ನಟಿ ಖುಷ್ಬೂ ಪತಿ ಈ ಫೇಮಸ್‌ ಡೈರೆಕ್ಟರ್.. ಇವರ ಮಧುರ ಪ್ರೀತಿಗೆ 29 ವರ್ಷಗಳ ಸಂಭ್ರಮ!

Fri, 15 Dec 2023-4:16 pm,

ಸುಮಾರು 25 ವರ್ಷಗಳ ಹಿಂದೆ ಖುಷ್ಬೂ ಸೌತ್‌ ಸಿನಿರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ಅನೇಕ ಸ್ಟಾರ್‌ ನಟರೊಂದಿಗೆ ನಟಿಸಿದರು. 2000 ರಲ್ಲಿ ಸುಂದರ್ ಸಿ ಅವರನ್ನು ವಿವಾಹವಾದರು. 

ಕಾಲಿವುಡ್ ಚಿತ್ರರಂಗದ ಮುದ್ದಾದ ಜೋಡಿಗಳಲ್ಲಿ ಖುಷ್ಬೂ - ಸುಂದರ್ ಅವರು ಒಬ್ಬರು. ನಿರ್ದೇಶಕರಾಗಿರುವ ಸುಂದರ್ ಸಿ ಅವರು ಸಹಾಯಕ ನಿರ್ದೇಶಕರಾಗಿದ್ದಾಗ ನಟಿ ಖುಷ್ಬೂ ಅವರನ್ನು ಭೇಟಿಯಾದರು. ಇದೀಗ ಅವರ ಮಧುರ ಪ್ರೇಮಕ್ಕೆ 29 ವರ್ಷಗಳು ತುಂಬಿವೆ. 

1995ರಲ್ಲಿ ಚಿತ್ರ ಒಂದರಲ್ಲಿ ಸುಂದರ್ ಸಿ ಸಹಾಯಕ ನಿರ್ದೇಶಕರಾಗಿದ್ದರು. ಆ ಚಿತ್ರದಲ್ಲಿ ಖುಷ್ಬೂ ನಾಯಕಿಯಾಗಿ ನಟಿಸಿದ್ದರು. ಅದೇ ಚಿತ್ರದ ಸೆಟ್‌ನಲ್ಲಿ ಇಬ್ಬರೂ ಭೇಟಿಯಾದರು. ಅಲ್ಲಿಂದ ಅವರು ಸ್ನೇಹಿತರಾದರು. ಈ ಹೆಳೆತನ ಪ್ರೀತಿಯಾಗಿ ಬದಲಾಯಿತು. 

ಸುಮಾರು 6 ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ 2000 ದಲ್ಲಿ ಮದುವೆಯಾದರು. ಮದುವೆಯ ನಂತರ ಖುಷ್ಬೂ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು.

ಸುಂದರ್ ಸಿ ಈಗ ಕಮರ್ಷಿಯಲ್ ಚಿತ್ರಗಳ ಕಿಂಗ್‌ ಆಗಿದ್ದಾರೆ. ಖುಷ್ಬೂ ಕೂಡ ಕೆಲವು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದರು.

ಖುಷ್ಬೂ - ಸುಂದರ್.ಸಿ ದಂಪತಿಗೆ ಆವಂತಿಕಾ ಮತ್ತು ಆನಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಂದರ್.ಸಿ ಕುಟುಂಬ ನಿರ್ಮಾಣ ಸಂಸ್ಥೆಯನ್ನೂ ಹೊಂದಿದೆ.

ಖುಷ್ಬೂ ಇಂದು ಪತಿಯೊಂದಿಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.  

'ಇಷ್ಟು ವರ್ಷಗಳ ನಂತರವೂ ಅವರನ್ನು ನೋಡಿ ನಾಣು ನಾಚಿ ಕೆಂಪಾಗುತ್ತೇನೆ' ಎಂಬ ಶೀರ್ಷಿಕೆಯಡಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮುದ್ದಾದ ಜೋಡಿಯ ಫೋಟೋಗಳಿಗೆ ಅಭಿಮಾನಿಗಳು ಲೈಕ್‌ಗಳ ಸುರಿಮಳೆ ಸುರಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link