ವಿಜಯ್ ದೇವರಕೊಂಡ ತಂಗಿ ಕೂಡ ಸ್ಟಾರ್ ನಟಿ! ರಶ್ಮಿಕಾಗಿಂತ ಬ್ಯೂಟಿಫುಲ್ ಇವರು
ವಿಜಯ್ ದೇವರಕೊಂಡ ಸಿನಿರಂಗದಲ್ಲಿ ಸಾಕಷ್ಟು ಕಷ್ಟಪಟ್ಟು ಬೆಳೆದವರು. ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಣ್ಣ ಪುಟ್ಟಪಾತ್ರಗಳ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದರು.
ವಿಜಯ್ ದೇವರಕೊಂಡ ಕರಿಯರ್‌ಗೆ ಬ್ರೇಕ್ ಥ್ರೋ ನೀಡಿದ್ದು ಗೀತ ಗೋವಿಂದಂ ಚಿತ್ರ. ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಿತು. ಆ ಬಳಿಕ ವಿಜಯ್ ದೇವರಕೊಂಡ ಗೋಲ್ಡನ್ ಟೈಮ್ ಶುರುವಾಯಿತು.
ವಿಜಯ್ ದೇವರಕೊಂಡಗೆ ಬಿಗ್ ಹಿಟ್ ಕೊಟ್ಟ ಈ ಸಿನಿಮಾದಲ್ಲಿ ವಿಜಯ್ ಸಹೋದರಿಯಾಗಿ ಈ ಹುಡುಗಿಯನ್ನು ಅನೇಕರು ಸ್ವಂತ ತಂಗಿಯೇ ಎಂದುಕೊಂಡಿದ್ದಾರೆ.
ವಿಜಯ್ ದೇವರಕೊಂಡ ತಂಗಿ ಎಂದೇ ಬಿಂಬಿತರಾಗಿರುವ ಈ ನಟಿ ಒಡಹುಟ್ಟಿದ ಸಹೋದರಿಯಲ್ಲ.
ಗೀತ ಗೋವಿಂದಂ ಚಿತ್ರದಲ್ಲಿ ವಿಜಯ್ ತಂಗಿಯಾಗಿ ಕಾಣಿಸಿಕೊಂಡ ಈ ಹುಡುಗಿಯ ಹೆಸರು ಮೌರ್ಯನಿ. ಪಿಯುಸಿ ಓದುವಾಗಲೇ ಸಿನಿಮಾದಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡವರು. 2016 ರಲ್ಲಿ ಅರ್ಧನಾರಿ ಚಿತ್ರದ ಮೂಲಕ ತೆಲುಗು ಜನರಿಗೆ ಪರಿಚಯವಾದರು.
ಮೌರ್ಯನಿ ತೆಲುಗಿನಲ್ಲಿ ಸಾಲು ಸಾಲು ಅವಕಾಶ ಪಡೆದರು. ತೆಲುಗಿನ ಅಲ್ಲರಿ ನರೇಶ್ ಅಭಿನಯದ ಇಂಟ್ಲೋ ದೆಯ್ಯಂ ನಾಕೇಂ ಭಯ್ಯಾ ಚಿತ್ರದಲ್ಲಿ ಸೆಕೆಂಡ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ.
ತೆಲುಗು ಚಿತ್ರಗಳಾದ ನೆಲ್ಲೂರಿ ಪೆದ್ದರೆಡ್ಡಿ, ಗೀತಾ ಗೋವಿಂದಂ, ಜಾನಕಿ ರಾಮಡು, ಕ್ರ್ಯಾಕ್, ದೇವರಕೊಂಡಂಲೋ ವಿಜಯ್ ಪ್ರೇಮಕಥಾ, ಸುಂದರಾಂಗುಡು, ಅಂದರು ಬಾಗುಂಡಲಿ ಅಂದುಲೊ ನೇನುಂಡಲಿ ಚಿತ್ರಗಳಲ್ಲಿ ಮೌರ್ಯನಿ ನಟಿಸಿದ್ದಾರೆ.
ನಟಿ ಮೌರ್ಯನಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಫೋಟೋಶೂಟ್ ಮತ್ತು ರೀಲ್ಸ್ ಹಂಚಿಕೊಳ್ಳುತ್ತಾ ಸಕ್ರಿಯವಾಗಿರುತ್ತಾರೆ.