IPL ಮಧ್ಯೆಯೇ ಈ ಆಟಗಾರನಿಗೆ ಗಂಭೀರ ಗಾಯ! ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ

Punjab Kings vs Lucknow Super Giants: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ನ ಅತ್ಯುತ್ತಮ ಆಲ್‌ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಗಾಯಗೊಂಡಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ಬೆರಳಿನ ಗಾಯದಿಂದ ಮೈದಾನದಿಂದ ಹೊರಗುಳಿದಿದ್ದರು. ಅಷ್ಟೇ ಅಲ್ಲದೆ ಇಡೀ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇನ್ನು ಪಂದ್ಯ ಮುಗಿದ ನಂತರ, ಅವರ ಗಾಯಕ್ಕೆ ಸಂಬಂಧಿಸಿದ ಅಪ್ಡೇಟ್ ಮುನ್ನೆಲೆಗೆ ಬಂದಿದೆ.

Written by - Bhavishya Shetty | Last Updated : Apr 29, 2023, 01:32 PM IST
    • ಲಕ್ನೋ ಸೂಪರ್ ಜೈಂಟ್ಸ್ ತಂಡದ ಬಿಗ್ ಮ್ಯಾಚ್ ವಿನ್ನರ್ ಆಟಗಾರ ಗಾಯಗೊಂಡಿದ್ದಾರೆ
    • ಮಾರ್ಕಸ್ ಸ್ಟೊಯಿನಿಸ್ ಬೆರಳಿನ ಗಾಯದಿಂದ ಮೈದಾನದಿಂದ ಹೊರಗುಳಿದಿದ್ದರು.
    • ಗಾಯಕ್ಕೆ ಸಂಬಂಧಿಸಿದ ಅಪ್ಡೇಟ್ ಮುನ್ನೆಲೆಗೆ ಬಂದಿದೆ.
IPL ಮಧ್ಯೆಯೇ ಈ ಆಟಗಾರನಿಗೆ ಗಂಭೀರ ಗಾಯ! ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ title=
Marcus Stoinis

Punjab Kings vs Lucknow Super Giants: ಇಂಡಿಯನ್ ಪ್ರೀಮಿಯರ್ ಲೀಗ್ 2023ರ 38 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (PBKS vs LSG) ನಡುವೆ ನಡೆಯಿತು. ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗೆಲುವು ಸಾಧಿಸಿದೆ. ಆದರೆ ಈ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬಿಗ್ ಮ್ಯಾಚ್ ವಿನ್ನರ್ ಆಟಗಾರ ಗಾಯಗೊಂಡಿದ್ದಾರೆ. ಇದೀಗ ಈ ಆಟಗಾರನ ಗಾಯದ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದ್ದು, ಮುಂಬರುವ ಪಂದ್ಯಗಳಿಂದ ಆತ ಔಟ್ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: IPLನ ಈ ತಂಡಕ್ಕೆ ಹೊರೆಯಾದ ಟೀಂ ಇಂಡಿಯಾದ ಸ್ಟಾರ್ ಆಟಗಾರ: ತಂಡದಿಂದ ಒತ್ತಾಯವಾಗಿ ಹೊರಹಾಕಲ್ಪಟ್ಟರೇ?

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ನ ಅತ್ಯುತ್ತಮ ಆಲ್‌ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಗಾಯಗೊಂಡಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ಬೆರಳಿನ ಗಾಯದಿಂದ ಮೈದಾನದಿಂದ ಹೊರಗುಳಿದಿದ್ದರು. ಅಷ್ಟೇ ಅಲ್ಲದೆ ಇಡೀ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇನ್ನು ಪಂದ್ಯ ಮುಗಿದ ನಂತರ, ಅವರ ಗಾಯಕ್ಕೆ ಸಂಬಂಧಿಸಿದ ಅಪ್ಡೇಟ್ ಮುನ್ನೆಲೆಗೆ ಬಂದಿದೆ.

