ವೇತನ ಹೆಚ್ಚಳ ಮಾತ್ರವಲ್ಲ,ಸರ್ಕಾರಿ ನೌಕರರ ವೇತನ ಲೆಕ್ಕಾಚಾರ ನಿಯಮವೂ ಬದಲು ! ಈಗ 34% ದಷ್ಟು ಏರಿಕೆ ಕಾಣುವುದು ಸ್ಯಾಲರಿ !
ಇತ್ತೀಚೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಬದಲಿಸಲು ಏಕೀಕೃತ ಪಿಂಚಣಿ ಯೋಜನೆ (UPS)ಅನ್ನು ಜಾರಿಗೆ ತಂದಿತು.ಇದು ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಒಂದು ದೊಡ್ಡ ಒಳ್ಳೆಯ ಸುದ್ದಿಯಾಗಿದೆ.
ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗಕ್ಕೆ ಬಹುದಿನಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ.ಸರ್ಕಾರ ಈ ಬಗ್ಗೆ ಸಿದ್ದತೆ ಆರಂಭಿಸಿದೆ ಎನ್ನಲಾಗಿದೆ.ಶೀಘ್ರದಲ್ಲೇ ಹೊಸ ಆಯೋಗ ರಚನೆ ಕುರಿತು ಸಿಹಿ ಸುದ್ದಿ ನೀಡಲಿದೆ ಎನ್ನುತ್ತವೆ ಮೂಲಗಳು.
ಹೊಸ ವೇತನ ಆಯೋಗ 10 ವರ್ಷಗಳಿಗೊಮ್ಮೆ ಜಾರಿಯಾಗುತ್ತವೆ.7 ನೇ ವೇತನ ಆಯೋಗವನ್ನು 2016 ರಲ್ಲಿ ಪರಿಚಯಿಸಲಾಯಿತು.ಅದರಂತೆ 8ನೇ ವೇತನ ಆಯೋಗವು 2026ರಲ್ಲಿ ಜಾರಿಗೆ ಬರಬೇಕು.ಸರ್ಕಾರ ಈಗಾಗಲೇ ಇದಕ್ಕಾಗಿ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಹೇಳಲಾಗುತ್ತಿದೆ.
7 ನೇ ವೇತನ ಆಯೋಗವನ್ನು ಫೆಬ್ರವರಿ 2014 ರಲ್ಲಿ ರಚಿಸಲಾಗಿದ್ದು, ಶಿಫಾರಸುಗಳು ಜನವರಿ 1, 2016 ರಿಂದ ಜಾರಿಗೆ ಬಂದವು.ಆದ್ದರಿಂದ 8ನೇ ವೇತನ ಆಯೋಗವನ್ನು 2026ರ ಜನವರಿಯಲ್ಲಿ ಜಾರಿಗೊಳಿಸಬೇಕು.
ವೇತನ ಆಯೋಗ ಜಾರಿಗೆ ಬರಲು ಸುಮಾರು 1 1/2-2 ವರ್ಷಗಳು ಬೇಕಾಗುವುದರಿಂದ,ಈಗ ಅಧಿಸೂಚನೆ ಬಂದರೆ,2026ರೊಳಗೆ ಅದನ್ನು ಜಾರಿಗೆ ತರಬಹುದು.
ಹಂತ 1 ಉದ್ಯೋಗಿಗಳಿಗೆ ವೇತನ ಹೆಚ್ಚಳವು 34% ವರೆಗೆ ಮತ್ತು ಹಂತ 18 ಉದ್ಯೋಗಿಗಳಿಗೆ 100% ವರೆಗೆ ಏರಿಕೆ ಕಾಣುತ್ತದೆ.ಅಂದರೆ ಹಂತ 1ರ ವೇತನವು 34,560 ಮತ್ತು ಹಂತ 18 ರ ವೇತನವು 4.8 ಲಕ್ಷದವರೆಗೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
6ನೇ ವೇತನ ಶ್ರೇಣಿಯಿಂದ 7ನೇ ವೇತನ ಶ್ರೇಣಿಗೆ ಪರಿವರ್ತನೆಯಾದ ಮೇಲೆ ನೌಕರರ ಸಂಘವು ವೇತನ ಪರಿಷ್ಕರಣೆಯಲ್ಲಿ ಫಿಟ್‌ಮೆಂಟ್ ಅಂಶವನ್ನು 3.68ಕ್ಕೆ ಬದಲಾಯಿಸುವಂತೆ ಒತ್ತಾಯಿಸಿತ್ತು.ಆದರೆ ಸರ್ಕಾರ ಅದನ್ನು 2.57ಕ್ಕೆ ಉಳಿಸಿಕೊಂಡಿದೆ.8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಫಿಟ್‌ಮೆಂಟ್ ಅಂಶದ ಮೂಲಕ ಕೇಂದ್ರ ನೌಕರರ ಕನಿಷ್ಠ ವೇತನ 7000ದಿಂದ ರೂ.18 ಸಾವಿರಕ್ಕೆ ಏರಿಕೆಯಾಗಲಿದೆ. 8ನೇ ವೇತನ ಆಯೋಗವು ಜಾರಿಗೆ ಬರಲಿದ್ದು, ಫಿಟ್‌ಮೆಂಟ್ ಅಂಶವನ್ನು 3.68 ರಿಂದ ಗುಣಿಸಿದರೆ, ಮಾಸಿಕ ವೇತನವು ರೂ.18,000 ರಿಂದ ರೂ. 26,000 ಕ್ಕೆ ಅಂದರೆ ಸುಮಾರು 44%ದಷ್ಟು ಹೆಚ್ಚಾಗಲಿದೆ.
ಇತ್ತೀಚಿನ ತಿಂಗಳುಗಳಲ್ಲಿ 8 ನೇ ವೇತನ ಆಯೋಗದ ಬಗ್ಗೆ ಅನೇಕ ನೌಕರರ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಹಲವಾರು ಪತ್ರಗಳನ್ನು ಬರೆದಿವೆ.ಬಜೆಟ್ ಅಧಿವೇಶನದಲ್ಲಿ ಎಂಪ್ಲಾಯೀಸ್ ಫೆಡರೇಶನ್, ರಾಷ್ಟ್ರೀಯ ಜಂಟಿ ಸಲಹಾ ಸಂಸ್ಥೆಗಳು,ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘ ಸೇರಿದಂತೆ ವಿವಿಧ ನೌಕರರ ಸಂಘಟನೆಗಳು ಎಂಟನೇ ವೇತನ ಆಯೋಗವನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದವು.
ಕೆಲ ದಿನಗಳ ಹಿಂದೆ ಈ ಕುರಿತು ಪ್ರತಿಕ್ರಿಯಿಸಿದ್ದ ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್,8ನೇ ವೇತನ ಆಯೋಗವು 2026ರಲ್ಲೇ ಜಾರಿಗೆ ಬರಬೇಕಿದ್ದು, ಅದಕ್ಕೆ ಇನ್ನೂ ಕಾಲಾವಕಾಶವಿದೆ ಎಂದಿದ್ದಾರೆ.ಅಂದರೆ 8ನೇ ವೇತನ ಆಯೋಗ ರಚನೆ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಯೋಚಿಸುತ್ತಿದೆ ಎಂದರ್ಥ.
ಸೂಚನೆ :ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗ ರಚನೆಯ ಯಾವುದೇ ಗ್ಯಾರಂಟಿಯನ್ನು ನಾವು ನೀಡುವುದಿಲ್ಲ.ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.