸುತ್ತೀರಿ?” ಎಂದು ಕೇಳಿದರು.
ಈ ಪ್ರಶ್ನೆಯ ಸಂದರ್ಭದಲ್ಲಿ “ಗೆಳೆತನ” ಎಂಬ ವಿಷಯ ಬಂದಿದ್ದು, ತಕ್ಷಣವೇ ಪತ್ರಕರ್ತನನ್ನು ತಡೆದ ಅಜಂ, ‘ಯಾವ ಸ್ನೇಹ ಹೇಳಿ?’ ಎಂದರು. ಆದರೆ ಇದಕ್ಕೆ ಕಿವಿಗೊಡದ ರಿಪೋರ್ಟರ್ ಪ್ರಶ್ನೆಯನ್ನು ಮುಂದುವರಿಸಿದ್ದಾರೆ.
ಪಾಕಿಸ್ತಾನದ ಪತ್ರಕರ್ತ, “ಶಾಹಿದ್ ಅಫ್ರಿದಿ ಮುಖ್ಯ ಆಯ್ಕೆಗಾರರಾಗಿ ಅಧಿಕಾರ ವಹಿಸಿಕೊಂಡ ನಂತರ, ಅವರು ಏಕದಿನದಲ್ಲಿ ಉಪನಾಯಕತ್ವವನ್ನು ಬದಲಾಯಿಸಿದ್ದಾರೆ. ಶಾನ್ ಮಸೂದ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಶೀಘ್ರದಲ್ಲೇ ನಿಮ್ಮನ್ನು ಟೆಸ್ಟ್ ನಾಯಕತ್ವದಿಂದಲೂ ಕಿತ್ತೆಸೆಯಲಾಗುವುದು ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ನೀವು ಏನು ಹೇಳಲು ಬಯಸುತ್ತೀರಿ?” ಎಂದು ಮತ್ತೆ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ನಾಯಕ ಬಾಬರ್ ಅಜಮ್, 'ಸರ್, ಯಾರ ನಾಯಕತ್ವ ಹೋಗುತ್ತಿದೆ ಎಂಬುದು ನಿಮಗೆ ಮಾತ್ರ ತಿಳಿಯುತ್ತದೆ. ಇದು ನನಗೆ ಮುಖ್ಯವಲ್ಲ. ಮೈದಾನದಲ್ಲಿ ಪ್ರದರ್ಶನ ನೀಡುವುದು ಮತ್ತು ನನ್ನ ತಂಡವನ್ನು ಪ್ರದರ್ಶನ ನೀಡುವುದು ನನ್ನ ಕೆಲಸ” ಎಂದು ಕಟುವಾಗಿ ನುಡಿದಿದ್ದಾರೆ.
ಇದನ್ನೂ ಓದಿ: Team India: ಅಂದು ದೇಶವೇ ಕೊಂಡಾಡುತ್ತಿದ್ದ ಈ ಸ್ಟಾರ್ ಬೌಲರ್ ನಿರ್ಮಿಸಿದ್ದು ಕಳಪೆ ದಾಖಲೆ!
ಸಮತಟ್ಟಾದ ಪಿಚ್‌ಗಳಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸಲಾಗುತ್ತಿದೆ. ನಾಯಕ ಬಾಬರ್ ಅಜಮ್ ಸ್ಪಿನ್ನರ್ ಸ್ನೇಹಿ ಪಿಚ್‌ಗಳನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಪಿಚ್‌ಗಳ ಮೇಲೆ ಆಡುವುದು ಸಹ ಪಾಕಿಸ್ತಾನಕ್ಕೆ ಹಿನ್ನಡೆಯಾಗುತ್ತಿದೆ. ನ್ಯೂಜಿಲೆಂಡ್ ಸರಣಿಯಲ್ಲಿ ಸರ್ಫರಾಜ್ ಅಹ್ಮದ್ ತಂಡಕ್ಕೆ ಮರಳಿದ್ದಾರೆ. ಅವರು ಅದ್ಭುತವಾಗಿ ಆಟವಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.