2023ರ ತನ್ನ ನಿಯಂತ್ರಕ ಕಾರ್ಯಸೂಚಿಯ ಭಾಗವಾಗಿ ಎಚ್‌-1ಬಿ ವೀಸಾ ಕಾರ್ಯವನ್ನು ಆಧುನೀಕರಿಸಲು ಯುನೈಟೆಡ್‌ ಸ್ಟೇಟ್ಸ್‌ ಉದ್ದೇಶಿಸಿದೆ. ಇದು ಭಾರತೀಯ ಅರ್ಜಿದಾರರಿಗೆ ಸಹಾಯಕವಾಗಲಿದೆ ಎನ್ನಬಹುದು. ಎಚ್‌-1ಬಿ ವಲಸೆಯೇತರ ವೀಸಾದಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಸ್ಟಾರ್ಟ್‌ಅಪ್‌ಗಳಿಗೆ ಸುಲಭವಾಗುವಂತಹ ಬದಲಾವಣೆಗಳನ್ನು ಪರಿಚಯಿಸಲು ಇದು ಸಹಕಾರಿಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದನೇ ದುಬೈ ಮೂಲದ ಎನ್‌ಆರ್‌ಐ!


ಜೊತೆಗೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮತ್ತು ಎಚ್‌-1ಬಿ ನೋಂದಣಿಯಲ್ಲಿ ವಂಚನೆ ಅಥವಾ ದುರುಪಯೋಗದ ಸಾಧ್ಯತೆಯನ್ನು ಕಡಿಮೆ ಮಾಡುವ ಕೆಲವು ಇತರ ನಿಯಮಗಳನ್ನು ಇದು ಪರಿಷ್ಕರಿಸುತ್ತದೆ.


ಸ್ಪ್ರಿಂಗ್ ಅಜೆಂಡಾದ ಭಾಗವಾಗಿ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಮಂಡಿಸಿದ ಪ್ರಸ್ತಾಪಗಳ ಭಾಗದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಏಕೀಕೃತ ಕಾರ್ಯಸೂಚಿಯು ದ್ವಿ-ವಾರ್ಷಿಕ ನಿಯಂತ್ರಕ ಕಾರ್ಯಸೂಚಿಯಾಗಿದ್ದು ಅದು ವಿವಿಧ ಏಜೆನ್ಸಿಗಳಾದ್ಯಂತ ಯೋಜಿತ ಫೆಡರಲ್ ನಿಯಮ ರಚನೆಯ ಮಾರ್ಗಸೂಚಿಯನ್ನು ತಿಳಿಸುತ್ತದೆ.


'ಉದ್ಯೋಗದಾತ ಮತ್ತುಉದ್ಯೋಗಿ ಸಂಬಂಧಕ್ಕೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಲು ಮತ್ತು H-1B ಅವಲಂಬಿತ ಉದ್ಯೋಗದಾತರು ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಸೈಟ್ ಭೇಟಿಗಳಿಗೆ ಹೊಸ ಅವಶ್ಯಕತೆಗಳು ಮತ್ತು ಮಾರ್ಗಸೂಚಿಗಳನ್ನು ಜಾರಿಗೆ ತರಲು ಉದ್ದೇಶಿಸಿದೆ ಎಂದು ಡಿಎಚ್‌ಎಸ್‌ (Department Of Homeland Security) ಹೇಳಿದೆ. 


ಇದನ್ನೂ ಓದಿ: ಕೆನಡಾದಲ್ಲಿ ಸೋಶಿಯಲ್‌ ಮೀಡಿಯಾ ಗ್ರೂಪ್‌ ರಚಿಸಿದ NRI: ಉದ್ದೇಶ ಕೇಳಿದ್ರೆ ಶಾಕ್‌ ಆಗ್ತೀರಾ!


ವೀಸಾ ಹೊಂದಿರುವ ವಲಸಿಗರಲ್ಲದ ಜನರು ಶಾಶ್ವತ ನಿವಾಸ (ಗ್ರೀನ್‌ ಕಾರ್ಡ್‌) ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸುವಾಗ ನಡೆಸುವ ಪ್ರಕ್ರಿಯೆಯಲ್ಲಿ ದಕ್ಷತೆಯನ್ನು ಸುಧಾರಿಸಲು ತನ್ನ ನಿಯಮಗಳಲ್ಲಿ ತಿದ್ದುಪಡಿ ತರಲು ತೀರ್ಮಾನಿಸಿದೆ ಎಂದು ಡಿಎಚ್‌ಎಸ್‌ನ ಮತ್ತೊಂದು ಪ್ರಸ್ತಾವನೆಯಲ್ಲಿ ತಿಳಿಸಿದೆ. ಇವಿಷ್ಟೇ ಅಲ್ಲದೆ, ಕಡಿಮೆ ಸಂಸ್ಕರಣಾ ಸಮಯವನ್ನು ತೆಗೆದುಕೊಳ್ಳುವಂತೆ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.