ನವದೆಹಲಿ: ಚಿನ್ನ(Gold) ಖರೀದಿಸುವ ವೇಳೆ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ಚಿನ್ನದ ಗುಣಮಟ್ಟದ ಕುರಿತು ಪ್ರಶ್ನೆ ಏಳುವುದು ಸಹಜ. ಆದರೆ ಶೀಘ್ರದಲ್ಲಿಯೇ ಈ ನಿಮ್ಮ ಚಿಂತೆ ದೂರವಾಗಲಿದೆ. ಹೌದು, ಕೇಂದ್ರದ ಮೋದಿ ನೇತೃತ್ವದ ಸರ್ಕಾರ gold ಹಾಲಮಾರ್ಕಿಂಗ್ ನಿಯಮವನ್ನು ಮುಂದಿನ ವರ್ಷದಿಂದ ಇಡೀ ದೇಶಾದ್ಯಂತ ಜಾರಿಗೆ ತರಲು ಉದ್ದೇಶಿಸಿದೆ. ಜನವರಿ 2020 ರಿಂದ ಸರ್ಕಾರ ಚಿನ್ನದ ಆಭರಣಗಳ ಮೇಲೆ ಹಾಲಮಾರ್ಕಿಂಗ್ ಕಡ್ಡಾಯಗೊಳಿಸುವ ನಿರ್ಣಯಕೈಗೊಂಡಿದೆ. ಹೀಗಾಗಿ ಇದೀಗ ಜೂನ್ 1, 2021 ರಿಂದ ಗೋಲ್ಡ್ ಹಾಲ್ ಮಾರ್ಕಿಂಗ್ ಕಡ್ಡಾಯವಾಗಿರಲಿದೆ.
ಇದನ್ನು ಓದಿ-'ಚಿನ್ನ' ಖರೀದಿಸುವ ಮೊದಲು ಈ ಬಗ್ಗೆ ತಪ್ಪದೇ ತಿಳಿಯಿರಿ
ನೂತನ ಗ್ರಾಹಕ ಹಿತಾಸಕ್ತಿ ರಕ್ಷಣಾ ಕಾಯಿದೆ 2019 ಕೂಡ ಇದೀಗ ಜಾರಿಗೆ ಬಂದಿದೆ. ಈ ನಿಯಮ ಚಿನ್ನದ ಆಭೂಷಣಗಳ ಮೇಲೆಯೂ ಕೂಡ ಅನ್ವಯಿಸಲಿದೆ. ಈ ನಿಯಮ ಜಾರಿಗೆ ಬಂದ ಬಳಿಕ ಒಂದು ವೇಳೆ ಯಾವುದೇ ಚಿನ್ನಾಭರಣ ವ್ಯಾಪಾರಿ ನಿಮಗೆ ವಂಚಿಸಿದರೆ, ನೀವು ಆತನ ವಿರುದ್ಧ ದೂರು ದಾಖಲಿಸಬಹುದು. ಒಂದು ವೇಳೆ ನಿಮ್ಮ ಆರೋಪ ಸಾಬೀತಾದ ಪಕ್ಷದಲ್ಲಿ ವ್ಯಾಪಾರಿಯ ವಿರುದ್ಧ ಕಠಿಣ ಕ್ರಮ ಜರುಗಲಿದೆ.
