7th pay commission : ಸದ್ಯದಲ್ಲೇ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ .! ಹೊರಬೀಳಲಿದೆ ಬಹುನಿರೀಕ್ಷಿತ ಡಿಎ ಆದೇಶ
ಪಿಂಚಣಿದಾರರಿಗೂ ಸಿಗಲಿದೆ ಲಾಭ : ನೆನಪಿರಲಿ. ಇದು ಕೇವಲ ಪ್ತಸ್ತುತ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಅಷ್ಟೆಅಲ್ಲ. ಪೆಂನ್ಶನ್ ಪಡೆಯುತ್ತಿರುವವರಿಗೂ 2021 ಜನವರಿಯಿಂದ ಜೂನ್ ತನಕದ ಡಿಎ ಮೊತ್ತದಲ್ಲಿ ಹೆಚ್ಚಳ ಅನ್ವಯವಾಗಲಿದೆ. ಸುಮಾರು 40 ಲಕ್ಷ ಪಿಂಚಣಿದಾರರು ಈ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.
LTC ನಿಯಮದಲ್ಲಿ ಬದಲಾವಣೆ : ಕೊವಿಡ್ ಕಾರಣದಿಂದ ಕೇಂದ್ರ ಸರ್ಕಾರ Leave Travel concession (LTC) ಸ್ಕೀಮ್ ನಿಯಮದಲ್ಲಿ ಬದಲಾವಣೆ ಮಾಡಿದೆ. ಅದರ ಪ್ರಕಾರ LTC ಕ್ಲೈಮ್ ಮಾಡಲು ನೀವು ಪ್ರವಾಸ ಹೋಗಬೇಕಾದ ಅಗತ್ಯವೇನಿಲ್ಲ. 12,ಅಕ್ಟೋಬರ್ 2020 ರಿಂದ ಮಾರ್ಚ್ 31 ರಅವಧಿಯಲ್ಲಿ ನೀವು ಖರೀದಿಸಿದ ವಸ್ತುವಿನ ಮೇಲೆ ಶೇ. 12 ರಷ್ಟು ಆದಾಯ ತೆರಿಗೆ ವಿನಾಯಿತಿ ಸಿಗಲಿದೆ.
LTC ಬದಲಿಗೆ ವಿಮೆ ಪ್ರಿಮಿಯಂ ಮೊತ್ತ ಕ್ಲೈಮ್ ಮಾಡಿ : ಕೇಂದ್ರ ನೌಕರರಿಗೆ ಬಹು ದೊಡ್ಡ ರೀಲೀಫ್ ನೀಡಿರುವ ಕೇಂದ್ರ ಸರ್ಕಾರ LTC ಸ್ಕೀಮ್ ನಲ್ಲಿ ಲೈಫ್ ಇನ್ಶೂರೆನ್ಸ್ ಪಾಲಿಸಿಯನ್ನೂ ಸೇರಿಸಿದೆ.
ಡಿಎಯಲ್ಲಿ ಹೆಚ್ಚಳ ಎಷ್ಟಾಗುತ್ತದೆ : ಕೆಲವು ಮೀಡಿಯಾ ವರದಿಗಳ ಪ್ರಕಾರ ತುಟ್ಟಿಭತ್ಯೆಯಲ್ಲಿ ಶೇ 4 ರಷ್ಟು ಏರಿಕೆಯಾಗಲಿದೆ.
ತುಟ್ಟಿ ಭತ್ಯೆ ಶೇ. 25ರಷ್ಟಾಗಲಿದೆ: ತುಟ್ಟಿ ಭತ್ಯೆ ಘೋಷಣೆ ಮಾಡುವಾಗ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ ಪರಿಹಾರ ಕೂಡಾ ಘೋಷಣೆ ಮಾಡಲಿದೆ. ಅಂದರೆ, ಒಟ್ಟು ಶೇ. 25 ರಷ್ಟು ಭತ್ಯೆ ಸಿಗುವ ಸಾಧ್ಯತೆ ಗಳಿವೆ. ಅಂದರೆ, ಈಗಾಗಲೇ ಶೇ. 17 ರಷ್ಟಿದೆ ತುಟ್ಟಿ ಭತ್ಯೆ. ಇದರ ಜೊತೆ ಏರಿಕೆ ಶೇ. ಜೊತೆಗೆ ಡಿಎ ಪರಿಹಾರ ಶೇ. 4 ಸಿಗಲಿದೆ.
ವೇತನ ಏರಿಕೆಯಾಗಲಿದೆ : ತುಟ್ಟಿ ಭತ್ಯೆಯ ಘೋಷಣೆಯಾಗುತ್ತಿದ್ದಂತೆ ಸರ್ಕಾರಿ ನೌಕರರ ವೇತನ ಕೂಡಾ ಏರಿಕೆಯಾಗಲಿದೆ. ಶೇ. 8 ರಷ್ಟು ಡಿಎ ಸಿಗುವ ಸಾಧ್ಯತೆಗಳಿವೆ. ಇದಕ್ಕೆ ಅನುರೂಪವಾಗಿ ಟಿಎ ಅಂದರೆ ಪ್ರವಾಸ ಭತ್ಯೆ ಕೂಡಾ ಏರಿಕೆಯಾಗಲಿದೆ.
ಅರಿಯರ್ಸ್ ಕೂಡಾ ಸಿಗಲಿದೆ : ಜುಲೈ 2020ರಂದು ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ರದ್ದುಪಡಿಸಿತ್ತು, ಕರೋನಾ ಇದಕ್ಕೆ ಕಾರಣವಾಗಿತ್ತು. ತುಟ್ಟಿಭತ್ಯೆ ಮತ್ತೆ ಸಿಗಲು ಆರಂಭಿಸಿದರೆ, ಹಳೆಯಅರಿಯರ್ಸ್ ಕೂಡಾ ಸಿಗಲಿದೆ ಎಂಬ ಆಶಾವಾದ ಇಟ್ಟು ಕೊಂಡಿದ್ದಾರೆ ಕೇಂದ್ರ ನೌಕರರು.