NRIಗಳಿಗೆ ಸಿಹಿಸುದ್ದಿ: ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ನೋಡಲ್ ಅಧಿಕಾರಿ ನೇಮಿಸಿದ ಸರ್ಕಾರ

ವಿವರಗಳನ್ನು ತಿಳಿಸಿದ ಮುಖ್ಯಮಂತ್ರಿ, ಆಮ್ ಆದ್ಮಿ ಸರ್ಕಾರ ರಚನೆಯಾದ ನಂತರ ಸಹಾಯಕ ಆಯುಕ್ತರ (ಕುಂದುಕೊರತೆಗಳು) ಸಮಾನ ಸಂಖ್ಯೆಯ ಹುದ್ದೆಗಳನ್ನು ರದ್ದುಗೊಳಿಸಿ, ಬಳಿಕ ಮುಖ್ಯಮಂತ್ರಿ ಕ್ಷೇತ್ರಾಧಿಕಾರಿಗಳ 23 ಹುದ್ದೆಗಳನ್ನು ರಚಿಸಲಾಗಿದೆ ಎಂದು ಹೇಳಿದರು.

Written by - Bhavishya Shetty | Last Updated : Sep 2, 2022, 04:24 PM IST
    • ಕುಂದುಕೊರತೆಗಳನ್ನು ತ್ವರಿತವಾಗಿ ಮತ್ತು ಸಮಯಕ್ಕೆ ಅನುಗುಣವಾಗಿ ಪರಿಹರಿಸಲು ನೂತನ ಯೋಜನೆ
    • ಎನ್‌ಆರ್‌ಐಗಳಿಗೆ ನೋಡಲ್ ಅಧಿಕಾರಿ ನೇಮಕ ಮಾಡಿದ ಪಂಜಾಬ್ ಸರ್ಕಾರ
    • ಮುಖ್ಯಮಂತ್ರಿ ಕ್ಷೇತ್ರಾಧಿಕಾರಿಗಳ 23 ಹುದ್ದೆಗಳನ್ನು ರಚಿಸಲಾಗಿದೆ ಎಂದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್
NRIಗಳಿಗೆ ಸಿಹಿಸುದ್ದಿ: ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ನೋಡಲ್ ಅಧಿಕಾರಿ ನೇಮಿಸಿದ ಸರ್ಕಾರ title=
NRI news

ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಪ್ರಮುಖ ಪರಿಹಾರವಾಗಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಕುಂದುಕೊರತೆಗಳನ್ನು ತ್ವರಿತವಾಗಿ ಮತ್ತು ಸಮಯಕ್ಕೆ ಅನುಗುಣವಾಗಿ ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳಲು ಎನ್‌ಆರ್‌ಐಗಳಿಗೆ ಮುಖ್ಯಮಂತ್ರಿ ಕ್ಷೇತ್ರಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲು ನಿರ್ಧರಿಸಿದ್ದಾರೆ.

ವಿವರಗಳನ್ನು ತಿಳಿಸಿದ ಮುಖ್ಯಮಂತ್ರಿ, ಆಮ್ ಆದ್ಮಿ ಸರ್ಕಾರ ರಚನೆಯಾದ ನಂತರ ಸಹಾಯಕ ಆಯುಕ್ತರ (ಕುಂದುಕೊರತೆಗಳು) ಸಮಾನ ಸಂಖ್ಯೆಯ ಹುದ್ದೆಗಳನ್ನು ರದ್ದುಗೊಳಿಸಿ, ಬಳಿಕ ಮುಖ್ಯಮಂತ್ರಿ ಕ್ಷೇತ್ರಾಧಿಕಾರಿಗಳ 23 ಹುದ್ದೆಗಳನ್ನು ರಚಿಸಲಾಗಿದೆ ಎಂದು ಹೇಳಿದರು. 

ಇದನ್ನೂ ಓದಿ: ಭಾರತ-ಯುಎಇ ವಿಮಾನ ದರ ಹೆಚ್ಚಳಕ್ಕೆ ಆಕ್ರೋಶ: ಕೇಸ್ ದಾಖಲಿಸಿದ NRI ಅಸೋಸಿಯೇಶನ್

ರಾಜ್ಯದ ನಿವಾಸಿಗಳಿಗೆ ಉತ್ತಮ ರಚನಾತ್ಮಕ ಮತ್ತು ಅಧಿಕಾರಯುತ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಒದಗಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ಅವರ ಕುಂದುಕೊರತೆಗಳನ್ನು ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ಪ್ರತಿಪಾದಿಸಿದರು.

ಭಗವಂತ್ ಮಾನ್ ಅವರು ಮತ್ತೊಂದು ಮಹತ್ವದ ನಿರ್ಧಾರದಲ್ಲಿ ಅನಿವಾಸಿ ಭಾರತೀಯರಿಗೆ ಅವರ ಕುಂದುಕೊರತೆಗಳ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿ ಕ್ಷೇತ್ರಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಬಹಿರಂಗಪಡಿಸಿದರು.

ಈ ಅಧಿಕಾರಿಗಳು ಸಿಎಂ ಕಚೇರಿಯೊಂದಿಗೆ ನೇರ ಸಂವಹನ ನಡೆಸುವುದರ ಜೊತೆಗೆ ಇಲಾಖೆಗಳು ಮತ್ತು ಜಿಲ್ಲೆಗಳಲ್ಲಿ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸಲು ಸಹಾಯ ಮಾಡುತ್ತಾರೆ. ರಾಜ್ಯ ಸರ್ಕಾರದ ಈ ಔಟ್ ಆಫ್ ಬಾಕ್ಸ್ ಉಪಕ್ರಮವು ವಿದೇಶದಲ್ಲಿ ನೆಲೆಸಿರುವ ಪಂಜಾಬಿಗಳಿಗೆ ವರದಾನವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಖಾಸಗಿ ಬ್ಯಾಂಕ್ ಗಳಲ್ಲಿಯೇ NRIಗಳು ಹೂಡಿಕೆ ಮಾಡಲು ಕಾರಣವೇನು? ಇಲ್ಲಿದೆ ನೋಡಿ ಉತ್ತರ

ಇದೀಗ ಎನ್‌ಆರ್‌ಐಗಳು ತಮ್ಮ ಎಲ್ಲಾ ಸಮಸ್ಯೆಗಳನ್ನು ಸುಗಮವಾಗಿ ಮತ್ತು ಸಮಸ್ಯೆ ಮುಕ್ತ ರೀತಿಯಲ್ಲಿ ಪರಿಹರಿಸಲು ಒಂದೇ ಪಾಯಿಂಟ್ ಸಂಪರ್ಕವನ್ನು ಪಡೆಯುತ್ತಾರೆ ಎಂದು ಭಗವಂತ್ ಮಾನ್ ಹೇಳಿದರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News