Money Vastu Tips: ಪರ್ಸ್‌ನಲ್ಲಿ ಈ ವಸ್ತುಗಳಿದ್ದರೆ ಎಂದಿಗೂ ಕಾಡಲ್ಲ ಹಣದ ಕೊರತೆ

Thu, 11 Aug 2022-10:18 am,

ಹಣದ ಕೊರತೆಯನ್ನು ನೀಗಿಸಲು ವಾಸ್ತು ಶಾಸ್ತ್ರದಲ್ಲಿ ಹಲವು ವಿಧಾನಗಳನ್ನು ಸೂಚಿಸಲಾಗಿದೆ. ಈ ಅನುಕ್ರಮದಲ್ಲಿ, ಕೆಲವು ವಿಶೇಷ ವಸ್ತುಗಳು ಯಾವಾಗಲೂ ಪರ್ಸ್‌ನಲ್ಲಿರಬೇಕು ಎಂದು ನಂಬಲಾಗಿದೆ. ಈ ವಸ್ತುಗಳನ್ನು ಪರ್ಸ್‌ನಲ್ಲಿ ಇಡುವುದರಿಂದ  ಹಣದ ಕೊರತೆಯಾಗುವುದಿಲ್ಲ ಮತ್ತು ಇದರ ಹೊರತಾಗಿ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎನ್ನಲಾಗಿದೆ.  ಆದರೆ, ನೆನಪಿಡಿ ಆ ಪರ್ಸ್ ಎಂದಿಗೂ ಚರ್ಮದಿಂದ ಮಾಡಿರಬಾರದು. ಚರ್ಮದ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. 

ಕಮಲದ ಬೀಜ: ವಾಸ್ತು ಶಾಸ್ತ್ರದಲ್ಲಿ, ಕಮಲದ ಬೀಜಗಳನ್ನು ಬಹಳ ವಿಶೇಷವೆಂದು ವಿವರಿಸಲಾಗಿದೆ. ಲಕ್ಷ್ಮಿ ಕಮಲ ಪ್ರಿಯೆ. ಕಮಲದ ಬೀಜವು ಲಕ್ಷ್ಮಿ ದೇವಿಯನ್ನು ಸಂತೋಷವಾಗಿರಿಸುತ್ತದೆ ಎಂದು ನಂಬಲಾಗಿದೆ. ಪರ್ಸ್ ನಲ್ಲಿ ಕಮಲದ ಬೀಜ ಇಡುವುದರಿಂದ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಇದು ಆರ್ಥಿಕ ಲಾಭವನ್ನು ನೀಡುವುದಲ್ಲದೆ ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ ಎಂಬ ನಂಬಿಕೆ ಇದೆ.

ಅರಳಿ ಎಲೆ : ಅರಳಿ ಎಲೆಗಳಲ್ಲಿ ಭಗವಾನ್ ವಿಷ್ಣು ವಾಸಿಸುತ್ತಾನೆ ಎಂದು ಹೇಳಲಾಗುತ್ತದೆ.  ವಿಷ್ಣುವಿನ ಅನುಗ್ರಹವಿದ್ದರೆ ಲಕ್ಷ್ಮಿಯು ಒಲಿಯುತ್ತಾಳೆ. ಆದ್ದರಿಂದ, ಅರಳಿ ಎಲೆಯನ್ನು ಗಂಗಾಜಲದಲ್ಲಿ ತೊಳೆದು  ಎಲೆಯ ಮೇಲೆ ಕುಂಕುಮದಿಂದ ಶ್ರೀ ಎಂದು ಬರೆಯಿರಿ. ನಂತರ ಅದನ್ನು ನಿಮ್ಮ ಪರ್ಸ್‌ನಲ್ಲಿಡಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಹಣದ ಮಳೆಯೇ ಹರಿಯಲಿದೆ ಎಂದು ನಂಬಲಾಗಿದೆ. ಆದರೆ ಈ ಎಲೆಯನ್ನು ಯಾರಿಗೂ ಕಾಣದ ರೀತಿಯಲ್ಲಿ ಇರಿಸಿಕೊಳ್ಳಿ.   

ಶ್ರೀ ಯಂತ್ರ: ಶ್ರೀ ಯಂತ್ರವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ನಿಮ್ಮ ಪರ್ಸ್‌ನಲ್ಲಿ ಸಣ್ಣ ಶ್ರೀ ಯಂತ್ರವನ್ನು ಇಟ್ಟುಕೊಳ್ಳುವುದರಿಂದ, ನೀವು ಯಾವಾಗಲೂ ಸಕಾರಾತ್ಮಕತೆಯಿಂದ ತುಂಬಿರುತ್ತೀರಿ. ಇದು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ಗೋಮತಿ ಚಕ್ರ : ಪರ್ಸ್‌ನಲ್ಲಿ 7 ಗೋಮತಿ ಚಕ್ರಗಳನ್ನು ಇಟ್ಟುಕೊಂಡರೆ ಸಂಪತ್ತು ಸಿಗುತ್ತದೆ. ಮಾತ್ರವಲ್ಲ ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link