ವಂಚನೆ ಎಸಗಿದರೆ ಜೈಲು ಶಿಕ್ಷೆ
ನೂತನ ಕಾನೂನಿನ ಪ್ರಕಾರ ಒಂದು ವೇಳೆ 22 ಕ್ಯಾರೆಟ್ ಚಿನ್ನವೆಂದು ಹೇಳಿ 18 ಕ್ಯಾರೆಟ್ ಚಿನ್ನವನ್ನು ಮಾರಾಟ ಮಾಡಿದರೆ ಆಭರಣಗಳ ವ್ಯಾಪಾರಿಗೆ ದಂಡ ಹಾಗೂ ಜೈಲು ಶಿಕ್ಷೆಯಾಗಲಿದೆ. ಈ ಕುರಿತು ಕೇಂದ್ರ ಸರ್ಕಾರ ಇದೇ ವರ್ಷದ ಜನವರಿಯಲ್ಲಿ ನೋಟಿಸ್ ಜಾರಿಮಾಡಿದ್ದು, ಚಿನ್ನಾಭರಣಗಳ ಮೇಲೂ ಕೂಡ ಹಾಲಮಾರ್ಕಿಂಗ್ 15 ಜನವರಿ 2021 ರಿಂದ ಕಡ್ಡಾಯವಾಗಿರಲಿದೆ ಎಂದು ಹೇಳಿತ್ತು. ಆದರೆ, ಬಳಿಕ ಜುಲೈನಲ್ಲಿ ಈ ಕುರಿತು ಮತ್ತೆ ಹೇಳಿಕೆ ನೀಡಿದ್ದ ಕೇಂದ್ರ ಸರ್ಕಾರ ಈ ನಿಯಮ 1 ಜೂನ್ 2021ಕ್ಕೆ ಜಾರಿಗೆ ಬರಲಿದೆ ಎಂದು ಹೇಳಿದೆ.
ಇದನ್ನು ಓದಿ- ಚಿನ್ನಾಭರಣಗಳ ಬೆಲೆ ಹೇಗೆ ನಿಗದಿಯಾಗುತ್ತದೆ, ಜ್ಯೂವೆಲರ್ ಬಳಿ ಹೋಗುವ ಮೊದಲು ಇದನ್ನು ತಿಳಿದುಕೊಳ್ಳಿ
ಕೇಂದ್ರ ಸರ್ಕಾರವು ಆಭರಣ ವ್ಯಾಪಾರಿಗಳಿಗೆ ಒಂದು ವರ್ಷ ಕಾಲಾವಕಾಶ ನೀಡಿದೆ, ಈ ಮಧ್ಯೆ ಆಭರಣಕಾರರು ತಮ್ಮ ಹಳೆಯ ದಾಸ್ತಾನು ತೆರವುಗೊಳಿಸಬೇಕಾಗುತ್ತದೆ. ದೇಶದಲ್ಲಿ ಹಾಲ್ಮಾರ್ಕಿಂಗ್ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಪ್ರಸ್ತುತ ದೇಶದಲ್ಲಿ ಸುಮಾರು 900 ಹಾಲ್‌ಮಾರ್ಕಿಂಗ್ ಕೇಂದ್ರಗಳಿವೆ, ಇದನ್ನು ಇನ್ನಷ್ಟು ಹೆಚ್ಚಿಸಲಾಗುತ್ತಿದೆ.
ಹಾಲ್ ಮಾರ್ಕಿಂಗ್ ಶುದ್ಧತೆ
- 375 ಅಂದರೆ 37.5% ಶುದ್ಧ
- 585 ಅಂದರೆ 58.5% ಶುದ್ಧ
- 750 ಅಂದರೆ 75.0% ಶುದ್ಧ
- 916 ಅಂದರೆ 91.6% ಶುದ್ಧ
- 990 ಅಂದರೆ 99.0% ಶುದ್ಧ
- 999 ಅಂದರೆ 99.9% ಶುದ್ಧ
ಇದನ್ನು ಓದಿ- ಕೇವಲ 1 ರೂಪಾಯಿಗೆ ಖರೀದಿಸಿ 24 ಕ್ಯಾರೆಟ್ ಶುದ್ಧ ಚಿನ್ನ, ನೂತನ ಸ್ಕೀಂ ಬಗ್ಗೆ ಇಲ್ಲಿದೆ ಮಾಹಿತಿ
ಚಿನ್ನದ ಶುದ್ಧತೆ
- 24 ಕ್ಯಾರೆಟ್ 99.9%
- 23 ಕ್ಯಾರೆಟ್ 95.8%
- 22 ಕ್ಯಾರೆಟ್ 91.6%
- 21 ಕ್ಯಾರೆಟ್ 87.5%
- 18 ಕ್ಯಾರೆಟ್ 75%
- 17 ಕ್ಯಾರೆಟ್ 70.8%
- 14 ಕ್ಯಾರೆಟ್ 58.5%
- 9 ಕ್ಯಾರೆಟ್ 37.5%