ದೆಹಲಿಯ ಈ ಪಾರ್ಕ್ ನಲ್ಲಿ ವಿಶ್ವದ 7 ಅದ್ಭುತಗಳು!
ಗೃಹ ಸಚಿವ ರಾಜನಾಥ್ ಸಿಂಗ್ ಗುರುವಾರ 'ವೇಸ್ಟ್ ಟು ವಂಡರ್ ಪಾರ್ಕ್' ಅನ್ನು ಉದ್ಘಾಟಿಸಿದರು. ಈ ಪಾರ್ಕ್ ಸರೈ ಕಾಲೆ ಖಾ ಪ್ರದೇಶದ ಏಳು ಎಕರೆ ಭೂಮಿಯಲ್ಲಿ ನಿರ್ಮಾನವಾಗ್ಗಿದೆ. ಕಸದಿಂದ ರಸ ಎಂಬುದಕ್ಕೆ ಇದು ಪ್ರಮುಖ ಉದಾಹರಣೆಯಾಗಿದೆ. ಮೊದಲ ಬಾರಿಗೆ ಕಸದಿಂದ ಹಣಗಳಿಸುವ ಕೆಲಸ ನಡೆದಿದೆ ಎಂದು ಗೃಹ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನರ ವರ್ತನೆಯನ್ನು ಬದಲಿಸಲು ಪ್ರಯತ್ನಿಸಬೇಕು ಮತ್ತು ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಾಕಷ್ಟು ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಉದ್ಯಾನದಲ್ಲಿ ತಾಜ್ ಮಹಲ್ (20 ಅಡಿ), ಗೀಜಾದ ಗ್ರೇಟ್ ಪಿರಮಿಡ್ (18 ಅಡಿ), ಐಫೆಲ್ ಗೋಪುರ (60 ಅಡಿ), ಪಿಸಾ ಟೈಲ್ಟೆಡ್ ಮಿನಾರ್ (25 ಅಡಿ), ಕ್ರೈಸ್ಟ್ ರಿಯೊ ಡಿ ಜನೈರೊ ರಿಡೀಮರ್ (25 ಅಡಿ), ರೋಮ್ನ ಕ್ಲೋಸಿಯಂ (15 ಅಡಿ), ನ್ಯೂಯಾರ್ಕ್ ಪ್ರತಿಮೆ ಲಿಬರ್ಟಿ (30 ಅಡಿ) ಗಳ ಪ್ರತಿರೂಪವನ್ನು ನಿರ್ಮಿಸಲಾಗಿದೆ ಎಂದು ದಕ್ಷಿಣ ದೆಹಲಿ ಮುನಿಸಿಪಲ್ ಕಾರ್ಪೋರೇಶನ್(SDMC) ಹೇಳಿದೆ.
ದಕ್ಷಿಣ ದೆಹಲಿ ಮುನಿಸಿಪಲ್ ಕಾರ್ಪೋರೇಶನ್ ನಗರದ ತ್ಯಾಜ್ಯವನ್ನು ಸಂಸ್ಕರಿಸುವುದರ ಮೂಲಕ ಈ ಉದ್ಯಾನದ ನಿರ್ಮಾಣ ಮಾಡಲಾಗಿದೆ. "ಏಳು ಪ್ರತಿಕೃತಿಗಳು ಆಟೋಮೊಬೈಲ್ ತ್ಯಾಜ್ಯ ಮತ್ತು ಫ್ಯಾನ್, ರಾಡ್ಗಳು, ಕಬ್ಬಿಣದ ಹಾಳೆಗಳು, ನಟ್-ಬೊಲ್ಟ್ಗಳು, ಬೈಸಿಕಲ್ಗಳು ಮತ್ತು ಮೋಟರ್ಸೈಕಲ್ಗಳು ಸೇರಿದಂತೆ ಇತರ ಲೋಹಗಳ ತ್ಯಾಜ್ಯದಿಂದ ತಯಾರಿಸಲ್ಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಗಲಿನಲ್ಲಿ ಈ ಉದ್ಯಾನವನ ಎಷ್ಟು ಸುಂದರವಾಗಿ ಕಾಣುತ್ತದೋ, ರಾತ್ರಿಯ ವೇಳೆ ಅದು ಇಮ್ಮಡಿಗೊಳ್ಳುತ್ತದೆ. ವಿಶೇಷ ದೀಪಗಳನ್ನು ಬಳಸುವುದರ ಮೂಲಕ ಉದ್ಯಾನವನವನ್ನು ಆಕರ್ಷಕವಾಗಿ ಮಾಡಲಾಗಿದೆ.
ಈ ಉದ್ಯಾನವನದಲ್ಲಿ ವಿದ್ಯುತ್ ಗಾಗಿ ವಿಶೇಷ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ. 18 sun tracking ಸೌರ ಫಲಕಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಉದ್ಯಾನದಲ್ಲಿ ಬಳಸಲಾಗುತ್ತದೆ.
ವರ್ಷಗಳಿಂದ ಒಂದು ಡಂಪಿಂಗ್ ಯಾರ್ಡ್ ಆಗಿದ್ದ ಸ್ಥಳವನ್ನು ಸ್ವಚ್ಛಗೊಳಿಸುವ ಮೂಲಕ ಈ ಉದ್ಯಾನವನವನ್ನು ನಿರ್ಮಿಸಲಾಗಿದೆ. ಇದು ದೆಹಲಿಯ ಪ್ರವಾಸೋದ್ಯಮವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ, ಪರಿಸರ ರಕ್ಷಣೆಯಲ್ಲಿ ಒಂದು ದೊಡ್ಡ ಹೆಜ್ಜೆ ಎನ್ನಬಹುದಾಗಿದೆ.
ಈ ಉದ್ಯಾನಕ್ಕೆ ಬರುವ ವಯಸ್ಕರಿಗೆ ಟಿಕೆಟ್ ದರ 50 ರೂ. 3-12 ವರ್ಷದ ಮಕ್ಕಳಿಗೆ 25 ರೂ. ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಪುರಸಭೆಯ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ.