ಖ್ಯಾತ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಆರಂಧತಿ ರಾಯ್ ಗೆ 2024ರ PEN ಪಿಂಟರ್ ಪ್ರಶಸ್ತಿ
ಖ್ಯಾತ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಆರಂಧತಿ ರಾಯ್ ಗೆ 2024ರ PEN ಪಿಂಟರ್ ಪ್ರಶಸ್ತಿ ಗೆ ಭಾಜನರಾಗಿದ್ದಾರೆ
ಇಂಗ್ಲಿಷ್ ಪೆನ್ 2009 ರಲ್ಲಿ ಸ್ಥಾಪಿಸಿದ ನೆನಪಿಗಾಗಿ ಯುನೈಟೆಡ್ ಕಿಂಗ್‌ಡಮ್, ರಿಪಬ್ಲಿಕ್ ಆಫ್ ಐರ್ಲೆಂಡ್ ಅಥವಾ ಕಾಮನ್‌ವೆಲ್ತ್‌ನಲ್ಲಿ ವಾಸಿಸುವ ಅತ್ಯುತ್ತಮ ಬರಹಗಾರರಿಗೆ ಪ್ರತಿ ವರ್ಷವು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇಂಗ್ಲಿಷ್ PEN ಅಧ್ಯಕ್ಷ ರುತ್ ಬೋರ್ಥ್ವಿಕ್, ನಟ ಖಾಲಿದ್ ಅಬ್ದಲ್ಲಾ ಮತ್ತು ಬರಹಗಾರ ರೋಜರ್ ರಾಬಿನ್ಸನ್ ಈ ವರ್ಷದ ತೀರ್ಪುಗಾರರಾಗಿದ್ದರು.
ನೊಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ನೆನಪಿಗಾಗಿ ಇಂಗ್ಲಿಷ್ PEN 2009 ರಲ್ಲಿ ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿ ಪ್ರತಿ ವರ್ಷವೂ ಇದನ್ನು ನೀಡಲಾಗುತ್ತದೆ.
ಅಕ್ಟೋಬರ್ 10 ರಂದು ಬ್ರಿಟಿಷ್ ಲೈಬ್ರರಿ ಹೋಸ್ಟ್ ಮಾಡುವ ಸಮಾರಂಭದಲ್ಲಿ ಅವರು PEN ಪಿಂಟರ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ತಮ್ಮ ಕಾದಂಬರಿ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್‌ಗೆ ಹೆಚ್ಚು ಹೆಸರುವಾಸಿಯಾಗಿದ್ದು, 1997 ರಲ್ಲಿ ಈ ಕಾದಂಬರಿಗಾಗಿ ಬೂಕರ್ ಪ್ರಶಸ್ತಿಯನ್ನು ಗೆದ್ದರು.