NRI woman goes skiing wearing a saree: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊ ಸಖತ್ ಟ್ರೆಂಡಿಂಗ್ ಆಗಿದೆ. ಇದರಲ್ಲಿ ಮಹಿಳೆಯೊಬ್ಬರು ಸೀರೆಯನ್ನು ಉಟ್ಟು, ಹಿಮದಿಂದ ಆವೃತವಾದ ಪರ್ವತಗಳಲ್ಲಿ ಸ್ಕೀಯಿಂಗ್ ಮಾಡುತ್ತಿರುವುದನ್ನು ನೋಡಬಹುದು. ಇದನ್ನು ನೋಡಿದಾಗ ಅಸಾಧಾರಣ ವಿಡಿಯೋ ಎಂದನಿಸದೆ ಇರದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ..? ಮಧುಮೇಹಕ್ಕೆ ಉತ್ತಮ, ಆರೋಗ್ಯಕ್ಕೆ ಒಳ್ಳೆಯದು 


ಈ ಮಹಿಳೆ ‘ಸಾಥ್’ ಎಂಬ ಸಂಸ್ಥೆಯ ಸಿಇಒ ದಿವ್ಯಾ ಮಯ್ಯಾ. ಹಿಮ ತುಂಬಿದ ಪರ್ವತಗಳಲ್ಲಿ ಸ್ಕೀಯಿಂಗ್ ಮಾಡುತ್ತಿರುವ ದಿವ್ಯಾ ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದಾರೆ. ಏಪ್ರಿಲ್ 11 ರಂದು Instagram ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು ಈಗಾಗಲೇ ಸುಮಾರು 2 ಮಿಲಿಯನ್ ಮಂದಿ ನೋಡಿದ್ದಾರೆ.


“ಚಳಿಗಾಲ ಕೊನೆಯಾಗುತ್ತಿದೆ. ಈ ಸೀಸನ್ ನಲ್ಲಿ ನನನ್ನು ಬೆಂಬಲಿಸಿದ ಮತ್ತು ನನ್ನನ್ನು ಹುರಿದುಂಬಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅಲ್ಲದೆ, ನಾನು ಈ ರೀತಿಯ ಸೀರೆಯಲ್ಲಿ ಸ್ಕೀಯಿಂಗ್ ಮಾಡುವುದನ್ನು ನೋಡಲು ಬಯಸಿದ ವ್ಯಕ್ತಿಗೆ ಇದು ಸಮರ್ಪಣೆ. ಇದು ನಿನಗಾಗಿ” ಎಂದು ಹೇಳಿದ್ದಾರೆ.


 

 

 

 



 

 

 

 

 

 

 

 

 

 

 

A post shared by Divya Maiya (@divyamaiya)


 


“ಇದು ನನಗೆ ತುಂಬಾ ಸ್ಫೂರ್ತಿದಾಯಕವಾಗಿದೆ. ಒಬ್ಬ ಕ್ರೀಡಾಪಟು ಮತ್ತು ನರ್ತಕಿಯಾಗಿ, ಈ ಎರಡು ಪ್ರಪಂಚಗಳು ಒಟ್ಟಿಗೆ ಸೇರುತ್ತಿರುವಂತೆ ಭಾಸವಾಗುತ್ತಿದೆ” ಎಂದು ವೀಡಿಯೊ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.


ಸದ್ಯ ಇಂಟರ್ನೆಟ್ ಪೂರ ಈ ವಿಡಿಯೋ ಆವರಿಸಿಕೊಂಡಿದೆ. ಗಟ್ಟಿಗಿತ್ತಿ ಹೆಣ್ಣಿನ ಪರಾಕ್ರಮ ಎಂತಹದ್ದು ಎಂದು ನೀವು ತಿಳಿಸಿದ್ದೀರ ಎಂದೆಲ್ಲಾ ಕಮೆಂಟ್ ಮಾಡಿತ್ತಿದ್ದಾರೆ. ಕೆಲವರು ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿ, ಇಂತಹ ಸಾಹಸ ನಿಮ್ಮಿಂದ ಸಾಧ್ಯವೇ ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.


ಇದನ್ನೂ ಓದಿ: Karnataka Rain Update: ಮುಂದಿನ 3 ದಿನ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಯಾವ್ಯಾವ ಜಿಲ್ಲೆಯಲ್ಲಿದೆ ವರ್ಷಧಾರೆ?


<https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.