ವ್ಯಾಯಾಮ-ಡಯೆಟ್ ಎಂತದ್ದೂ ಬೇಡ… ಕುಳಿತುಕೊಂಡು ಇದನ್ನು ನೋಡಿದ್ರೆ ಸಾಕು ತೂಕ ಇಳಿಯುತ್ತೆ!

Sun, 31 Dec 2023-9:27 pm,

ಡಯಟ್ ಅಥವಾ ವ್ಯಾಯಾಮದ ಅಗತ್ಯವೇ ಇಲ್ಲದೆ, ಕುಳಿತಲ್ಲೇ ತೂಕ ಇಳಿಕೆ ಮಾಡಬಹುದು ಎಂದು ಸಂಶೋಧನೆ ಬಹಿರಂಗಪಡಿಸಿದೆ.

ಯುನೈಟೆಡ್ ಕಿಂಗ್‌ಡಮ್‌ ವೆಸ್ಟ್‌ ಮಿನಿಸ್ಟರ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಹಾರರ್ ಸಿನಿಮಾಗಳನ್ನು ನೋಡಿದರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ಹಾರರ್ ಸಿನಿಮಾಗಳನ್ನು ನೋಡುವಾಗ ಉಸಿರಾಟದ ಬದಲಾವಣೆಯು ಚಯಾಪಚಯ ಪ್ರಕ್ರಿಯೆಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ. ಹೀಗಾದಾಗ ದೇಹದಲ್ಲಿ ಸುಲಭವಾಗಿ ಕ್ಯಾಲೊರಿ ಇಳಿಕೆಯಾಗುತ್ತೆ.

ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಸುಮಾರು 10 ಜನರು ಭಾಗವಹಿಸಿದ್ದರು. ಹಾರರ್ ಸಿನಿಮಾ ನೋಡುವಾಗ,  ಆಮ್ಲಜನಕದ ಮಟ್ಟದಲ್ಲಿನ ಬದಲಾವಣೆ ಮತ್ತು ಹೊರಸೂಸುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಸಂಶೋಧಕರು ಗಮನಿಸಿದ್ದರು. ಈ ಸಂದರ್ಭದಲ್ಲಿ ದೊರೆತ ಫಲಿತಾಂಶಗಳ ಆಧಾರದ ಮೇಲೆ ಸಂಶೋಧಕರು ಮಾಹಿತಿಯನ್ನು ನೀಡಿದ್ದಾರೆ.

ಅಧ್ಯಯನದ ಪ್ರಕಾರ, ಸರಾಸರಿ 90 ನಿಮಿಷಗಳ ಕಾಲ ಹಾರರ್ ಚಲನಚಿತ್ರವನ್ನು ವೀಕ್ಷಿಸಿದಾಗ, ದೇಹದಿಂದ 113 ಕ್ಯಾಲೊರಿಗಳು ಬರ್ನ್ ಆಗಿವೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಪ್ರಕಾರ ನೀಡಿದ ಮಾಹಿತಿಯಾಗಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link