Garuda Purana: ಈ 5 ಅಭ್ಯಾಸಗಳು ವ್ಯಕ್ತಿಯನ್ನು ಬಡವನನ್ನಾಗಿ ಮಾಡುತ್ತವಂತೆ!

Wed, 06 Apr 2022-10:06 am,

ಕೊಳಕು ಬಟ್ಟೆಗಳನ್ನು ಧರಿಸುವುದು :  ಗರುಡ ಪುರಾಣದ ಪ್ರಕಾರ ಕೊಳಕು ಬಟ್ಟೆಯನ್ನು ಧರಿಸುವ ವ್ಯಕ್ತಿಯೊಂದಿಗೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಲಕ್ಷ್ಮಿ ಮಾತೆ ಸ್ವಚ್ಛತೆಯನ್ನು ತುಂಬಾ ಪ್ರೀತಿಸುತ್ತಾಳೆ. ಅದಕ್ಕಾಗಿ ಸದಾ ಶುಚಿಯಾಗಿರುವ ಮನೆಯಲ್ಲಿ ಲಕ್ಷ್ಮಿ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ. 

ಹಣ ವ್ಯರ್ಥ ಮಾಡುವುದು : ಗರುಡ ಪುರಾಣದ ಪ್ರಕಾರ, ಹಣ ಅಥವಾ ಹಣದ ಬಗ್ಗೆ ಹೆಚ್ಚು ಅಹಂಕಾರ ಇರಬಾರದು.  ಇದಲ್ಲದೆ, ಹಣವನ್ನು ಬೇಕಾಬಿಟ್ಟಿ ವ್ಯರ್ಥವಾಗಿ ಖರ್ಚು ಮಾಡುವವರ ಬಳಿ ಲಕ್ಷ್ಮಿ ದೀರ್ಘಕಾಲ ನೆಲೆಸುವುದಿಲ್ಲ. ಇದರಿಂದ ಬಡತನಕ್ಕೆ ಆಹ್ವಾನ ನೀಡಿದಂತೆ ಎನ್ನಲಾಗಿದೆ.  ಅಂತಹ ಸ್ವಭಾವ ಮತ್ತು ಗುಣವುಳ್ಳವರ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುವುದಿಲ್ಲ. 

ಶ್ರದ್ದೆಯಿಂದ ದುಡಿಯದ ಜನರು: ಯಾವುದೇ ಒಬ್ಬ ವ್ಯಕ್ತಿಯು ಶ್ರದ್ಧೆಯಿಂದ  ಮತ್ತು ಕೊಟ್ಟ ಕೆಲಸವನ್ನು ಸರಿಯಾಗಿ ಮಾಡದಿದ್ದರೆ, ಮಾ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಗರುಡ ಪುರಾಣದಲ್ಲಿ, ಅಂತಹ ಸ್ವಭಾವವನ್ನು ತಪ್ಪಿಸಲು ಹೇಳಲಾಗಿದೆ. 

ಸಮಯ ವ್ಯರ್ಥ ಮಾಡುವವರು:  ಗರುಡ ಪುರಾಣದ ಪ್ರಕಾರ, ಆರಾಮವಾಗಿ ಸಮಯ ಕಳೆಯುವ ಜನರು ಅಥವಾ ಸಮಯವನ್ನು ವ್ಯರ್ಥ ಮಾಡುವ ಜನರ ಮೇಲೆ ದೇವತೆಗಳು ಕೋಪಗೊಳ್ಳುತ್ತಾರೆ. ಅವರ ಜೀವನದಲ್ಲಿ ಬಡತನ ಬರುತ್ತದೆ. ಹಾಗೆಯೇ ದೇಹವನ್ನು ಶುಚಿಗೊಳಿಸದವರ ಜೀವನದಲ್ಲಿ ಬಡತನದ ಪರಿಸ್ಥಿತಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ.

ಇತರರನ್ನು ದೂಷಿಸುವವರು: ಗರುಡ ಪುರಾಣದ ಪ್ರಕಾರ, ಇತರರ ನ್ಯೂನತೆಗಳನ್ನು ಮಾತ್ರ ಹೊರಹಾಕುವ ಅಥವಾ ಸದಾ ಇತರರನ್ನು ದೂಷಿಸುವ ಜನರೊಂದಿಗೆ ತಾಯಿ ಲಕ್ಷ್ಮಿ ಸಿಟ್ಟಾಗುತ್ತಾಳೆ. ಇದಲ್ಲದೇ ಅನಾವಶ್ಯಕವಾಗಿ ಇತರರನ್ನು ಬೈಯುವುದು ಅಥವಾ ವಿನಾಕಾರಣ ಇತರರಿಗೆ ನೋವುಂಟು ಮಾಡುವುದು ಸಹ ಬಡತನವನ್ನು ಆಹ್ವಾನಿಸಿದಂತೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link