“ನಾನು ಐಶ್ವರ್ಯಾಗೆ ತಾಳಿ ಕಟ್ಟಿದ್ದು ಇದೇ ಕಾರಣಕ್ಕೆ.. ವಿನಃ ಇನ್ನೇನು ಅಲ್ಲ”- ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಸೆನ್ಸೇಷನಲ್ ಕಮೆಂಟ್

Tue, 26 Mar 2024-5:57 pm,

16 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಐಶ್ವರ್ಯಾ ರೈ ಹಾಗೂ ಅಭಿಷೇಕ್ ಸಿದ್ಧರಾಗಿದ್ದಾರೆ ಎಂದು ಕೆಲ ಮಾಧ್ಯಮಗಳು ವದಂತಿ ಹಬ್ಬಿಸಿದ್ದವು. ಈ ಬೆನ್ನಲ್ಲೇ ಐಶ್ವರ್ಯಾ ರೈ ಅವರನ್ನು ತಾನು ವಿವಾಹವಾಗಿದ್ದೇಕೆ ಎಂಬ ವಿಷಯವನ್ನು ಬಹಿರಂಗಪಡಿಸಿರುವ ಅಭಿಷೇಕ್ ಅವರ ಸಂದರ್ಶನದ ವಿಡಿಯೋ ವೈರಲ್ ಆಗಿದೆ.

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರದ್ದು ಲವ್ ಕಂ ಅರೇಂಜ್ಡ್ ಮ್ಯಾರೇಜ್. ಜನವರಿ 2007ರಂದು ನ್ಯೂಯಾರ್ಕ್’​ನ ಹೋಟೆಲ್ ಒಂದರಲ್ಲಿ ನಟ ಅಭಿಷೇಕ್, ಐಶ್ವರ್ಯಾಗೆ ಪ್ರೇಮ ನಿವೇದನೆ ಮಾಡಿದ್ದರಂತೆ.

ಉಮ್ರಾವ್ ಜಾನ್ ಸಿನಿಮಾ ಶೂಟಿಂಗ್ ವೇಳೆ ಇವರಿಬ್ಬರಿಗೆ ಪ್ರೀತಿಯಾಗಿದ್ದು, ಬಳಿಕ ಮದುವೆಯಾಗಲು ಈ ಜೋಡಿ ನಿರ್ಧರಿಸಿದ್ದರು.

ಅಂದಹಾಗೆ 2014 ರಲ್ಲಿ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅಭಿಷೇಕ್ ಬಚ್ಚನ್, ಐಶ್ವರ್ಯಾರನ್ನು ತಾನು ಯಾವ ಕಾರಣಕ್ಕೆ ಮದುವೆಯಾದೆ ಎಂಬ ಶಾಕಿಂಗ್ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

“ಐಶ್ವರ್ಯಾ ನಿಮ್ಮನ್ನೇ ಯಾಕೆ ಮದುವೆಯಾದ್ರು?” ಎಂದು ಈ ಕಾರ್ಯಕ್ರಮದ ಹೋಸ್ಟ್ ಆಗಿದ್ದ ಕರಣ್ ಜೋಹರ್, ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಅಭಿಷೇಕ್, “ನಾನು ಅಮಿತಾಭ್ ಬಚ್ಚನ್ ಮಗ ಎಂದಾಗಲಿ ಅಥವಾ ನಟ ಎಂಬ ಕಾರಣಕ್ಕಾಗಲಿ ಐಶ್ವರ್ಯ ನನ್ನನ್ನು ಮದುವೆಯಾಗಲಿಲ್ಲ. ಆಕೆ ವಿಶ್ವಸುಂದರಿ. ಪ್ರಖ್ಯಾತ ನಟಿಯೂ ಹೌದು. ಆದರೆ ಈ ಎಲ್ಲಾ ವಿಷಯ ನೋಡಿಕೊಂಡು ಆಕೆಯನ್ನು ನಾನು ಮದುವೆಯಾಗಿಲ್ಲ” ಎಂದಿದ್ದಾರೆ.

“ಬದಲಾಗಿ ನಾವು ಪರಸ್ಪರ ಪ್ರೀತಿಸುತ್ತಿದ್ದೆವು. ಇದೇ ಕಾರಣಕ್ಕೆ ನಾನು ಅವಳಿಗೆ ತಾಳಿ ಕಟ್ಟಿದೆ. ವಿನಃ ಬೇರೆನೂ ಅಲ್ಲ” ಎಂದು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link