ವಿಶ್ವದ ಅತ್ಯಂತ ದುಬಾರಿ ಆಹಾರಗಳ ಬೆಲೆ ತಿಳಿದರೆ ನೀವು ಶಾಕ್ ಆಗುತ್ತೀರಿ!
ಯುಬಾರಿ ಕಿಂಗ್ ಮೆಲನ್ ಜಪಾನಿನ ಕಲ್ಲಂಗಡಿ. ಇದು ಒಳಗಿನಿಂದ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಇದರ ರುಚಿ ವಿಭಿನ್ನ ಪರಿಮಳವನ್ನು ಹೊಂದಿರುತ್ತದೆ. ಜಪಾನ್‌ನಲ್ಲಿ ಬೆಳೆದ ಈ ಹಣ್ಣು ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಯುಬಾರಿ ಕಲ್ಲಂಗಡಿ ಬೆಲೆ 6 ಸಾವಿರ ಡಾಲರ್ ವರೆಗೆ ಇರುತ್ತದೆ. ಒಂದು ಹರಾಜಿನಲ್ಲಿ ಈ ಕಲ್ಲಂಗಡಿ ಬೆಲೆ 29 ಸಾವಿರ ಡಾಲರ್ ತಲುಪಿತ್ತು.
ಇರಾನಿಯನ್ ಬೆಲುಗಾ ಮೀನಿನ ಬಿಳಿ ಕ್ಯಾವಿಯರ್ ಆಗಿರುವ ಅಲ್ಮಾಸ್ ಕ್ಯಾವಿಯರ್ ಅಧಿಕೃತವಾಗಿ ವಿಶ್ವದ ಅತ್ಯಂತ ದುಬಾರಿ ಆಹಾರವಾಗಿದೆ. ಈ ಆಹಾರ ಪದಾರ್ಥವು ಲಂಡನ್‌ನ ಪಿಕ್ಕಾಡಿಲ್ಲಿಯ ಕ್ಯಾವಿಯರ್ ಹೌಸ್ ಮತ್ತು ಪ್ರೂನಿಯರ್‌ನಲ್ಲಿ ಮಾತ್ರ ಲಭ್ಯವಿದೆ. ಒಮ್ಮೆ ಸಂಪೂರ್ಣವಾಗಿ ತಯಾರಿಸಿದ ನಂತರ ಅಲ್ಮಾಸ್ ಕ್ಯಾವಿಯರ್ ಊಟವು 36 ಸಾವಿರ ಡಾಲರ್ ಅಂದರೆ ಪ್ರತಿ ಚಮಚಕ್ಕೆ ಸುಮಾರು 27 ಲಕ್ಷ ರೂ. ಆಗುತ್ತದೆ.
ಲಿಂಡೆತ್ ಹೋವೆ ಪುಡಿಂಗ್ ಡೆಸರ್ಟ್ ಅನ್ನು ವಿಶ್ವದ ಅತ್ಯಂತ ದುಬಾರಿ ಸಿಹಿತಿಂಡಿ ಎಂದು ಪರಿಗಣಿಸಲಾಗಿದೆ. ಇದನ್ನು ಅತ್ಯಾಧುನಿಕ ಬೆಲ್ಜಿಯಂ ಚಾಕೊಲೇಟ್, ಚಿನ್ನ, ಕ್ಯಾವಿಯರ್ ಮತ್ತು ಎರಡು ಕ್ಯಾರೆಟ್ ವಜ್ರದಿಂದ ತಯಾರಿಸಲಾಗಿದೆ. ಇದನ್ನು ಫೇಬರ್ಗೆ ಮೊಟ್ಟೆಯ ಮೇಲೆ ನೀಡಲಾಗುತ್ತದೆ. ಈ ಸಿಹಿತಿಂಡಿಯ ಪ್ರತಿ ಪುಡಿಂಗ್ (ತುಂಡು) 34,531 ಡಾಲರ್ ಗೆ ಮಾರಾಟ ಮಾಡಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಅದರ ಒಂದು ತುಂಡಿನ ಬೆಲೆ ಸುಮಾರು 25.76 ಲಕ್ಷ ರೂ. ಆಗುತ್ತದೆ.
ಇಂಗ್ಲೆಂಡ್ ನ ಲಂಕಶೈರ್ ನಲ್ಲಿ ‘ಮೀಟ್ ಪೈ’ ಖಾದ್ಯ ಲಭ್ಯವಿದೆ. ವಿಶ್ವದ ಅತ್ಯಂತ ದುಬಾರಿ ಆಹಾರಗಳಾದ ಜಪಾನೀಸ್ ವಾಗ್ಯು ಬೀಫ್, ಚೈನೀಸ್ ಮಟ್ಸುಟೇಕ್ ಅಣಬೆಗಳು, ವಿಂಟರ್ ಬ್ಲ್ಯಾಕ್ ಟ್ರಫಲ್ಸ್ ಮತ್ತು ಫ್ರೆಂಚ್ ಬ್ಲೂಫೂಟ್ ಅಣಬೆಗಳನ್ನು ಸೇರಿ ಈ ‘ಮೀಟ್ ಪೈ’ ಖಾದ್ಯವನ್ನು ತಯಾರಿಸಲಾಗುತ್ತದೆ. ಇದರ ಬೆಲೆ ಸುಮಾರು 14 ಸಾವಿರ ಡಾಲರ್, ಅಂದರೆ 10.45 ಲಕ್ಷ ರೂ. ಆಗುತ್ತದೆ. ಇದನ್ನು ಚಿನ್ನದ ಲೇಪನದಿಂದ ಅಲಂಕರಿಸಲಾಗಿದೆ. ಹೀಗಾಗಿ ಇದು ವಿಶ್ವದ ಅತ್ಯಂತ ದುಬಾರಿ ಖಾದ್ಯಗಳಲ್ಲಿ ಒಂದಾಗಿದೆ.
ಲೂಯಿಸ್ XIII ಪಿಜ್ಜಾವನ್ನು ಅಪರೂಪದ ಆಹಾರ ಪದಾರ್ಥಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಇದಕ್ಕೆ ಬಳಸುವ ಹಿಟ್ಟನ್ನು 72 ಗಂಟೆಗಳ ಕಾಲ ಇರಿಸಿದ ಬಳಿಕ ಅದನ್ನು ಹದವಾಗಿ ನಾದಿಕೊಳ್ಳಲಾಗುತ್ತದೆ. ನಂತರ Bufala Mozzarella ಎಂಬ ಪದಾರ್ಥವನ್ನು ಮಿಕ್ಸ್ ಮಾಡಲಾಗುತ್ತದೆ. ಚೀಸ್ ಮಿಶ್ರಣವನ್ನು ಪಿಜ್ಜಾದಲ್ಲಿ ಬೆರೆಸಲಾಗುತ್ತದೆ. ಸಂಪೂರ್ಣವಾಗಿ ತಯಾರಾದ ಬಳಿಕ ಈ ಪಿಜ್ಜಾವನ್ನು ಸುಮಾರು 12 ಸಾವಿರ ಡಾಲರ್ ಅಂದರೆ ಸುಮಾರು 9 ಲಕ್ಷ ರೂ.ಗೆ ಮಾರಾಟಮಾಡಲಾಗುತ್ತದೆ