ಇಲ್ಲಿಯವರೆಗೆ ಬರೀ ಕಷ್ಟವನ್ನೇ ನೀಡಿದ ಗ್ರಹಗಳೇ ಬೆಳಗುವರು ಈ ರಾಶಿಯವರ ಬಾಳು !2025 ಇವರ ಪಾಲಿಗೆ ಲಕ್ಕಿ ವರ್ಷ! ಇಂಥ ಅದೃಷ್ಟ ಹಿಂದೆಂದೂ ನೀವು ಕಂಡಿರಲಿಕ್ಕಿಲ್ಲ
ಈ ವರ್ಷ ನಡೆಯುವ ರಾಹು-ಕೇತುಗಳ ಚಲನೆಯು ನಾಲ್ಕು ರಾಶಿಯವರ ಪಾಲಿಗೆ ಸುರ್ವರ್ಣ ದಿನಗಳನ್ನೇ ತರಲಿದೆ.ಇಲ್ಲಿಯವರೆಗೆ ಬರೀಯ ಕಷ್ಟಗಳನ್ನೇ ಕಂಡ ಈ ರಾಶಿಯವರು ಇನ್ನು ಮುಂದೆ ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು.
ಮೇಷ ರಾಶಿ : ರಾಹು-ಕೇತುಗಳ ಪ್ರಭಾವದಿಂದ ಹಠಾತ್ ಆರ್ಥಿಕ ಲಾಭ ಉಂಟಾಗಬಹುದು. ವೃತ್ತಿಜೀವನದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ.ಎದುರಾಗಿದ್ದ ಆರೋಗ್ಯ ಸಮಸ್ಯೆಗಳು ದೂರವಾಗುವುದು.ಬಾಕಿಯಿರುವ ಕೆಲಸಗಳು ಪೂರ್ಣಗೊಳ್ಳಲಿವೆ.
ವೃಶ್ಚಿಕ ರಾಶಿ :ಆಸ್ತಿ ಅಥವಾ ವಾಹನ ಖರೀದಿಸಲು ಅವಕಾಶವಿರುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿರುವ ಜನರು ಬಡ್ತಿಯ ಲಾಭವನ್ನು ಪಡೆಯಬಹುದು. ದೈನಂದಿನ ಆದಾಯದಲ್ಲಿ ಹೆಚ್ಚಳವಾಗಲಿದೆ.
ಮಕರ ರಾಶಿ : ವಿವಾಹಿತರ ದಾಂಪತ್ಯ ಜೀವನವು ಮಧುರವಾಗಿರುತ್ತದೆ. ವ್ಯವಹಾರದಲ್ಲಿ ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಲಾಭ ಹೆಚ್ಚಾಗಬಹುದು. ಆದಾಯ ದ್ವಿಗುಣಗೊಳ್ಳಬಹುದು. ವೃಥಾ ಖರ್ಚು ನಿಯಂತ್ರಣದಲ್ಲಿರುತ್ತದೆ.
ಮೀನ ರಾಶಿ : ಪ್ರಗತಿಗೆ ಹೊಸ ಅವಕಾಶಗಳು ಲಭ್ಯವಾಗುತ್ತವೆ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರುವುದು. ದೀರ್ಘಕಾಲದ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶವಿರುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.