Painting Smartphone:150 ವರ್ಷಗಳಷ್ಟು ಹಳೆಯದಾದ ಪೇಂಟಿಂಗ್‌ ನಲ್ಲಿ ಇಂದಿನ ಯುಗದ ಸಾಧನವನ್ನು ನೋಡಿದರೆ ನಿಮಗೆ ಏನನಿಸುತ್ತದೆ? ಬಹುಶಃ ಅದನ್ನು ಸ್ವಲ್ಪ ಸಮಯದವರೆಗೆ ನಂಬುವುದೇ ಕಷ್ಟವನಿಸುತ್ತೆ. ಈಗ ನಾವು ಯಾಕೆ ಹೀಗೆ ಹೇಳುತ್ತಿದ್ದೇವೆ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ಅದಕ್ಕೆ ಇಲ್ಲಿದೆ ಕಾರಣ.


COMMERCIAL BREAK
SCROLL TO CONTINUE READING

ನೂರೈವತ್ತು ವರ್ಷಗಳ ಹಳೆಯ ಪೇಂಟಿಂಗ್‌ ನಲ್ಲಿ ಕಾಣಿಸಿಕೊಂಡ ಮಹಿಳೆಯ ಕೈಯಲ್ಲಿ ಮೊಬೈಲ್ ಫೋನ್ ಇರುವುದನ್ನು ಜನರು ಗಮನಿಸಿದ್ದಾರೆ. ಮೊಬೈಲ್ ಬಿಡಿ, ಲ್ಯಾಂಡ್ ಲೈನ್ ಕೂಡ ಇರದ ಕಾಲವದು. ಅಂತಹದ್ದರಲ್ಲಿ ಮೊಬೈಲ್ ಫೋನ್ ಇಲ್ಲಿಗೆ ಹೇಗೆ ಬಂತು ಎಂದು ಜನರು ಶಾಕ್ ಆಗಿ ಪ್ರಶ್ನೆ ಮಾಡುತ್ತಿದ್ದಾರೆ.


ಇದನ್ನೂ ಓದಿ: 18 ಕೋಟಿಗೆ ಖರೀದಿಸಿದ IPL ಸ್ಟಾರ್ ಆಟಗಾರನ ಗೆಳತಿಯ ಬಿಕಿನಿ ಹಾಟ್ ಫೋಟೋಸ್: ಮೋಡಿ ಮಾಡುತ್ತಿದೆ ನೋಡಿ…


ಈ ಪೇಂಟಿಂಗ್ ನೋಡಿದ ಮೇಲೆ ಜನ ಸಾಮಾನ್ಯರಿಗೆ ನಂಬುವುದು ಸ್ವಲ್ಪ ಕಷ್ಟವಾದರೂ, ಅದನ್ನು ಟೈಮ್ ಟ್ರಾವೆಲ್ ಆಗಿರಬಹುದು ಎಂದು ಹೇಳುತ್ತಿದ್ದಾರೆ. ಪೇಂಟಿಂಗ್ ನಲ್ಲಿ ಕಾಣಿಸಿಕೊಂಡಿರುವ ಮಹಿಳೆ ಕೈಯಲ್ಲಿ ಒಂದು ಸಾಧನವಿದೆ. ನೀವೂ ಕೂಡ ಅದನ್ನು ನೋಡಬಹುದು.


ಈ ವರ್ಣಚಿತ್ರವು 1860ರ ವರ್ಷದಲ್ಲಿ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ ಸುಮಾರು ನೂರೈವತ್ತು ವರ್ಷಗಳು ಕಳೆದಿವೆ. ಈ ಪೇಂಟಿಂಗ್‌ ನಲ್ಲಿ ಕಾಣುವ ಮಹಿಳೆ ಕೈಯಲ್ಲಿ ಸ್ಮಾರ್ಟ್‌ ಫೋನ್‌ ನಂತಹ ವಸ್ತುವೊಂದು ಇರುವುದನ್ನು ಸ್ಪಷ್ಟವಾಗಿ ಕಾಣಬಹುದು. ಇನ್ನು ನೋಡಿದ ಜನರು ಅದರ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಕೆಲವರು ಅದು ಆಪಲ್‌ ಡಿವೈಸ್ ಎಂದು ಹೇಳಿದರೆ, ಇನ್ನೂ ಕೆಲವರು ಅದು ಮೊಬೈಲ್ ಫೋನ್ ಹೌದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.


