brave rat Magawa: ತನ್ನ ಪ್ರಾಣ ಪಣಕ್ಕಿಟ್ಟ ಸಾವಿರಾರು ಜೀವಗಳನ್ನು ಉಳಿಸಿ ಪ್ರಾಣತೆತ್ತ ಕೆಚ್ಚೆದೆಯ ‘ಇಲಿ’!!
ಈ ವೀರ ಇಲಿಯ ಹೆಸರು ಮಾಗಾವಾ. ಇದು ಕಾಂಬೋಡಿಯಾದ ಫಾರೆಸ್ಟ್ ಪ್ರಿವೆನ್ಶನ್ ಸ್ಕ್ವಾಡ್‌ನಲ್ಲಿತ್ತು. ಇಲಿ ಮಾಗಾವಾ ನೆಲಬಾಂಬ್ ಎಲ್ಲಿದೆ ಎಂದು ವಾಸನೆಯ ಮೂಲಕ ಕಂಡುಹಿಡಿದು ಸಾವಿರಾರು ಜನರ ಜೀವವನ್ನು ಕಾಪಾಡಿತ್ತು.
ಲ್ಯಾಂಡ್‌ಮೈನ್ ಪತ್ತೆ ಹಚ್ಚಲು ಮಾಗಾವಾಗೆ ತರಬೇತಿ ನೀಡಲಾಗಿದೆ. ಗನ್‌ಪೌಡರ್ ವಾಸನೆಯಿಂದ ತಮ್ಮ ಹ್ಯಾಂಡ್ಲರ್‌ಗೆ ಅಂದರೆ ಅದರ ಕೇರ್‌ಟೇಕರ್‌ಗೆ ಎಚ್ಚರಿಕೆ ನೀಡುತ್ತಿತ್ತು. ಮಾಹಿತಿಯ ಪ್ರಕಾರ, ಕೆಚ್ಚೆದೆಯ ಇಲಿ ಮಾಗಾವಾ ತನ್ನ ವೃತ್ತಿಜೀವನದಲ್ಲಿ 71 ನೆಲಬಾಂಬ್‌ಗಳನ್ನು ಪತ್ತೆಹಚ್ಚಿದೆ ಮತ್ತು ಹೆಚ್ಚುವರಿಯಾಗಿ ತನ್ನ ಹ್ಯಾಂಡ್ಲರ್‌ಗೆ 38 ಜೀವಂತ ಬಾಂಬ್‌ಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಮಾಗಾವಾ ವೃತ್ತಿಜೀವನವು 5 ವರ್ಷಗಳ ಕಾಲ ನಡೆದಿದ್ದು, ಈ ಸಮಯದಲ್ಲಿ ಅನೇಕ ಜೀವಗಳನ್ನು ಉಳಿಸಿದೆ.
ಬಾಂಬ್ ಸ್ನಿಫಿಂಗ್ ತಂಡದ ಸದಸ್ಯನಾಗಿದ್ದ ಇಲಿ ಮಾಗಾವಾ ತನ್ನ ಶೌರ್ಯಕ್ಕಾಗಿ ಬ್ರಿಟಿಷ್ ಚಾರಿಟಿಯಿಂದ ಚಿನ್ನದ ಪದಕವನ್ನು ಪಡೆದಿದೆ. ಬ್ರಿಟಿಷ್ ಚಾರಿಟಿಯ ಈ ಪ್ರಶಸ್ತಿಯನ್ನು ಮೊದಲು ನಾಯಿಗಳಿಗೆ ಮಾತ್ರ ಮೀಸಲಿಡಲಾಗಿತ್ತು, ಆದರೆ ಇದನ್ನು ಇಲಿ ಮಾಗಾವಾಗೆ ಸಹ ನೀಡಲಾಯಿತು. ಕಾಂಬೋಡಿಯಾಗೆ ಕರೆತಂದಾಗ ಮಾಗಾವಾನಿಗೆ 2 ವರ್ಷವಿತ್ತು.
ಬೆಲ್ಜಿಯನ್ NGO APOPO ನಿಂದ ಇಲಿ ಮಾಗಾವಾಗೆ ತರಬೇತಿ ನೀಡಲಾಗಿದೆ. ಮಾಗಾವಾ ಬಾಂಬ್‌ಗಳು ಮತ್ತು ನೆಲಬಾಂಬ್‌ಗಳನ್ನು ಪತ್ತೆಹಚ್ಚಲು ತರಬೇತಿ ಪಡೆದಿತ್ತು. ತನ್ನ 5 ವರ್ಷಗಳ ಬಾಂಬ್ ಸ್ನಿಫಿಂಗ್ ವೃತ್ತಿಜೀವನದಲ್ಲಿ ಇಲಿ ಮಾಗಾವಾ 1.4 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ಭೂಮಿಯನ್ನು ತನಿಖೆ ಮಾಡಿದೆ ಎಂದು ಹೇಳಲಾಗುತ್ತದೆ.
ಜನವರಿ 2022 ರಲ್ಲಿ ಮಾಗಾವಾ 8ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದೆ. ಬಹದ್ದೂರ್ ಮಾಗಾವಾ ಸಾವಿನ ಬಗ್ಗೆ ಕಾಂಬೋಡಿಯಾದ ಜನರು ದುಃಖ ವ್ಯಕ್ತಪಡಿಸಿದ್ದಾರೆ. ಮಗವಾ ಮರಣದ ನಂತರ, APOPO ಸಂಘಟನೆಯು ನಾವು ಧೈರ್ಯಶಾಲಿ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದೆ.