ವಿರಾಟ್ ಕೊಹ್ಲಿಯನ್ನ ಎಬಿ ಡಿವಿಲಿಯರ್ಸ್ ಕರೆಯೋದು ಹೀಗೆ… ಎಷ್ಟೊಂದು ಮುದ್ದಾಗಿದೆ ನೋಡಿ ಈ ಅಡ್ಡಹೆಸರು!

Fri, 22 Mar 2024-9:03 pm,

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಪ್ರಾರಂಭಗೊಂಡಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯುತ್ತಿದೆ.

ಮೊದಲು ಟಾಸ್ ಗೆದ್ದ ಬೆಂಗಳೂರು ಬ್ಯಾಟಿಂಗ್ ಆಯ್ದುಕೊಂಡಿದ್ದ ಭರ್ಜರಿ ಪ್ರದರ್ಶನ ನೀಡುತ್ತಿದೆ. ಆರಂಭಿಕರಾಗಿ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಕಣಕ್ಕಿಳಿದಿದ್ದಾರೆ.

ಅಂದಹಾಗೆ ಈ ಪಂದ್ಯ ಪ್ರಾರಂಭಕ್ಕೂ ಮುನ್ನ ಬೆಂಗಳೂರು ತಂಡ ಮಾಜಿ ಆಟಗಾರ, ಮಿಸ್ಟರ್ 360 ಖ್ಯಾತಿಯ ಎಬಿ ಡಿ ವಿಲಿಯರ್ಸ್ ತನ್ನ ಗೆಳಯ ವಿರಾಟ್’ಗೆ ವಿಶೇಷವಾದ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ, ಕೊಹ್ಲಿಯನ್ನು ಮುದ್ದಾದ ಅಡ್ಡನಾಮ ಬಳಸಿ ಕರೆದಿದ್ದಾರೆ.

ಅಷ್ಟಕ್ಕೂ ಆ ಅಡ್ಡ ಹೆಸರೇನು ಅಂದುಕೊಂಡಿದ್ದೀರಾ? ಬಿಸ್ಕತ್… ಹೀಗೆಂದು ಸ್ವತಃ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕೊಹ್ಲಿ ಜೊತೆಗಿರುವ ಫೋಟೋ ಶೇರ್ ಮಾಡಿದ ಎಬಿಡಿ, “ಗುಡ್ ಲಕ್ ಬಿಸ್ಕತ್” ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಇವರಿಬ್ಬರು ಕೆಲ ಸಂದರ್ಶನದಲ್ಲಿ ತಮ್ಮ ಸ್ನೇಹದ ಬಗ್ಗೆ ಮಾತನಾಡುವುದನ್ನು ನೋಡಿರುತ್ತೇವೆ.

“ಕೊಹ್ಲಿ ಬಳಿ ಯಾವುದೇ ವಸ್ತು ಚೆನ್ನಾಗಿದೆ ಅಥವಾ ನನಗೆ ಇಷ್ಟವಾಯ್ತು ಎಂದು ಹೇಳಲ್ಲ. ಏಕೆಂದರೆ ಕೆಲ ಗಂಟೆಗಳಲ್ಲಿ ಅದನ್ನು ಆರ್ಡರ್ ಮಾಡಿ ನನಗೆ ಕೊಡಿಸುತ್ತಾನೆ. ಇಲ್ಲವಾದಲ್ಲಿ ಅದೇ ವಸ್ತುವನ್ನು ಗಿಫ್ಟ್ ಆಗಿ ನೀಡುತ್ತಾನೆ” ಎಂದು ಎಬಿಡಿ ಒಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link