ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲೇ ಇಡಿ.. ಸಂಪತ್ತು ವೃದ್ಧಿಯಾಗಿ ಸುಖ ಸಂತೋಷ ಹೆಚ್ಚುತ್ತದೆ! ಹೊಣದ ಕೊರತೆ ಸಾಲಬಾಧೆ ಎಂದೆಂದಿಗೂ ಕಾಡುವುದಿಲ್ಲ
ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ಮಹತ್ವವಿದೆ. ಎಲ್ಲವನ್ನೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಇರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ.
ಪೊರಕೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಪೊರಕೆಯನ್ನು ಎಲ್ಲಿ ಇಡಬೇಕು ಮತ್ತು ಯಾವಾಗ ಖರೀದಿಸಬೇಕು ಎಂದು ಉಲ್ಲೇಖಿಸಲಾಗಿದೆ.
ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ನಡುವಿನ ಸ್ಥಳವು ಪೊರಕೆಯನ್ನು ಇಡಲು ಉತ್ತಮವೆಂದು ಪರಿಗಣಿಸಲಾಗಿದೆ.
ಪೊರಕೆಯನ್ನು ಎಂದಿಗೂ ನಿಂತಿರುವಂತೆ ಇಡಬಾರದು. ಬದಲಿಗೆ ಯಾವಾಗಲೂ ಪೊರಕೆಯನ್ನು ಮಲಗಿಸಿ ಇಡಬೇಕು.
ಅಡುಗೆ ಮನೆಯಲ್ಲಿ ಪೊರಕೆ ಇಡಬಾರದು. ಎರಡು ಪೊರಕೆಯನ್ನು ಎಂದಿಗೂ ಕೂಡಿಸಿ ಇಡಬಾರದು.
ಪೊರಕೆಗೆ ಸಂಬಂಧಿಸಿದ ಈ ನಿಯಮ ಪಾಲಿಸಿದರೆ ಲಕ್ಷ್ಮಿ ದೇವಿ ಸಂತೋಷಗೊಳ್ಳುತ್ತಾಳೆ. ಸಂಪತ್ತು ವೃದ್ಧಿಯಾಗುತ್ತದೆ. ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)