ನಟಿ ದೀಪಿಕಾ ಪುತ್ರಿಯ ಪೋಟೋ ಲೀಕ್.. ಎಷ್ಟು ಮುದ್ದಾಗಿದ್ದಾಳೆ ಗೊತ್ತಾ ದುವಾ!?

Tue, 10 Dec 2024-4:33 pm,

ಬಿ-ಟೌನ್ ನ ಗ್ಲಾಮರಸ್ ನಟಿ ದೀಪಿಕಾ ಪಡುಕೋಣೆ ಕೆಲ ತಿಂಗಳ ಹಿಂದೆ ತಾಯಿಯಾಗಿದ್ದಾರೆ. ತಮ್ಮ ಪುತ್ರಿಗೆ ದುವಾ ಎಂದು ಹೆಸರಿಟ್ಟಿದ್ದಾರೆ.. ಆದರೆ ದುವಾ ಹುಟ್ಟಿದಾಗಿನಿಂದಲೂ ಆಕೆಯ ದರ್ಶನ ಪಡೆಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ..  

ಇತ್ತೀಚೆಗಷ್ಟೇ ಅಭಿಮಾನಿಗಳು ದೀಪಿಕಾ ಪುತ್ರಿಯನ್ನ ಪಬ್ಲಿಕ್‌ನಲ್ಲೇ ನೋಡಿದ್ದಾರೆ.. ಹೌದು ದೀಪಿಕಾ ಹಾಗೂ ಮಗಳು ದುವಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  

ನಟಿ ದೀಪಿಕಾ ಪಡುಕೋಣೆ ತವರು ಬೆಂಗಳೂರಿನಲ್ಲಿ ಕಾಲ ಕಳೆದ ನಂತರ ಮಗಳು ದುವಾ ಜೊತೆ ಮುಂಬೈಗೆ ಮರಳಿದ್ದಾರೆ. ಸೋಮವಾರ ಮಧ್ಯಾಹ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಮತ್ತು ಅವರ ಮಗಳು ದುವಾ ಕಾಣಿಸಿಕೊಂಡಿದ್ದಾರೆ.   

ಈ ವೇಳೆ ದೀಪಿಕಾ ಮಗುವನ್ನು ಗಟ್ಟಿಯಾಗಿ ತಪ್ಪಿಕೊಂಡಿದ್ದಾರೆ.. ಆದ್ದರಿಂದ ಮುಖ ಕಾಣಿಸಿಲ್ಲ.. ಕ್ಯಾಮೆರಾಗಳು ಅವಳ ಪುಟ್ಟ ಕೈಗಳನ್ನು ಮಾತ್ರ ಸೆರೆ ಹಿಡಿದಿವೆ... ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿ ಹಂಚಿಕೊಂಡ ವೀಡಿಯೊದಲ್ಲಿ, ದೀಪಿಕಾ ಕೆಂಪು ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ.  

ಇನ್ನು ಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಚೇರಿಗೆ ಬಂದಿದ್ದ ದೀಪಿಕಾ ಹೆರಿಗೆ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.. ಜೊತೆಗೆ ದುವಾ ಕೂಡ ಕಾಣಿಸಿಕೊಂಡಿದ್ದಾರೆ..    

ಮಾಹಿತಿಯ ಪ್ರಕಾರ, ದೀಪಿಕಾ ಮಾರ್ಚ್ 2025 ರವರೆಗೆ ರೆಸ್ಟ್‌ನಲ್ಲಿರುತ್ತಾರೆ... ಅದರ ನಂತರ, ಅವರು ಶೀಘ್ರದಲ್ಲೇ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ಪ್ರಭಾಸ್ ಅವರೊಂದಿಗೆ 'ಕಲ್ಕಿ' ಸೀಕ್ವೆಲ್ ಚಿತ್ರೀಕರಣದಲ್ಲಿ ನಿರತರಾಗಲಿದ್ದಾರೆ ಎಂದು ವರದಿಯಾಗಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link