ಬಾಲಿವುಡ್ ನಟಿಯರನ್ನು ವರಿಸಿದ ಐವರು ಖ್ಯಾತ ಕ್ರಿಕೆಟ್ ಪಟುಗಳಿವರು

Wed, 24 Nov 2021-4:48 pm,

ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್ ಜಹೀರ್ ಖಾನ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ವಿವಾಹವಾದರು. ಜಹೀರ್ ಖಾನ್, ಮರಾಠಿ ಚಿತ್ರನಟಿ ಸಾಗರಿಕಾ ಘಾಟ್ಗೆ ಪ್ರೇಮಕಥೆ ಯಾವ್ ಸಿನಿಮಾಗೂ ಕಡಿಮೆಯೇನಿಲ್ಲ. ಮೊದಲ ಭೇಟಿಯಿಂದಲೇ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡತೊಡಗಿದ್ದರು.  

2015 ರಲ್ಲಿ, ಹರ್ಭಜನ್ ಸಿಂಗ್ ನಟಿ ಗೀತಾ ಬಸ್ರಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರೂ  ಮೊದಲು ಸ್ನೇಹಿತರಾಗಿದ್ದರು, ನಂತರ ಕೆಲವು ತಿಂಗಳ ನಂತರ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ನಂತರ ಮದುವೆಯಾದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಪ್ರೇಮಕಥೆ 2013 ರಲ್ಲಿ ಪ್ರಾರಂಭವಾಯಿತು.  ಪ್ರತಿಯೊಂದು ಸುಖ, ಕಷ್ಟದಲ್ಲೂ ಇಬ್ಬರೂ ಜೊತೆಯಾಗಿ ನಿಂತಿದ್ದು ಅಭಿಮಾನಿಗಳು ವಿರಾಟ್-ಅನುಷ್ಕಾ ಜೋಡಿಯನ್ನು ತುಂಬಾ ಇಷ್ಟಪಡುತ್ತಾರೆ. ಡಿಸೆಂಬರ್ 11, 2017 ರಂದು, ಈ ಜೋಡಿ ಮದುವೆಯಾಯಿತು. 

ಶರ್ಮಿಳಾ ಟ್ಯಾಗೋರ್ ಅವರ ಕಾಲದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಟೈಗರ್ ಎಂದು ಕರೆಯಲ್ಪಡುವ ಮನ್ಸೂರ್ ಅಲಿ ಖಾನ್ ಅವರನ್ನು ವಿವಾಹವಾದರು. ಶರ್ಮಿಳಾ ಮತ್ತು ಮನ್ಸೂರ್ ಮೊದಲು ಭೇಟಿಯಾದದ್ದು ದೆಹಲಿಯಲ್ಲಿ. ಮೊದಲ ಭೇಟಿಯಲ್ಲೇ ಪಟೌಡಿ ಶರ್ಮಿಳಾಗೆ ಮನಸೋತಿದ್ದರು.  

ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 1996 ರಲ್ಲಿ ನಟಿ ಸಂಗೀತಾ ಬಿಜಲಾನಿ ಅವರನ್ನು ವಿವಾಹವಾದರು. ಜಾಹೀರಾತು ಚಿತ್ರೀಕರಣದ ವೇಳೆ ಸಂಗೀತಾ ಅಜರ್ ಅವರನ್ನು ಭೇಟಿಯಾದರು. ಅಜರುದ್ದೀನ್ ಟೀಂ ಇಂಡಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್. ಚೊಚ್ಚಲ ಟೆಸ್ಟ್‌ನ ನಂತರ ಅವರು ಸತತ ಮೂರು ಶತಕಗಳನ್ನು ಗಳಿಸಿದ್ದರು.ಅಜರುದ್ದೀನ್ ತಮ್ಮ ಕ್ರಿಕೆಟ್ ಮತ್ತು ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದರು.  =========================================================

ZEENEWS TRENDING STORIES

By continuing to use the site, you agree to the use of cookies. You can find out more by Tapping this link