Black Clothes: ಹೆಚ್ಚಾಗಿ ಕಪ್ಪು ಬಟ್ಟೆ ಧರಿಸುವವರ ವ್ಯಕ್ತಿತ್ವ ಹೀಗಿರುತ್ತದೆ...! ಆಶ್ಚರ್ಯವಾದ್ರೂ ಇದು ಸತ್ಯ
ನಮ್ಮ ಜೀವನದಲ್ಲಿ ಬಣ್ಣಗಳು ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿವೆ. ಪ್ರತಿಯೊಂದು ಬಣ್ಣವು ಕೆಲವು ಕಲ್ಪನೆ, ಆಲೋಚನೆ ಮತ್ತು ಶಕ್ತಿಯನ್ನು ತರುತ್ತದೆ. ಕಪ್ಪು ಬಣ್ಣದಲ್ಲೂ ಕೂಡ ಇದೇ ನಡೆಯುವುದು. ಅಂದರೆ ಕೆಲವರಿಗೆ ಪ್ರತಿ ದಿನ ಕಪ್ಪು ಬಟ್ಟೆ ಹಾಕಿದರೂ ಸಾಕಾಗುವುದಿಲ್ಲ... ಅಷ್ಟೊಂದು ಇಷ್ಟಪಡುತ್ತಾರೆ. ಅಂತಹ ಕಪ್ಪು ಬಟ್ಟೆ ಧರಿಸುವವರ ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ನೀವು ಎಂದಾದರೂ ತಿಳಿದಿದ್ದೀರಾ?
ಧರ್ಮಗ್ರಂಥಗಳಲ್ಲಿ, ಕಪ್ಪು ಬಣ್ಣದ ಬಟ್ಟೆಗಳು ನಕಾರಾತ್ಮಕತೆಗೆ ಸಂಬಂಧಿಸಿವೆ. ಕಪ್ಪು ಬಟ್ಟೆಯನ್ನೇ ಹೆಚ್ಚಾಗಿ ಧರಿಸುವ ಜನರ ಜೀವನದ ಮೇಲೆ ಕೆಟ್ಟ ಶಕ್ತಿಗಳು ಪರಿಣಾಮ ಬೀರುತ್ತವೆ ಎಂಬುದು ನಂಬಿಕೆ.
ಅಷ್ಟೇ ಅಲ್ಲದೆ, ರಾಹು ಮತ್ತು ಶನಿಯನ್ನು ಉತ್ತೇಜಿಸುತ್ತದೆ, ಇದರಿಂದಾಗಿ ನೀವು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಇಂತಹವರ ಜೀವನದಲ್ಲಿ ಘರ್ಷಣೆಗಳು ಹೆಚ್ಚಾಗಬಹುದು, ಒಂಟಿತನ ಉಂಟಾಗಬಹುದು ಮತ್ತು ಖಿನ್ನತೆಯಂತಹ ಕಾಯಿಲೆಗಳಿಗೆ ಬಲಿಯಾಗಬಹುದು. ಈ ಜನರು ಒಳಗಿನಿಂದ ತುಂಬಾ ಪ್ರಕ್ಷುಬ್ಧರಾಗಿರು ಆದರೆ ಹೊರಗಿನಿಂದ ಎಲ್ಲವನ್ನೂ ಮರೆಮಾಡುತ್ತಾರೆ.
ಇನ್ನು ಮನೋವಿಜ್ಞಾನದ ಪ್ರಕಾರ, ಕಪ್ಪು ಬಣ್ಣದ ಬಗ್ಗೆ ಬಹಳಷ್ಟು ಹೇಳಲಾಗಿದೆ. ಕಪ್ಪು ಬಟ್ಟೆ ಧರಿಸುವ ಜನರು ಅತ್ಯಂತ ಶಕ್ತಿಶಾಲಿ ಎಂದು ತೋರಿಸಲು ಬಯಸುತ್ತಾರೆ, ಆದರೆ ಅವರ ಮನಸ್ಸಿನಲ್ಲಿ ಶಾಂತಿ ಇರುವುದಿಲ್ಲ.
ಕಪ್ಪು ಬಣ್ಣವು ಶಕ್ತಿ, ಔಪಚಾರಿಕತೆ, ದುಷ್ಟ, ಸಾವು, ಶೋಕ, ಮಂದತನ, ಭಾರ, ಖಿನ್ನತೆ ಮತ್ತು ದಂಗೆಯಂತಹ ಭಾವನೆಗಳನ್ನು ತರುತ್ತದೆ. ಅಂದರೆ ಅಸಮತೋಲನವನ್ನು ಉಂಟುಮಾಡುತ್ತದೆ ಮತ್ತು ಶಾಂತಿಯನ್ನು ನಾಶಪಡಿಸುತ್ತದೆ.
ಆದ್ದರಿಂದ ಹೆಚ್ಚಾಗಿ ಕಪ್ಪು ಬಣ್ಣದ ಬಟ್ಟೆ ಧರಿಸದಿರುವುದು ಒಳ್ಳೆಯದು. ಒಂದು ವೇಳೆ ನಿಮಗೆ ಗಾಢ ಬಣ್ಣದ ಬಟ್ಟೆಗಳು ಇಷ್ಟವಾಗುತ್ತಿದ್ದರೆ, ನೀಲಿ ಬಣ್ಣವನ್ನು ಆರಿಸಿ. ಆದರೆ ಶುದ್ಧ ಕಪ್ಪು ಬಟ್ಟೆಗಳನ್ನು ಧರಿಸದಿರುವುದು ಉತ್ತಮ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಬಗ್ಗೆ ಯಾವುದೇ ದೃಢೀಕರಣವನ್ನು ನೀಡಿಲ್ಲ