1,50,000 ಕೋಟಿ ಮೌಲ್ಯದ ಸಾಮ್ರಾಜ್ಯದ ಒಡೆಯ !ಆದರೂ ಮೊಬೈಲ್, ಬಂಗಲೆ, ಕಾರು ಬಳಸುವುದೇ ಇಲ್ಲ!ಕೋಟ್ಯಾಧಿಪತಿ ಉದ್ಯಮಿಯ ಸರಳ ಜೀವನ ಇದು
ಹಣದ ಜೊತೆಗೆ ಆಡಂಬರವೂ ಬರುವುದು ಸಾಮಾನ್ಯ. ಹಣ ಬಂದ ತಕ್ಷಣ ಜನರು ದುಬಾರಿ ವಸ್ತುಗಳನ್ನು ಖರೀದಿಸುವ ಮತ್ತು ಬಳಸುವ ಚಟಕ್ಕೆ ಬೀಳುತ್ತಾರೆ. ಕೆಲವರು ಇದನ್ನು ಸ್ಟೇಟಸ್ ಸಿಂಬಲ್ ಎಂದು ಪರಿಗಣಿಸುವುದೂ ಇದೆ. ಆದರೆ ಈ ಬಿಸ್ ನೆಸ್ ಮ್ಯಾನ್ ಮಾತ್ರ ಇವೆಲ್ಲದ್ದಕ್ಕೂ ತದ್ವಿರುದ್ದ.
ಈ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ತುಂಬಾ ಹಣವಿದೆ.ಅದನ್ನು ಖರ್ಚು ಮಾಡಲು ವರ್ಷಗಳೇ ಬೇಕಾಗಬಹುದು. ಆದರೆ ಆಡಂಬರದ ಬದುಕಿನಿಂದ ಇವರು ದೂರ. 1.50 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವ ಈ ವ್ಯಕ್ತಿ ಮೊಬೈಲ್ ಐಷಾರಾಮಿ ಕಾರು, ಐಷಾರಾಮಿ ಬಂಗಲೆ ಬಳಸುವುದೇ ಇಲ್ಲ.
ನಾವು ಹೇಳುತ್ತಿರುವ ವ್ಯಕ್ತಿ ಶ್ರೀರಾಮ್ ಗ್ರೂಪ್ ಸಂಸ್ಥಾಪಕ ರಾಮಮೂರ್ತಿ ತ್ಯಾಗರಾಜನ್. ಸಾಮಾನ್ಯ ಕುಟುಂಬದಿಂದ ಬಂದ ರಾಮಮೂರ್ತಿ ಜನರ ಅಗತ್ಯಗಳನ್ನು ಪರಿಗಣಿಸಿ 1960ರಲ್ಲಿ ಸಣ್ಣ ಚಿಟ್ ಫಂಡ್ ಕಂಪನಿಯನ್ನು ಪ್ರಾರಂಭಿಸಿದರು.ಕೆಲವೇ ವರ್ಷಗಳಲ್ಲಿ,ಈ ಕಂಪನಿಯು ಬೃಹತ್ ಹಣಕಾಸು ಸಂಸ್ಥೆಯಾಗಿ ಬೆಳೆಯಿತು.
ಬ್ಯಾಂಕ್‌ಗಳು ಸಾಲ ನೀಡದವರಿಗೆ ಸಾಲ ನೀಡುವ ನಿರ್ಧಾರ ಮಾಡಿ ಶ್ರೀರಾಮ್ ಗ್ರೂಪ್ ಆರಂಭಿಸಿದರು.ಇಲ್ಲಿಕಡಿಮೆ ಆದಾಯ ಇರುವವರಿಗೆ ಸಾಲ ನೀಡಲಾಗುತ್ತದೆ.
ಕೋಟಿಗಟ್ಟಲೆ ಆಸ್ತಿ ಇದ್ದರೂ ಮೊಬೈಲ್ ಬಳಸುವುದಿಲ್ಲ.ದುಬಾರಿ ಆಸ್ತಿ ಮಾಡಿಟ್ಟುಕೊಳ್ಳುವುದರಲ್ಲಿ ನಂಬಿಕೆಯಿಲ್ಲ. ಹಾಗಾಗಿ ಇವರ ಬಳಿ ಐಷಾರಾಮಿ ಮನೆ ಇಲ್ಲ. ಐಷಾರಾಮಿ ಕಾರುಗಳೂ ಇಲ್ಲ. 6 ಲಕ್ಷ ಮೌಲ್ಯದ ಸಣ್ಣ ಕಾರಿನಲ್ಲಿ ಪ್ರಯಾಣಿಸುತ್ತಾರೆ.
ಕೋಟ್ಯಾಧಿಪತಿಯಾಗಿದ್ದರೂ,ಸರಳವಾದ ಬಟ್ಟೆಗಳನ್ನು ಧರಿಸುತ್ತಾರೆ. ತನ್ನನ್ನು ವಿಲಾಸೀ ಜೀವನದಿಂದ ದೂರವೇ ಇಟ್ಟುಕೊಂಡಿದ್ದಾರೆ.ಸಂಪತ್ತಿನ ಮದ ತನ್ನ ತಲೆಗೆ ಏರದಂತೆ ಕಾಯ್ದುಕೊಂಡಿದ್ದಾರೆ.
ರಾಮಮೂರ್ತಿ ತ್ಯಾಗರಾಜನ್ ಅವರು ತನಗಾಗಿ ಖರ್ಚು ಮಾಡುವುದರಲ್ಲಿ ಬಹಳ ಹಿಂದೆ. ಆದರೆ ಅವರು ದಾನ ಮತ್ತು ಇತರರಿಗೆ ಸಹಾಯ ಮಾಡುವಲ್ಲಿ ಅವರು ಮೊದಲಿಗರು.750 ಮಿಲಿಯನ್ ಡಾಲರ್ ಮೌಲ್ಯದ ಕಂಪನಿಯಲ್ಲಿನ ತಮ್ಮ ಪಾಲನ್ನು ಮಾರಾಟ ಮಾಡಿ, ಆ ಹಣವನ್ನು ದಾನ ಮಾಡಿದ್ದಾರೆ.