ಇವತ್ತಲ್ಲ... ನಾಳೆ ನಡೆಯಲಿದೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ! ವಾಜಪೇಯಿ, ಇಂದಿರಾ ಗಾಂಧಿ ಸಮಾಧಿ ಇದ್ದ ಸ್ಥಳದಲ್ಲೇ ʼಮಾಜಿ ಪ್ರಧಾನಿʼಯ ಅಂತ್ಯಸಂಸ್ಕಾರ!

Fri, 27 Dec 2024-3:38 pm,

ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ಅಸುನೀಗಿದ್ದಾರೆ. 92 ವರ್ಷ ವಯಸ್ಸಿನವರಾಗಿದ್ದ ಅವರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಗುರುವಾರ ರಾತ್ರಿ ಮನೆಯಲ್ಲಿ ಪ್ರಜ್ಞೆ ತಪ್ಪಿದ ನಂತರ ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ರಾತ್ರಿ 9.51 ರ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಮನಮೋಹನ್ ಸಿಂಗ್ ಅವರ ನಿಧನದ ನಂತರ ಭಾರತ ಸರ್ಕಾರ 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಇರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರೆಗೆ ಮತ್ತು ರಾಜಕೀಯ ಜಗತ್ತಿನ  ಅನೇಕರು ಆಗಮಿಸಿ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದ್ದಾರೆ.

ಮಾಹಿತಿ ಪ್ರಕಾರ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಶನಿವಾರದಂದು ನಡೆಯಲಿದೆ. ಅವರ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಪ್ರಧಾನ ಕಚೇರಿಗೆ ತರಲಾಗುವುದು, ಅಲ್ಲಿಂದ ಅಂತಿಮ ಯಾತ್ರೆ ನಡೆಯಲಿದೆ. ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ರಾಜ್‌ಘಾಟ್‌ನಲ್ಲಿ ನಡೆಯಲಿದೆ. ರಾಜ್‌ಘಾಟ್‌ ಮಹಾತ್ಮಾ ಗಾಂಧಿಯವರ ಸಮಾಧಿಯಾಗಿದೆ. ಹಲವು ಮಾಜಿ ಪ್ರಧಾನಿಗಳ ಅಂತಿಮ ಸಂಸ್ಕಾರವನ್ನು ಇದೇ ಸ್ಥಳದಲ್ಲಿ ನೆರವೇರಿಸಲಾಗಿದೆ.

ಇನ್ನು ರಾಜ್‌ಘಾಟ್‌ನಲ್ಲಿ ಯಾರನ್ನು ದಹನ ಮಾಡಲಾಗುತ್ತದೆ? ಇಲ್ಲಿಯ ಪ್ರೋಟೋಕಾಲ್ ಏನು? ಇಲ್ಲಿಯವರೆಗೆ ಇಲ್ಲಿ ಯಾರನ್ನೆಲ್ಲಾ ದಹನ ಮಾಡಲಾಗಿದೆ? ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

ಅಂತ್ಯಕ್ರಿಯೆ ಎಲ್ಲಿ? ಯಾವುದೇ ಮಾಜಿ ಪ್ರಧಾನಿಯ ಮರಣದ ನಂತರ, ಅವರ ಅಂತಿಮ ವಿಧಿಗಳನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ಮಾಡಲಾಗುತ್ತದೆ. ಅವರ ಪಾರ್ಥಿವ ಶರೀರವನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿಡಲಾಗುತ್ತದೆ. ಅಲ್ಲದೆ, ಮಾಜಿ ಪ್ರಧಾನಿಗೆ 21 ಗನ್ ಸೆಲ್ಯೂಟ್ ಕೂಡ ನೀಡಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ಪ್ರಧಾನಿಯ ಅಂತಿಮ ಸಂಸ್ಕಾರಗಳು ವಿಶೇಷ ಸ್ಮಾರಕ ಸ್ಥಳದಲ್ಲಿ ಮಾತ್ರ ನಡೆಯುತ್ತವೆ. ಆದರೆ, ಅಂತ್ಯಕ್ರಿಯೆ ಎಲ್ಲಿ ನಡೆಯಲಿದೆ ಎಂಬ ನಿರ್ಧಾರವನ್ನು ಕುಟುಂಬ ಸದಸ್ಯರು ಮತ್ತು ಸರ್ಕಾರ ತೆಗೆದುಕೊಳ್ಳುತ್ತದೆ. ಕುಟುಂಬ ಸದಸ್ಯರು ಬಯಸಿದಲ್ಲಿ, ಅವರ ಅಂತ್ಯಕ್ರಿಯೆಯನ್ನು ಅವರ ಸ್ವಂತ ರಾಜ್ಯದಲ್ಲಿಯೂ ಮಾಡಬಹುದು.

ರಾಜ್‌ಘಾಟ್‌ನಲ್ಲಿ ವಿಶೇಷ ಪ್ರೋಟೋಕಾಲ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ರಾಜ್‌ಘಾಟ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರಾಜ್‌ಘಾಟ್‌ನಲ್ಲಿ ಅಂತಿಮ ಸಂಸ್ಕಾರಕ್ಕೆ ಹಲವು ನಿಯಮಗಳಿವೆ. ಸಾಮಾನ್ಯವಾಗಿ ಮಾಜಿ ಪ್ರಧಾನಿಗಳ ಮತ್ತು ವಿಶೇಷ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾತ್ರ ಇಲ್ಲಿ ಮಾಡಲಾಗುತ್ತದೆ. ರಾಜ್‌ಘಾಟ್‌ನಲ್ಲಿ ಅಂತ್ಯಕ್ರಿಯೆಯ ಸಮಯದಲ್ಲಿ, ವಿಶೇಷ ಭದ್ರತಾ ಪ್ರೋಟೋಕಾಲ್‌ಗಳೊಂದಿಗೆ ಸಂಪೂರ್ಣ ರಾಜ್ಯ ಗೌರವಗಳನ್ನು ಅನುಸರಿಸಲಾಗುತ್ತದೆ. ಮಾಜಿ ಪ್ರಧಾನಿಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಪ್ರಧಾನಿ ಮತ್ತು ಕೇಂದ್ರ ಸಚಿವರು ಸಹ ಹಾಜರಿರುತ್ತಾರೆ. ಇದಲ್ಲದೆ, ಸೇನಾ ಬ್ಯಾಂಡ್ ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿ ಕೂಡ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಾರೆ

ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಯವರ ಸಮಾಧಿ ಇದೆ. ಇನ್ನು ಹಲವು ಮಾಜಿ ಪ್ರಧಾನಿಗಳ ಅಂತಿಮ ಸಂಸ್ಕಾರವನ್ನು ಸಹ ಇಲ್ಲಿಯೇ ನೆರವೇರಿಸಲಾಗಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವು ಮಾಜಿ ಪ್ರಧಾನಿಗಳ ಅಂತಿಮ ಸಂಸ್ಕಾರವನ್ನು ರಾಜ್‌ಘಾಟ್‌ನಲ್ಲಿ ನೆರವೇರಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link