Coconut: ಒಂದು ತೆಂಗಿನಕಾಯಿ ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು!
ಮಂಗಳವಾರ, ತೆಂಗಿನಕಾಯಿಯನ್ನು ಒಂದೂವರೆ ಮೀಟರ್ ಕೆಂಪು ಬಟ್ಟೆಯಲ್ಲಿ ಸುತ್ತಿ ಏಳು ಬಾರಿ ಮುಖದಿಂದ ಇಳಿ ತೆಗೆಯಿರಿ ಅಥವಾ ಹನುಮಾನ್ ಜಿ ಪಾದಗಳಿಗೆ ಅರ್ಪಿಸಿ. ಇದನ್ನು ಮಾಡುವುದರಿಂದ, ಯಾವುದೇ ರೀತಿಯ ಅಡಚಣೆ, ದೃಷ್ಟಿ ದೋಷ ಅಥವಾ ದೀರ್ಘಕಾಲದಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮಗೆ ಪರಿಹಾರ ಸಿಗಲಿದೆ.
ಶುಕ್ರವಾರವನ್ನು ಲಕ್ಷ್ಮೀದೇವಿಯ ದಿನವೆಂದು ಪರಿಗಣಿಸಲಾಗಿದೆ. ಪ್ರತಿ ಶುಕ್ರವಾರ ಮುಂಜಾನೆ ಸ್ನಾನ ಮಾಡಿದ ನಂತರ ಕೆಂಪು ಬಟ್ಟೆಗಳನ್ನು ಧರಿಸಿ ತಾಯಿ ಲಕ್ಷ್ಮಿಯನ್ನು ಪೂಜಿಸಿ. ಅದರ ನಂತರ,ಲಕ್ಷ್ಮಿಗೆ ಸಂಪೂರ್ಣ ತೆಂಗಿನಕಾಯಿ ಅರ್ಪಿಸಿ ಮತ್ತು ಪೂಜಿಸಿದ ನಂತರ ತೆಂಗಿನಕಾಯಿಯನ್ನು ಸ್ವಚ್ಛವಾದ ಕೆಂಪು ಬಟ್ಟೆಯಲ್ಲಿ ಸುತ್ತಿ ಮನೆಯಲ್ಲಿ ಯಾರೂ ನೋಡದ ಸ್ಥಳದಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.
ಇದನ್ನೂ ಓದಿ - Turtle Ring Effects: ಈ 4 ರಾಶಿಯವರು ಎಂದಿಗೂ ಆಮೆ ಉಂಗುರವನ್ನು ಧರಿಸಬಾರದು!
ಗುರುವಾರ ವಿಷ್ಣುವಿನ ದಿನ. ಈ ದಿನ ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಲಕ್ಷ್ಮೀ ಒಲಿಯುತ್ತಾಳೆ ಎಂದು ನಂಬಲಾಗಿದೆ. ಗುರುವಾರ ಲಕ್ಷ್ಮೀದೇವಿಯನ್ನು ಪೂಜಿಸಿ ಒಂದು ಹಳದಿ ಬಟ್ಟೆಯಲ್ಲಿ ನೀರಿರುವ ಒಂದು ತೆಂಗಿನಕಾಯಿಯನ್ನು ಮತ್ತು ಬಿಳಿ ಬಣ್ಣದ ಒಂದು ಸಿಹಿಯನ್ನು ಕಟ್ಟಿ ಅದನ್ನು ವಿಷ್ಣುವಿನ ದೇವಾಲಯದಲ್ಲಿ ಆರ್ಪಿಸಿ. ಹೀಗೆ ಮಾಡುವುದರಿಂದ, ವ್ಯವಹಾರದಲ್ಲಿ ಆಗುವ ನಷ್ಟ ಅಥವಾ ಹೂಡಿಕೆಯಿಂದ ಉಂಟಾಗುವ ನಷ್ಟ ನಿವಾರಣೆಯಾಗಲಿದೆ.
ಇದನ್ನೂ ಓದಿ- ಗುರುವಾರ ಈ ಗಿಡವನ್ನು ಪೂಜಿಸಿದರೆ ಸಂಸಾರದಲ್ಲಿ ಕಾಣಿಸಿಕೊಳ್ಳಲಿದೆ ಸುಖ ಶಾಂತಿ
ಹಲವು ಪ್ರಯತ್ನಗಳ ಹೊರತಾಗಿಯೂ ನೀವು ಹಣವನ್ನು ಉಳಿಸಲು ಸಾಧ್ಯವಾಗದಿದ್ದರೆ, ಕಠಿಣ ಪರಿಶ್ರಮದ ಹೊರತಾಗಿಯೂ ನಿಮಗೆ ಸೂಕ್ತ ಪ್ರತಿಫಲ ದೊರೆಯದಿದ್ದರೆ ಅಥವಾ ಶನಿ ದೋಷ ಇದ್ದರೆ ತೆಂಗಿನಕಾಯಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವಾಗಿದೆ. ನಿಮಗೂ ಈ ಸಮಸ್ಯೆಗಳಿದ್ದರೆ, ಶನಿ ದೇವಾಲಯದಲ್ಲಿ ನೀರಿರುವ ಏಳು ತೆಂಗಿನಕಾಯಿಗಳನ್ನು ಅರ್ಪಿಸಿ ನಂತರ ಈ ಎಲ್ಲಾ ತೆಂಗಿನಕಾಯಿಗಳನ್ನು ನದಿಯಲ್ಲಿ ಮುಳುಗಿಸಿ. ಈ ಪರಿಹಾರದ ಮೂಲಕ, ಶನಿ ದೋಷ ನಿವಾರಣೆಯಾಗಿ ಹಣ ನಿಮ್ಮ ಕೈಯಲ್ಲಿ ಉಳಿಯಲಿದೆ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.)