Aadhaar Card Alert : ಬೇರೆ ಯಾವುದೇ ದಾಖಲೆ ಇಲ್ಲದಿದ್ದರೂ ಮಾಡಿಸಬಹುದು ಆಧಾರ್ ಕಾರ್ಡ್

Wed, 08 Sep 2021-8:54 pm,

ಆಧಾರ್ ಕಾರ್ಡ್ ಮಾಡಿಸಲು, ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಗಳಂತಹ ದಾಖಲೆಗಳು ಬೇಕಾಗುತ್ತವೆ. ಒಂದು ವೇಳೆ, ನೀವು ಈ ದಾಖಲೆಗಳನ್ನು ಹೊಂದಿಲ್ಲದಿದ್ದರೆ,  UIDAI ನ Aadhaar Introducer ಸೌಲಭ್ಯದ ಸಹಾಯವನ್ನು ತೆಗೆದುಕೊಳ್ಳಬಹುದು.  

ಆಧಾರ್ ಪರಿಚಯಿಸುವವರು ಐಡಿ ಅಥವಾ ವಿಳಾಸ ಪುರಾವೆ ಇಲ್ಲದ ಸ್ಥಳೀಯ ನಿವಾಸಿಗಳನ್ನು ಪರಿಶೀಲಿಸಲು ರಿಜಿಸ್ಟ್ರಾರ್ ನೇಮಿಸಿದ ವ್ಯಕ್ತಿ. ಆಧಾರ್ ಪರಿಚಯಿಸುವವರು ವ್ಯಕ್ತಿಯ ಹುಟ್ಟಿದ ದಿನಾಂಕ, ಗುರುತು ಅಥವಾ ವಿಳಾಸವನ್ನು ಪರಿಶೀಲಿಸುತ್ತಾರೆ. 

UIDAI ಹೊರಡಿಸಿದ ಸುತ್ತೋಲೆಯ ಪ್ರಕಾರ,  Introducer ಆಧಾರ್ ಅರ್ಜಿದಾರರ ಹೆಸರಿನಲ್ಲಿ ಪ್ರಮಾಣಪತ್ರವನ್ನು ನೀಡಬೇಕು. ಇದರ ವ್ಯಾಲಿಡಿಟಿ ಕೇವಲ 3 ತಿಂಗಳವರೆಗೆ ಮಾತ್ರ ಇರುತ್ತದೆ.  Introducer ದಾಖಲಾತಿ ನಮೂನೆಗೆ ಸಹಿ ಮಾಡುವುದು ಅವಶ್ಯಕ. 

Aadhaar Card Introducer  ವಯಸ್ಸು 18 ವರ್ಷಗಳಿಗಿಂತ ಹೆಚ್ಚು ಇರಬೇಕು. ಆತನ ವಿರುದ್ಧ ಯಾವುದೇ ಪ್ರಕರಣ ಇರಬಾರದು. ಆತ ಆಧಾರ್ ಕಾರ್ಡ್ ಹೊಂದಿರಬೇಕು. ಈ ಪ್ರದೇಶದ ಸ್ಥಳೀಯ ವ್ಯಕ್ತಿ, ಪೋಸ್ಟ್‌ಮ್ಯಾನ್, ಆಶಾ ಕೆಲಸಗಾರ, ಶಿಕ್ಷಕರು ಸಹ Aadhaar Card Introducer ಆಗಬಹುದು. 

ನೀವು ಆಧಾರ್ ಕಾರ್ಡ್ ಮಾಡಲು ಅಗತ್ಯವಾದ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ನಿಮ್ಮ ಕುಟುಂಬದ ಮುಖ್ಯಸ್ಥರ ಅಥವಾ ಈಗಾಗಲೇ ಆಧಾರ್ ಕಾರ್ಡ್ ಮಾಡಲಾಗಿರುವ ಯಾವುದೇ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಆ ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಸಾಬೀತುಪಡಿಸುವ ಡಾಕ್ಯುಮೆಂಟ್ ಇರಬೇಕು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link