ಸರ್ಕಾರಿ ನೌಕರರ ವೇತದಲ್ಲಿ 44% ಹೆಚ್ಚಳ : ಈ ದಿನ ಸರ್ಕಾರದ ನಿರ್ಧಾರ ಪ್ರಕಟ

Mon, 30 Oct 2023-9:16 am,

ಇತ್ತೀಚಿನ ದಿನಗಳಲ್ಲಿ 8ನೇ ವೇತನ ಆಯೋಗದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲವರ ಪ್ರಕಾರ ಶೀಘ್ರದಲ್ಲೇ  8ನೇ ವೇತನ ಆಯೋಗ ಜಾರಿಗೆ ಬರಲಿದೆ. ಆದರೆ ಇನ್ನು ಕೆಲವ ಪ್ರಕಾರ ಸದ್ಯಕ್ಕೆ ಇದು ಸಾಧ್ಯವಿಲ್ಲ. ಆದರೆ  7ನೇ ವೇತನ ಆಯೋಗದ ಶಿಫಾರಸುಗಳಪ್ರಕಾರ ಸದ್ಯಕ್ಕೆ  ಇಲ್ಲಾ ಎಂದಾದರೂ ಇನ್ನು ಕೆಲವೇ ತಿಂಗಳಲ್ಲಿ ಹೊಸ ವೇತನ ಜಾರಿಯಾಗಬೇಕು. ಹೀಗೆ 8ನೇ ವೇತನ ಆಯೋಗ ಬಂದರೆ ನೌಕರರ ವೇತನದಲ್ಲಿ ಭಾರೀ  ಏರಿಕೆಯಾಗಲಿದೆ.

2024 ರ ಚುನಾವಣೆಯ ನಂತರ ಅದರ ರಚನೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. 8ನೇ ವೇತನ ಆಯೋಗ ಬಂದರೆ 2024ರ ಅಂತ್ಯದ ವೇಳೆಗೆ ರಚನೆಯಾಗಲಿದ್ದು, 2026ರ ವೇಳೆಗೆ ಜಾರಿಯಾಗಲಿದೆ.  

ಆದರೆ, ಮುಂದಿನ ವರ್ಷದ ಆರಂಭದಲ್ಲಿ 8ನೇ ವೇತನ ಆಯೋಗದ ಘೋಷಣೆಯಾಗಲಿದೆ ಎಂದು ಮೂಲವೊಂದು ಹೇಳುತ್ತಿದೆ. ಇದಕ್ಕೆ ಕಾರಣ  ತುಟ್ಟಿಭತ್ಯೆ. ಜನವರಿ 2023 ರಲ್ಲಿ ಡಿಎ ಶೇಕಡಾ 4 ರಷ್ಟು ಹೆಚ್ಚಿಸಿದರೆ, ಒಟ್ಟು ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪುತ್ತದೆ. ಹೀಗಾದರೆ ವೇತನ ಪರಿಷ್ಕರಣೆ ಮಾಡಬೇಕು. ವೇತನವನ್ನು ಪರಿಷ್ಕರಿಸಲು ಹೊಸ ವೇತನ  ಆಯೋಗ ರಚಿಸುವುದು ಅವಶ್ಯಕ.

ಮಾಧ್ಯಮ ವರದಿಗಳ ಪ್ರಕಾರ, 8 ನೇ ವೇತನ ಆಯೋಗದಲ್ಲಿ ಪ್ರತಿ ವರ್ಷ ವೇತನವನ್ನು ಪರಿಷ್ಕರಿಸಬಹುದು. ಪ್ರಸ್ತುತ, ಪ್ರತಿ 10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ. ಕಡಿಮೆ ಸಂಬಳದ ಉದ್ಯೋಗಿಗಳ ಸಂಬಳ ಹೆಚ್ಚಳವನ್ನು ಪ್ರತಿ ವರ್ಷ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ನಿರ್ಧರಿಸಬಹುದು. ಹೆಚ್ಚಿನ ಸಂಬಳದ ಉದ್ಯೋಗಿಗಳಿಗೆ ವೇತನ ಹೆಚ್ಚಳವು 3 ವರ್ಷಗಳ ಮಧ್ಯಂತರದಲ್ಲಿರುತ್ತದೆ. 

ಮಾಧ್ಯಮ ವರದಿಗಳ ಪ್ರಕಾರ, 8ನೇ ವೇತನ ಶ್ರೇಣಿಯಲ್ಲಿ ಉದ್ಯೋಗಿಗಳ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗಬಹುದು. ಅಂದರೆ ನೌಕರರ ಕನಿಷ್ಠ ವೇತನ ಶೇ.44.44ರಷ್ಟು ಹೆಚ್ಚಾಗಬಹುದು. 7ನೇ ವೇತನ ಶ್ರೇಣಿಯಡಿ ನೌಕರರು 2.57 (ಫಿಟ್ಮೆಂಟ್ ಫ್ಯಾಕ್ಟರ್) ಆಧಾರದ ಮೇಲೆ ಮೂಲ ವೇತನವಾಗಿ ರೂ.18 ಸಾವಿರ ಪಡೆಯುತ್ತಾರೆ. ಈ ಮೂಲ ವೇತನವನ್ನು 26 ಸಾವಿರ ಅಥವಾ ಅದಕ್ಕಿಂತ ಹೆಚ್ಚಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link