ಆದರೆ ಆ ಮಹಿಳೆ ಡಿವೈಸ್ ನ್ನು ಅಷ್ಟೊಂದು ಗಮನ ಹರಿಸಿ ನೋಡುವುದನ್ನು ನೋಡಿದ್ರೆ ಇದು ಖಂಡಿತವಾಗಿಯೂ ಸ್ಮಾರ್ಟ್ಫೋನ್ ಎಂದು ಅನಿಸುತ್ತದೆ ಅಂತಾ ಒಬ್ಬರು ಹೇಳಿದ್ದಾರೆ.


ಫರ್ಡಿನಾಂಡ್ ಜಾರ್ಜ್ ವಾಲ್ಡ್ ಮುಲ್ಲರ್ ಅವರು ರಚಿಸಿದ ಈ ವರ್ಣಚಿತ್ರದ ಹೆಸರು ‘ದಿ ಎಕ್ಸ್‌ ಪೆಕ್ಟೆಡ್ ಒನ್’ ಎಂದು. ಈ ವರ್ಣಚಿತ್ರದ ಮೂಲೆಯಲ್ಲಿ ಒಬ್ಬ ಪುರುಷನು ಸಹ ಕಾಣಿಸುತ್ತಿದ್ದಾನೆ. ಆತ ಬಹುಶಃ ಹೂವುಗಳೊಂದಿಗೆ ಆ ಮಹಿಳೆಗಾಗಿ ಕಾಯುತ್ತಿರಬೇಕು. ಅದೇ ರೀತಿ ಕಾಣಿಸುತ್ತಿದೆ.


ಇದನ್ನೂ ಓದಿ: IPL ಮಧ್ಯೆಯೇ ಈ ಆಟಗಾರನಿಗೆ ಗಂಭೀರ ಗಾಯ! ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ


ಈ ವರ್ಣಚಿತ್ರದ ಸತ್ಯತೆ ಏನು?


ಆಸ್ಟ್ರಿಯನ್ Paintings.net ನ CEO ಗಾರ್ಲ್ಯಾಂಡ್ ವೇಯ್ನ್ ಫೋಲ್ಡರ್ ಅವರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇಲ್ಲಿವರೆಗೆ ಜನರು ಅಂದುಕೊಂಡಿದ್ದ ತಪ್ಪು ಎನ್ನುತ್ತಾ ಈ ವರ್ಣಚಿತ್ರದ ಸತ್ಯವನ್ನು ಎಲ್ಲರ ಮುಂದೆ ತಂದಿದ್ದಾರೆ. ಪೇಂಟಿಂಗ್‌ ನಲ್ಲಿ ಕಂಡುಬರುವ ಮಹಿಳೆ ಪ್ರಾರ್ಥನಾ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಅದು ಸ್ಮಾರ್ಟ್‌ಫೋನ್‌ ನಂತೆ ಕಾಣುತ್ತದೆ. ನಿಸ್ಸಂಶಯವಾಗಿ ಇಂದಿನ ಯುಗದಲ್ಲಿ ಆ ವರ್ಣಚಿತ್ರವನ್ನು ನೋಡುವ ಯಾರಾದರೂ ಹಾಗೆಯೇ ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ವಾಸ್ತವದಲ್ಲಿ ಮಹಿಳೆಯ ಕೈಯಲ್ಲಿ ಕಾಣುವ ವಸ್ತುವು ಪ್ರಾರ್ಥನೆ ಪುಸ್ತಕವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.