ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡುವಾಗ ಅರೆಕಾಲಿಕ ಉದ್ಯೋಗಗಳನ್ನು ಮಾಡಲು ಬಯಸುವ ವಿದೇಶಿ ವಿದ್ಯಾರ್ಥಿಗಳು ಕೆಲವು ನಿಯಮಗಳನ್ನು ಅನುಸರಿಸಬೇಕು. ಆಸ್ಟ್ರೇಲಿಯಾದಲ್ಲಿ ಶಿಕ್ಷಣದ ವೆಚ್ಚವು ಅಮೆರಿಕಕ್ಕಿಂತ ಸ್ವಲ್ಪ ಕಡಿಮೆಯಾದರೂ, ಅಲ್ಲಿ ಜೀವನ ವೆಚ್ಚವು ತುಂಬಾ ಹೆಚ್ಚಾಗಿದೆ. ಹಾಗಾಗಿ, ಕೆಲವೊಮ್ಮೆ ಸಂಪಾದನೆಯ ದಾರಿ ಹುಡುಕಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮತ್ತು ಈ ರೀತಿಯ ಅರೆಕಾಲಿಕ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿರುವವರು ನೆನಪಿಡುವ ಕೆಲವು ಪ್ರಮುಖ ನಿಯಮಗಳು ಇಲ್ಲಿವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಉಳಿತಾಯ ಖಾತೆಯನ್ನು NRE ಖಾತೆಗೆ ಪರಿವರ್ತಿಸಬಹುದೇ? ಇಲ್ಲಿದೆ ಮಹತ್ವದ ಮಾಹಿತಿ


ಆಸ್ಟ್ರೇಲಿಯಾದಲ್ಲಿ ತರಗತಿಗಳು ಪ್ರಾರಂಭವಾಗುವ ಮೊದಲು ವಿದೇಶಿ ವಿದ್ಯಾರ್ಥಿಗಳಿಗೆ ಅರೆಕಾಲಿಕ ಉದ್ಯೋಗಗಳನ್ನು ಮಾಡಲು ಅನುಮತಿಸಲಾಗುವುದಿಲ್ಲ. ಕೆಲಸವು ವಿದ್ಯಾರ್ಥಿಯ ಪಠ್ಯಕ್ರಮ ಅಥವಾ ಕೋರ್ಸ್‌ ಗೆ ಸಮಸ್ಯೆ ಮಾಡುತ್ತವೆ ಎಂದು ಈ ನಿರ್ಧಾರ ಕೈಗೊಳ್ಳಲಾಗುತ್ತದೆ.


ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಹದಿನೈದು ದಿನಗಳಲ್ಲಿ 40 ಗಂಟೆ ಮೀರದಂತೆ ಕೆಲಸ ಮಾಡಬಹುದು. ಇದು ಅರೆಕಾಲಿಕ ಕೆಲಸ ಎಂದು ಪರಿಗಣಿಸಲ್ಪಟ್ಟಿದೆ. ಮೊದಲ ವಾರದಲ್ಲಿ 10 ಗಂಟೆಗಳು ಮತ್ತು ಎರಡನೇ ವಾರದಲ್ಲಿ 30 ಗಂಟೆಗಳು ಅಥವಾ 40 ಗಂಟೆಗಳನ್ನು ಮೀರದ ಕೆಲಸವಾಗಿರಬಹುದು. ಒಂದು ವೇಳೆ 40 ಗಂಟೆ ಮೀರಿ ಕೆಲಸ ಮಾಡಿದರೆ ನಿಯಮ ಉಲ್ಲಂಘನೆಯ ಆರೋಪದಲ್ಲಿ ವೀಸಾ ರದ್ದತಿ ಮಾಡಬಹುದು.


ಆದರೆ ರಜಾ ದಿನಗಳಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರೆ ಈ 40 ಗಂಟೆಗಳ ನಿಯಮ ಅನ್ವಯವಾಗುವುದಿಲ್ಲ.


ಸ್ನಾತಕೋತ್ತರ ಪದವಿ ಅಥವಾ ಸಂಶೋಧನಾ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು ಥೀಸಿಸ್ ಕೆಲಸ ಇತ್ಯಾದಿಗಳ ನಂತರ ಅವರು ಇಷ್ಟಪಡುವವರೆಗೆ ಅರೆಕಾಲಿಕ ಉದ್ಯೋಗಗಳನ್ನು ಮಾಡಬಹುದು. 40 ಗಂಟೆಗಳ ನಿಯಮ ಅವರಿಗೂ ಅನ್ವಯಿಸುವುದಿಲ್ಲ.


ಇದನ್ನೂ ಓದಿ: ನ್ಯೂಯಾರ್ಕ್ ಕನ್ನಡ ಕೂಟದಲ್ಲಿ ಸಚಿವ ನಿರಾಣಿ ಭಾಗಿ: ಉತ್ತರ ಕರ್ನಾಟಕ ಸಂಘದ ಪೋಸ್ಟರ್ ಬಿಡುಗಡೆ


ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದವರು ವರ್ಡ್ ಸ್ಟಡಿ ಪರ್ಮಿಟ್ ಅನುಮತಿಯನ್ನು ಪಡೆದ ನಂತರ ಅವರು ಬಯಸಿದ ಅರೆಕಾಲಿಕ ಉದ್ಯೋಗಗಳನ್ನು ಮಾಡಬಹುದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.