Raja Rani Season 3: ಮತ್ತೆ ಕಿರುತೆರೆಗೆ ಮರಳಿದ ನಟಿ ಅದಿತಿ ಪ್ರಭುದೇವ.. ರಿಯಾಲಿಟಿ ಶೋ ಮೂಲಕ ರಿ-ಎಂಟ್ರಿ !

Wed, 29 May 2024-3:56 pm,

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಜಾರಾಣಿ ಸೀಸನ್‌ 3 ರಿಯಾಲಿಟಿ ಶೋ ಗೆ ನಟಿ ಅದಿತಿ ಪ್ರಭುದೇವ ಬರಲಿದ್ದಾರೆ.  

ರಾಜಾರಾಣಿ ಎರಡು ಸೀಸನ್‌ನಲ್ಲಿ ನಟ ನಿರ್ದೇಶಕ ಸೃಜನ್ ಲೋಕೇಶ್, ನಟಿ ತಾರಾ ಹಾಗೂ ನಿರೂಪಕಿ ಅನುಪಮ ಗೌಡ ಇದ್ದರು. ಇದೀಗ 'ರಾಜ ರಾಣಿ ರೀಲೋಡೆಡ್' ಎಂಬ ಟೈಟಲ್‌ ಜೊತೆ ಮೂರನೇ ಸೀಸನ್ ಶುರುವಾಗಲಿದೆ.

ರಾಜಾರಾಣಿ ಸೀಸನ್‌ 3 ರಲ್ಲಿ ಅದಿತಿ ಪ್ರಭುದೇವ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಅದಿತಿ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್ ಮಾಡಿದ್ದಾರೆ.  

ನಟಿ ಅದಿತಿ ಪ್ರಭುದೇವ ರಾಜಾರಾಣಿ ಸೀಸನ್‌ 3 ಮೂಲಕ ಮತ್ತೆ ಕಿರುತೆರೆಗೆ ವಾಪಸ್ ಆಗುತ್ತಿರುವುದು ಟಿವಿ ಪ್ರೇಕ್ಷಕರಿಗೆ ಸಂತಸ ತಂದಿದೆ.

ನಾಗಕನ್ನಿಕೆ ಧಾರಾವಾಹಿಯಿಂದಲೇ ಅದಿತಿ ಪ್ರಭುದೇವ ಹೆಚ್ಚು ಜನಮನ್ನಣೆ ಪಡೆದರು. ನಂತರ ಸಿಂಗಂ, ಓಲ್ಡ್ ಮಾಂಕ್, ರಂಗನಾಯಕಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link