7th Pay Commission Update: ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಸಿಗಲಿದೆ ಈ ಕೊಡುಗೆ
ಸರ್ಕಾರ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಸರ್ಕಾರಿ ನೌಕರರ ವೇತನದಲ್ಲಿ ಸರ್ಕಾರ ಭಾರಿ ವೃದ್ಧಿ ಮಾಡುವ ಸಾಧ್ಯತೆ ಇದ್ದು ಇದರಿಂದ ಸುಮಾರು 50 ಲಕ್ಷ ನೌಕರರಿಗೆ ನೇರ ಲಾಭ ಸಿಗಲಿದೆ ಎಂಬ ನಿರೀಕ್ಷೆ ಇದೆ.
ಇದನ್ನು ಓದಿ-ಇನ್ಮುಂದೆ ಈ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸಿಗಲಿದೆ ಪರ್ಮ್ನಂಟ್ 'Work From Home' ಸ್ವಾತಂತ್ರ್ಯ
ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ (Modi Government) ವೇತನ ವೃದ್ಧಿ ಕುರಿತಾದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಭಾರತೀಯ ರೈಲು ಇಲಾಖೆಯ Non-Gazetted ನೌಕರರ ವೇತನ 7ನೇ ವೇತನ ಆಯೋಗದ ಅಡಿ ರೂ.21,000 ಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನು ಓದಿ- ಇನ್ಮುಂದೆ Gold ಖರೀದಿಯ ವೇಳೆ ವಂಚನೆಯಿಂದ ಪಾರಾಗಬಹುದು, ಶೀಘ್ರವೆ ಜಾರಿಗೆ ಬರಲಿದೆ ಈ ನಿಯಮ
ಇದೇ ರೀತಿ ಭಾರತೀಯ ರೈಲು ಇಲಾಖೆಯ ನಾನ್ ಗೆಜೆಟೆಡ್ ಸಿಬ್ಬಂದಿಗಳಿಗೆ ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಆಲ್ ಇಂಡಿಯಾ ರೈಲ್ವೆ ಮೆನ್ಸ್ ಫೆಡರೇಶನ್ ನೀಡಿರುವ ಮಾಹಿತಿ ಪ್ರಕಾರ, ದೀರ್ಘ ಕಾಲದಿಂದ ಸಿಬ್ಬಂದಿಗಳು ಬಡ್ತಿಗಾಗಿ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ 7 ನೇ ವೇತನ ಆಯೋಗದ (7th Pay Commission) ಶಿಫಾರಸ್ಸಿನಂತೆ ಪ್ರಮೋಶನ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ನಾನ್ ಗೆಜೆಟೆಡ್ ನೌಕರರ ವೇತನ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ಹೆಚ್ಚಳ ಮಾಡಲಾಗುವುದು ಎನ್ನಲಾಗಿದೆ.
ಇದನ್ನು ಓದಿ- ಬಿಕ್ಕಟ್ಟಿನ ಮಧ್ಯೆ ಪರಿಹಾರದ ಸುದ್ದಿ: ಕರೋನಾ ಲಸಿಕೆಯ ಸಂಪೂರ್ಣ ವೆಚ್ಚ ಭರಿಸಲಿದೆಯಂತೆ ಮೋದಿ ಸರ್ಕಾರ!
ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳ ಪ್ರಕಾರ ನಾನ್-ಗೆಜೆಟೆಡ್ ನೌಕರರ ವೇತನ ತಿಂಗಳಿಗೆ ಕನಿಷ್ಠ 5000 ರೂ.ಗಳವರೆಗೆ ಹೆಚ್ಚಾಗಲಿದೆ. ಇವರ HRA, DA ಹಾಗೂ TA ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇವೆಲ್ಲವುಗಳನ್ನು ಸೇರಿಸಿದರೆ ನೌಕರರ ವೇತನ ಸುಮಾರು 25,000 ರೂ.ಗಳಷ್ಟು ಹೆಚ್ಚಾಗಲಿದೆ.
ಇದನ್ನು ಓದಿ- ಗ್ಯಾರಂಟಿ ರಹಿತ Business Loan ಬೇಕೇ? ಈ ಸಿಂಪಲ್ ಷರತ್ತು ಪೂರ್ಣಗೊಳಿಸಿ
ವರದಿಗಳ ಪ್ರಕಾರ, ಲ್ಯಾಬ್ ಸಿಬ್ಬಂದಿ, ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್‌ಗಳು, ಸ್ಟಾಫ್ ನರ್ಸ್, ಭೌತಚಿಕಿತ್ಸಕರು, ರೇಡಿಯೋಗ್ರಾಫರ್‌ಗಳು, ಫಾರ್ಮಾಸಿಸ್ಟ್, ಆಹಾರ ತಜ್ಞರು ಮತ್ತು ಕುಟುಂಬ ಕಲ್ಯಾಣ ಸಂಘಟನೆಯ ಗೆಜೆಟೆಡ್ ಅಲ್ಲದ ವೈದ್ಯಕೀಯ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ರೈಲ್ವೆ ಈಗಾಗಲೇ ಅನುಮೋದನೆ ನೀಡಿದೆ.
ಇದನ್ನು ಓದಿ-ಶೀಘ್ರವೇ ಸರ್ಕಾರ ಜಾರಿಗೆ ತರಲಿದೆ ದೇಸಿ ಇ-ಕಾಮರ್ಸ್ ಪ್ಲಾಟ್ಫಾರ್ಮ್, Amazon ಹಾಗೂ Flipkartಗೆ ಭಾರಿ ಪೈಪೋಟಿ
ಕೇಂದ್ರ ಸರ್ಕಾರಿ ನೌಕರರು ತಮ್ಮ ಕನಿಷ್ಠ ವೇತನ 26,000 ರೂ ಆಗಿರಬೇಕು ಎಂದು ಬಹುಕಾಲದಿಂದ ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಇದು 18,000 ರೂ.ಗಳಷ್ಟು ಇದೆ. ಏಳನೇ ವೇತನ ಆಯೋಗದಡಿ ಅವರ ಸಂಬಳ ಹೆಚ್ಚಾದರೆ, ಕೇಂದ್ರ ನೌಕರರ ಈ ದೂರು ಕೂಡ ನಿವಾರಣೆಯಾದಂತಾಗುತ್ತದೆ.
ಇದನ್ನು ಓದಿ- 7th Pay Commission: ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ DA ಹೆಚ್ಚಳ ಯಾವಾಗ? ಇಲ್ಲಿದೆ ಉತ್ತರ