ಚಂದ್ರಮುಖಿ ಸಿನಿಮಾದ ಈ ನಟ ನಿಮಗೆ ನೆನಪಿದ್ದಾರಾ..? ಈ ಟಾಪ್ ನಟನ ಪತ್ನಿ ಈ ಖ್ಯಾತ ನಟಿ!! ಯಾರು ಗೊತ್ತಾ..?
Actor Avinash Wife: ಸೌತ್ ಫಿಲಿಂ ಇಂಡಸ್ಟ್ರಿಯಲ್ಲಿ ಮೈ ನಡುಗಿಸಿದ ಟಾಪ್ ಹಾರರ್ ಸಿನಿಮಾಗಳಲ್ಲಿ ಚಂದ್ರಮುಖಿ ಸಿನಿಮಾ ಕೂಡ ಒಂದು. ಈ ಸಿನಿಮಾದಲ್ಲಿ ನಮ್ಮನ್ನು ಹೆಚ್ಚಾಗಿ ಆಕರ್ಶಿಸುವುದು ಸಾದುವಿನ ಪಾತ್ರ ಅಷ್ಟಕ್ಕೂ ಈ ಪಾತ್ರದಲ್ಲಿ ನಟಿಸಿರುವ ಈ ಖ್ಯಾತ ನಟ ನಿಮಗೆ ನೆನಪಿರಬಹದು. ಆದರೆ ಈ ನಟನ ಪತ್ನಿ ಕೂಡ ಒಬ್ಬ ಸ್ಟಾರ್ ನಟಿ ಆಕೆ ಯಾರು ಗೊತ್ತಾ..?
ಇಂದಿಗೂ ಕೂಡ ಈ ಸಿನಿಮಾ ಟಿವಿಯಲ್ಲಿ ಪ್ರಸಾರವಾದರೆ, ನಾವು ಬೇರೆ ಚಾನೆಲ್ ಚೇಂಜ್ ಮಾಡದೆ ಸಿನಿಮಾ ನೋಡುತ್ತಾರೆ. ತುಂಬಾ ರಿಪೀಟ್ ವ್ಯಾಲ್ಯೂ ಇರುವ ಸಿನಿಮಾ ಇದು. ಆದ್ರೂ ಸೌತ್ ನಲ್ಲಿ ಟಾಪ್ 10 ಬೆಸ್ಟ್ ಹಾರರ್ ಸಿನಿಮಾಗಳ ಪಟ್ಟಿ ಮಾಡಿದರೆ ಚಂದ್ರಮುಖಿ ಟಾಪ್ ಪ್ಲೇಸ್ ನಲ್ಲಿ ಇರುತ್ತೆ.
ಈ ಸಿನಿಮಾ ನೋಡುವಾಗ ಎಷ್ಟು ಥ್ರಿಲ್ಲಿಂಗ್ ಅನ್ನಿಸುತ್ತದೋ, ಅದೇ ರೇಂಜ್ಗೆ ಭಯ ಕೂಡ ಹುಟ್ಟುಹಾಕುತ್ತದೆ. ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಅದರಲ್ಲೂ ದ್ವಿತಿಯಾರ್ಧದಲ್ಲಿ ಸಿದ್ಧಾಂತಿ ಪಾತ್ರ ಸಿನಿಮಾದ ಹೈಲೈಟ್ಗಳಲ್ಲೊಂದು.
ಈ ಪಾತ್ರದಲ್ಲಿ ನಟಿಸಿರುವುದು ಬೇರೆ ಯಾರು ಅಲ್ಲ, ಕನ್ನಡದ ಖ್ಯಾತ ನಟ ಅವಿನಾಶ್. ವಯಸ್ಸಿಗೆ ತಕ್ಕನಾದ ಪಾತ್ರ ಅಲ್ಲದಿದ್ದರೂ ಕೂಡ, ಗುರುತೇ ಸಿಗದಂತಹ ಪಾತ್ರವನ್ನು ಅವಿನಾಶ್ ಅವರು ನಿರ್ವಹಿಸಿದ್ದರು. ತಕ್ಷಣದಲ್ಲಿ ಈ ಸಿನಿಮಾದಲ್ಲಿ ಅವರನ್ನು ನೋಡಿದರೆ, ಇವರನ್ನು ಗುರುತು ಹಿಡಿಯಲು ಸಾದ್ಯವಾಗುವುದೇ ಇಲ್ಲ.
ಅವಿನಾಶ್ ಎಷ್ಟು ಪರಿಚಿತರೋ, ನಮ್ಮ ಕನ್ನಡ ಚಿತ್ರರಂಗಕ್ಕೆ ಅವರ ಹೆಂಡತಿ ಕೂಡ ಅಷ್ಟೆ ಚಿರಪರಿಚಿತರು. ಅಷ್ಟಕ್ಕೂ ಇವರ ಪತ್ನಿ ಯಾರು ಎಂಬುದಕ್ಕೆ ವಿಶೇಷ ಪರಿಚಯದ ಅಗತ್ಯವಿಲ್ಲ.
ನಟಿ ಮಾಳವಿಕಾ ಅವಿನಾಶ್ ನಿಮಗೆಲ್ಲರಿಗೂ ಗೊತ್ತೆ ಇರಬಹದು. ಕೆಜಿಎಫ್ ಸಿನಿಮಾದಲ್ಲಿ ಮುಕ್ಯ ಪಾತ್ರದಲ್ಲಿ ನಟಿಸಿದ್ದ ಈಕೆ ಈ ಸಿನಿಮಾಗೂ ಮುಂಚೆ ಹಲವಾರು ಸಿನಿಮಾಗಳು ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ, ಅದಷ್ಟೆ ಅಲ್ಲದೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಕನ್ನಡ ಮಾತ್ರವಲ್ಲ ಮಾಳವಿಕ ಅವಿನಾಶ್ ಅವರು ತೆಲುಗು, ಕನ್ನಡ, ತಮಿಳು ಸೇರಿ ಹಲವು ಪಾತ್ರಗಳಲ್ಲಿ ನಟಿಸಿದ್ದಾರೆ.