ಎಷ್ಟೊಂದು ಮುದ್ದಾಗಿದ್ದಾನೆ ಗೊತ್ತಾ ವಿರಾಟ್‌ ಪುತ್ರ! ಕೊನೆಗೂ ಮಗನ ಫೋಟೋ ರಿವೀಲ್‌ ಮಾಡಿದ ಅನುಷ್ಕಾ... ಫೋಟೋ ನೋಡಿ

Tue, 10 Sep 2024-2:47 pm,

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸದ್ಯ ಭಾರತ ಬಿಟ್ಟು ಲಂಡನ್‌ʼನಲ್ಲಿ ನೆಲೆಸಿದ್ದಾರೆ. ಸಾಮಾನ್ಯರಂತೆ ಲಂಡನ್‌ ಬೀದಿಗಳಲ್ಲಿ ಸುತ್ತಾಡುತ್ತಿರುವ ಈ ಜೋಡಿಯ ಫೋಟೋಗಳು ಆಗಾಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ.

ಅಂದಹಾಗೆ ಇನ್ನು ವಿರುಷ್ಕಾ ಜೋಡಿ ಇದೇ ವರ್ಷ ಫೆಬ್ರವರಿಯಲ್ಲಿ ಮುದ್ದಾದ ಗಂಡು ಮಗುವಿಗೆ ಪೋಷಕರಾಗಿದ್ದರು. ಈ ವಿಷಯದ ಬಗ್ಗೆ ಪೋಸ್ಟ್‌ ಶೇರ್‌ ಮಾಡುವ ಮೂಲಕ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಮಾಹಿತಿ ನೀಡಿದ್ದರು.

 

ಇನ್ನು ಈ ಮುದ್ದಾದ ಮಗುವಿಗೆ ʼಅಕಾಯ್ʼ ಎಂದು ನಾಮಕರಣ ಮಾಡಲಾಯಿತು. ಆದರೆ ಇದುವರೆಗೆ ವಿರುಷ್ಕಾ ಜೋಡಿಯು ತಮ್ಮ ಮಕ್ಕಳ ಮುಖವನ್ನು ಎಲ್ಲೂ ರಿವೀಲ್‌ ಮಾಡಿಲ್ಲ. ಇತ್ತೀಚೆಗೆಯಷ್ಟೇ ಮಗುವಿನ ಕೈ ಇರುವ ಫೋಟೋವನ್ನಷ್ಟೇ ಶೇರ್‌ ಮಾಡಿಕೊಂಡಿದ್ದರು.

 

ಆದರೆ ಇದೀಗ ಅನುಷ್ಕಾನೇ ಫೋಟೋ ರಿವೀಲ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಒಂದು ಫೋಟೋ ಎಲ್ಲೆಡೆ ವೈರಲ್‌ ಆಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ತಿಳಿದುಬಂದಿಲ್ಲ.

 

ಕೆಲವರು ಇದು ವಾಮಿಕಾ ಜನನದ ಸಮಯದಲ್ಲಿ ತೆಗೆದ ಫೋಟೋ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇದು ಎಐ ಜನರೇಟೆಡ್‌ ಎಂದೂ ಸಹ ಹೇಳುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ವಾಸ್ತವಕ್ಕೆ ಹತ್ತಿರವಾಗಿದೆ ಎಂಬುದು ತಿಳಿದುಬಂದಿಲ್ಲ.

 

ಒಟ್ಟಾರೆಯಾಗಿ ಈ ಫೋಟೋದಲ್ಲಿ ಕಾಣಿಸುತ್ತಿರುವ ಮಗು ಮಾತ್ರ ತುಂಬಾ ಮುದ್ದಾಗಿದೆ. ನೀವು ನೋಡುತ್ತಿರುವ ಈ ಫೋಟೋದಲ್ಲಿ ಅನುಷ್ಕಾ ಶರ್ಮಾ ತಮ್ಮ ಮಡಿಲಿನಲ್ಲಿ ಮಗುವನ್ನು ಹಿಡಿದುಕೊಂಡು ಕೂತಿದ್ದಾರೆ. ಈ ಫೋಟೋವನ್ನು ಅಕಾಯ್‌ ಅವರದ್ದು ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಚಾರ ಭಾರೀ ಗೊಂದಲಕ್ಕೀಡು ಮಾಡಿದೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link