ರಾತ್ರೋ ರಾತ್ರಿ ಜೆನಿಲಿಯಾ-ರಿತೇಶ್‌ ಸಂಬಂಧದಲ್ಲಿ ಬಿರುಕು! ಹಾಲು ಜೇನಿನಂತಿದ್ದ ಜೋಡಿ ದಿಢೀರನೆ ದೂರವಾಗಿದ್ದು ಏಕೆ!?

Thu, 19 Dec 2024-9:00 am,

ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿ ಎಂದರೆ ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನಿಲಿಯಾ ದೇಶಮುಖ್. ಅವರ ಜೋಡಿ ಪ್ರತಿಯೊಬ್ಬ ಅಭಿಮಾನಿಗಳ ಮನಸ್ಸಿನಲ್ಲಿ ನಂಬರ್ ಒನ್. ಅಭಿಮಾನಿಗಳು ಅವರ ರೀಲ್‌ಗಳು, ಫೋಟೋಗಳು, ವೀಡಿಯೊಗಳನ್ನು ಹೆಚ್ಚಾಗಿ ಪ್ರೀತಿಸುವುದನ್ನು ಕಾಣಬಹುದು.   

ಪ್ರೇಮಕಥೆಯಿಂದ ಮದುವೆಯವರೆಗಿನ ಇವರಿಬ್ಬರ ಪಯಣ ಎಲ್ಲರನ್ನೂ ಸೆಳೆಯುತ್ತದೆ. ರಿತೇಶ್-ಜೆನಿಲಿಯಾ ನಡುವಿನ ಪ್ರೀತಿ ಈಗಲೂ ಹಾಗೆಯೇ ಇರುವುದನ್ನು ಹಲವು ಸಂದರ್ಭಗಳಲ್ಲಿ ಕಾಣಬಹುದು. ಆದರೆ ಈ ಸಂಬಂಧದಲ್ಲಿ ಒಮ್ಮೆ ಬ್ರೇಕ್ ಅಪ್ ಆಗಿತ್ತು.  

ಜೆನಿಲಿಯಾ ಮತ್ತು ರಿತೇಶ್ ಅವರ ತಮಾಷೆ ಮತ್ತು ರೋಮ್ಯಾಂಟಿಕ್ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿಯೂ ಕಂಡುಬರುತ್ತವೆ. ಆದರೆ ನಿಮಗೆ ಗೊತ್ತೇ? ರಿತೇಶ್ ಕೂಡ ಜೆನಿಲಿಯಾ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರಂತೆ... ಈ ಬಗ್ಗೆ ಸ್ವತಃ ಜೆನಿಲಿಯಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.    

ಜೆನಿಲಿಯಾ ಜೊತೆ ರಿತೇಶ್ ಬ್ರೇಕ್ ಅಪ್ ಆಗಿದ್ದು ಯಾಕೆ?: ಸಂದರ್ಶನವೊಂದರಲ್ಲಿ, ಜೆನಿಲಿಯಾ, “ನಾವು ಸಂಬಂಧದಲ್ಲಿದ್ದಾಗ. ಆ ವೇಳೆ ರಿತೇಶ್ ನನಗೆ ತಡರಾತ್ರಿ 1 ಗಂಟೆಗೆ ಬ್ರೇಕಪ್‌ ಎಂದು ಮೆಸೆಜ್ ಕಳುಹಿಸಿದ್ದರು. ಮೆಸೇಜ್ ಕಳಿಸಿದ ತಕ್ಷಣವೇ ನಿದ್ರೆಗೆ ಜಾರಿದ್ದರು.. ಬಳಿಕ ರಾತ್ರಿ 2.30ಕ್ಕೆ ನಾನು ಸಂದೇಶವನ್ನು ಓದಿ ಖಿನ್ನತೆಗೆ ಒಳಗಾದೆ. ನಿಖರವಾಗಿ ಏನಾಯಿತು ಎಂದು ನನಗೆ ತಿಳಿದಿಲ್ಲ.. ಆದರೆ ನಾನು ಆ ರೀತಿ ಎಂದಿಗೂ ಬಿಹೇವ್‌ ಮಾಡಿರಲಿಲ್ಲ.." ಎಂದಿದ್ದರು..   

ಇಷ್ಟೆ ಅಲ್ಲ.. “ಬೆಳಿಗ್ಗೆ 9 ಗಂಟೆಗೆ ನಾನು ಒಂದು ವಿಚಾರ ತಲೆಯಲ್ಲಿಟ್ಟುಕೊಂಡಿದ್ದೆ.. ಆದರೆ ಬೆಳಗ್ಗೆ ಎದ್ದವನಿಗೆ ರಾತ್ರಿ ತಾನು ಏನು ಮಾಡಿದೆ ಎಂದು ನೆನಪಾಗಲಿಲ್ಲ. ಬೆಳಿಗ್ಗೆ ಸುಮ್ಮನೆ ನನಗೆ ಕರೆ ಮಾಡಿ ನೀವು ಏನು ಮಾಡುತ್ತಿದ್ದೀರಿ? ಎಂದು ಕೇಳಿದರು. ನಾನು ನಿಮ್ಮೊಂದಿಗೆ ಮಾತನಾಡಲು ಬಯಸುವುದಿಲ್ಲ ಎಂದು ರಿತೇಶ್‌ಗೆ ಹೇಳಿದೆ. ನಿಜವಾಗಿ ಏನಾಯಿತು ಎಂದು ರಿತೇಶ್ ಕೇಳಿದ. ಆಗ ನಾನು.. ನೀನು ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತೀಯಾ? ಎಂದು ಕೇಳಿದೆ ಆಗ ನಡೆದದ್ದೇ ಬೇರೆ.." ಎಂದಿದ್ದರು..   

ಇದರ ನಂತರ, ಬ್ರೇಕಪ್ ಮೆಸೆಜ್‌ ಬಗ್ಗೆ ಜಿನೇಲಿಯಾ ಹೇಳಿದಾಗ, ರಿತೇಶ್ ಜಿನೆಲಿಯಾ ಮೇಲೆ ತಮಾಷೆ ಮಾಡಿದುದನ್ನು ಅವರಿಗೆ ತಿಳಿಸುತ್ತಾನೆ.. ಈ ಬಗ್ಗೆ ರಿತೇಶ್ ವಿವರಿಸಿದ ತಕ್ಷಣ, ಆ ಸಮಯದಲ್ಲಿ ಜೆನಿಲಿಯಾ  ಯಾರು ಇಂತಹ ಜೋಕ್ ಮಾಡುತ್ತಾರೆ ಎಂದು ಕೇಳಿ.. ಅವರ ಮೇಲೆ ಅಸಮಾಧಾನ ವ್ಯಕ್ತಪಡಸಿದ್ದರಂತೆ.. ಆದರೆ ಇದೆಲ್ಲವನ್ನೂ ಮೀರಿ ಒಂದಾದ ಈ ಜೋಡಿ ಯಾವಾಗಲೂ ಪ್ರೇಕ್ಷಕರ ಹೃದಯವನ್ನು ಆಳುತ್ತದೆ.. ಇದು ಹೀಗೆ ಮುಂದುವರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link