ಪಂದ್ಯ ಅಂತ್ಯದ ನಂತರ ಮಾತನಾಡಿದ ಮಾರ್ಕಸ್ ಸ್ಟೊಯಿನಿಸ್, “ಕೊಂಚ ಸುಧಾರಣೆ ಕಂಡಿದೆ. ಆದರೆ ಈ ಗಾಯದ ಸ್ಥಿತಿ ಹೇಗಿದೆ ಎಂಬುದನ್ನು ನಿಖರವಾಗಿ ಕಂಡುಹಿಡಿಯಲು ಸ್ಕ್ಯಾನ್ ಮಾಡಲಾಗುತ್ತದೆ'. ಸ್ಕ್ಯಾನ್ ಮಾಡಿದ ನಂತರ ಮೂಳೆ ಮುರಿತವಾಗಿದೆಯೇ ಎಂಬುದು ತಿಳಿಯುತ್ತದೆ, ಇಂದು ವೇಳೆ ಮುರಿದಿದ್ದರೆ, ಕೆಲವು ದಿನಗಳವರೆಗೆ IPL 2023 ರಿಂದ ಹೊರಗುಳಿಯಬೇಕಾಗಬಹುದು” ಎಂದು ಹೇಳಿದರು.

ಪಂಜಾಬ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಮಾರ್ಕಸ್ ಸ್ಟೊಯಿನಿಸ್ ಅದ್ಭುತ ಪ್ರದರ್ಶನ ನೀಡಿದ್ದರು. ಲಕ್ನೋ ಸೂಪರ್ ಜೈಂಟ್ಸ್ ಪರ ಮೊದಲು ಬ್ಯಾಟಿಂಗ್ ಮಾಡಿದ ಸ್ಟೊಯಿನಿಸ್ 40 ಎಸೆತಗಳಲ್ಲಿ 72 ರನ್ ಗಳಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ತಮ್ಮ ಅತ್ಯಧಿಕ ಸ್ಕೋರ್ ಗಳಿಸಿದರು. ಈ ಇನ್ನಿಂಗ್ಸ್‌ ನಲ್ಲಿ ಮಾರ್ಕಸ್ ಸ್ಟೊಯಿನಿಸ್ ಅವರ ಬ್ಯಾಟ್‌ನಿಂದ 6 ಬೌಂಡರಿ ಮತ್ತು 5 ಸಿಕ್ಸರ್‌ ಗಳು ಹೊರಬಂದಿವೆ. ಇನ್ನೊಂದೆಡೆ, ಸ್ಟೊಯಿನಿಸ್ ಪಂದ್ಯದಲ್ಲಿ 1.5 ಓವರ್ ಬೌಲ್ ಮಾಡಿದರು. 21 ರನ್ ನೀಡುವಾಗ ಶಿಖರ್ ಧವನ್ ಅವರ ಅಮೂಲ್ಯವಾದ ವಿಕೆಟ್ ಪಡೆದರು.

ಇದನ್ನೂ ಓದಿ: PBKS vs LSG: 16 ಸೀಸನ್’ಗಳಲ್ಲಿ ಇದೇ ಮೊದಲ ಬಾರಿಗೆ…! ಅಪರೂಪದ ದಾಖಲೆಗೆ ಸಾಕ್ಷಿಯಾದ IPL 2023

ಲಕ್ನೋ ಸೂಪರ್ ಜೈಂಟ್ಸ್‌ ಗೆ ದೊಡ್ಡ ಗೆಲುವು:

ಮೊಹಾಲಿಯ ಐಎಸ್ ಬಿದ್ರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 5 ವಿಕೆಟ್‌ ಗೆ 257 ರನ್‌ ಗಳ ಬೃಹತ್ ಮೊತ್ತ ಕಲೆಹಾಕಿತು. ಇದಾದ ಬಳಿಕ ಪಂಜಾಬ್ ತಂಡವನ್ನು 19.5 ಓವರ್‌ ಗಳಲ್ಲಿ 201 ರನ್‌ ಗಳಿಗೆ ಇಳಿಸಲಾಯಿತು. ಕೆ ಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡವು 10 ಅಂಕಗಳನ್ನು ನೀಡುವ ಮೂಲಕ ಋತುವಿನಲ್ಲಿ ತನ್ನ 5 ನೇ ಗೆಲುವು ದಾಖಲಿಸಿತು. ಅದೇ ಸಮಯದಲ್ಲಿ, ಪಂಜಾಬ್ ಕಿಂಗ್ಸ್ ಈ ಋತುವಿನ ನಾಲ್ಕನೇ ಸೋಲನ್ನು ಎದುರಿಸಬೇಕಾಯಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News