ಮಲಗುವಾಗ ದಿಂಬಿನ ಪಕ್ಕ ಈ 5 ವಸ್ತುಗಳನ್ನು ಇಡಬೇಡಿ.. ಲಕ್ಷ್ಮೀ ದೇವಿ ಕೋಗೊಳ್ಳುವಳು, ದಾರಿದ್ರ್ಯ ವಕ್ಕರಿಸಿ ಸಿರಿವಂತನೂ ಬಡವನಾಗುವ!

Mon, 28 Oct 2024-7:25 pm,

ಮಲಗುವ ಸಮಯದಲ್ಲಿ ದಿಂಬಿನ ಪಕ್ಕ ಅಥವಾ ಕೆಳಗಡೆ ಕೆಲವು ವಸ್ತುಗಳನ್ನು ಇಡಬಾರು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. 

 ವಾಸ್ತು ಶಾಸ್ತ್ರದಲ್ಲಿ ಅನೇಕ ವಿಚಾರಗಳನ್ನು ತಿಳಿಸಲಾಗಿದೆ. ಅದರಲ್ಲೂ ಮಲಗುವ ಕೋಣೆ ಮತ್ತು ಮಲಗುವ ದಿಕ್ಕು ವಾಸ್ತು ಪ್ರಕಾರವಾಗಿದ್ದರೆ ಅದೃಷ್ಟ ಖುಲಾಯಿಸುವುದು.  

ಕೆಲವು ವಸ್ತುಗಳು ನಮಗೆ ಅದೃಷ್ಟವನ್ನು ತಂದರೇ, ಒಂದಿಷ್ಟು ವಸ್ತುಗಳು ದುರಾದೃಷ್ಟ ತರುತ್ತವೆ. ಇದು ಅವುಗಳನ್ನು ಇಡುವ ಜಾಗದ ಮೇಲೆ ಅವಲಂಬಿತವಾಗಿರುತ್ತದೆ.

ವಾಸ್ತು ಪ್ರಕಾರ ಕೆಲವು ವಸ್ತುಗಳು ನಮಗೆ ದುರಾದೃಷ್ಟವನ್ನು ತರುತ್ತವೆ. ಮಲಗುವ ಸಮಯದಲ್ಲಿ ಒಂದಿಷ್ಟು ವಸ್ತುಗಳನ್ನು ತಲೆ ದಿಂಬಿನ ಪಕ್ಕದಲ್ಲಿ ತಪ್ಪಿಯೂ ಇಡಬಾರದು. 

ದಿಂಬಿನ ಬಳಿ ಪರ್ಸ್ ಇಡಬಾರದ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ದಿಂಬಿನ ಬಳಿ ಹಣಕ್ಕೆ ಸಂಬಂಧಿಸಿದ ಯಾವುದೇ ವಸ್ತು ಇಟ್ಟು ಮಲಗುವುದು ಅಶುಭ. ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ 

ಔಷಧಿಗಳನ್ನು ದಿಂಬಿನ ಬಳಿ ಅಥವಾ ಮಂಚದ ಪಕ್ಕದಲ್ಲಿ ಇಡಬಾರದು. ಇದರಿಂದ ಮನೆಯ ಜನರು ಅನಾರೋಗ್ಯಕ್ಕೆ ತುತ್ತಾಗುವರು. ಇದು ರೋಗಗಳನ್ನು ಉಂಟುಮಾಡಬಹುದು. 

ದಿಂಬಿನ ಪಕ್ಕದಲ್ಲಿ ಪುಸ್ತಕವನ್ನು ಇಟ್ಟು ಮಲಗಬಾರದು. ಇದರಿಂದ ನಕಾರಾತ್ಮಕತೆ ಉಂಟಾಗುತ್ತದೆ. ವೃತ್ತಿಜೀವನಕ್ಕೂ ಅಡ್ಡಿಯಾಗಬಹುದು.

ಹಾಸಿಗೆಯ ಬಳಿ ಚಪ್ಪಲಿ ಇಡಬಾರದು. ಇದು ಮನೆಯಲ್ಲಿ ಆರ್ಥಿಕ ಸಮಸ್ಯೆಗಳನ್ನೂ ಉಂಟುಮಾಡಬಹುದು.

ಚಿನ್ನ ಮತ್ತು ಬೆಳ್ಳಿ ಹಾಸಿಗೆಯ ಬಳಿ ಇಡಬಾರದು. ಇದರಿಂದ ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು.   

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ, ಪಂಚಾಂಗ, ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ZEE KANNADA NEWS ಅನುಮೋದಿಸುವುದಿಲ್ಲ. ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link