`ನಾನು ತುಂಬಾ ವೀಕ್ ಆಗಿದ್ದೆ... ಪ್ರಭುದೇವ ಪ್ರೀತಿಗಾಗಿ ಏನು ಮಾಡಲೂ ರೆಡಿ ಇದ್ದೆ`- ಶಾಕಿಂಗ್ ಹೇಳಿಕೆ ನೀಡಿದ ನಟಿ ನಯನತಾರಾ
ನಟಿ ನಯನತಾರಾ ಅವರನ್ನು ಅಭಿಮಾನಿಗಳು ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ಚಿತ್ರರಂಗದಲ್ಲಿ ಉತ್ತಮ ಪಾತ್ರಗಳನ್ನೇ ಆಯ್ದುಕೊಳ್ಳುವ ನಯನತಾರ 2011ರಲ್ಲಿ ಸಿನಿಮಾ ತೊರೆಯಲು ನಿರ್ಧರಿಸಿದ್ದರಂತೆ. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ್ದೆ ಎಂದು ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ.
ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ಮತ್ತು ಇಬ್ಬರು ಪುತ್ರರೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ನಯನತಾರಾ ಪ್ರಭುದೇವ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
"ಪ್ರಭುದೇವ ಸಲಹೆ ಮೇರೆಗೆ ಸಿನಿಮಾ ತೊರೆಯಲು ಒಪ್ಪಿಕೊಂಡೆ. ಪ್ರೀತಿಗಾಗಿ ನಾನು ಏನು ಬೇಕಾದರು ಮಾಡುವ ಪರಿಸ್ಥಿತಿಯಲ್ಲಿದ್ದೆ. ನಾನು ನನ್ನ ಜೀವನದಲ್ಲಿ ಪ್ರೀತಿಯನ್ನು ಪಡೆದುಕೊಳ್ಳಲು ಎಂತಹ ವಿಷಯಕ್ಕಾದರೂ ರಾಜಿ ಮಾಡಿಕೊಳ್ಳಬೇಕು ಎಂದು ಭಾವಿಸುತ್ತಿದ್ದೆ. ನಾನು ತುಂಬಾ ವೀಕ್ ಆಗಿದ್ದೆ ಆಗ" ಎಂದು ಹೇಳಿದ್ದಾರೆ.
"2011ರಲ್ಲಿ ಸಿನಿಮಾ ತೊರೆಯುವ ಮನಸ್ಸು ಮಾಡಿದ್ದೆ. ಇಂಡಸ್ಟ್ರಿಯಲ್ಲಿ ಹಲವು ರೀತಿಯ ಸಂಬಂಧಗಳನ್ನು ನೋಡುತ್ತೇವೆ. ಇದು ತಪ್ಪೆಂದೋ.. ಅಥವಾ ಅದಕ್ಕೆ ಸಂಬಂಧಿಸಿದಂತೆ ಯಾವುದನ್ನೂ ನಾನು ಹೇಳುತ್ತಿಲ್ಲ. ಆದರೆ, ಸಿನಿಮಾದಲ್ಲಿ ಇಂಥದ್ದೇ ಪಯಣಗಳನ್ನು ನೋಡುತ್ತಲೇ ಬಂದಿದ್ದೇವೆ. ಆ ಸಮಯದಲ್ಲಿ ಅದು ಸರಿ ಎನಿಸಿತು. ಕೆಲವೆಡೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಮ್ಮ ಸಂಗಾತಿ ಏನನ್ನಾದರೂ ಮಾಡಬೇಡ ಎಂದರೆ ಅದನ್ನು ನಾವು ಮಾಡಬಾರದು ಎಂಬುದು ಆ ಸಂದರ್ಭದಲ್ಲಿ ನಾನು ಅಂದುಕೊಂಡಿದ್ದ ತಿಳುವಳಿಕೆಯಾಗಿತ್ತು" ಎಂದಿದ್ದಾರೆ.
"ಈ ಸಂಬಂಧವೇ ನನ್ನನ್ನು ಇಂದಿನ ಈ ಸ್ಥಿತಿಗೆ ತಂದು ನಿಲ್ಲಿಸಿದೆ. ನಾನು ಕೂಡ ಕೆಲವು ಕೆಟ್ಟ ಸಮಯಗಳನ್ನು ದಾಟಿದ್ದೇನೆ. ಆದರೆ, ಆ ಕೆಟ್ಟ ಕಾಲದಿಂದ ಕಲಿತಿದ್ದೇನೆ. ನಾನು ಇಂದು ಏನು ಮಾಡಬಹುದು ಎಂದು ನಾನು ಅರಿತುಕೊಂಡೆ. ನಾನು ಮೊದಲು ತುಂಬಾ ವಿಭಿನ್ನ ರೀತಿಯ ವ್ಯಕ್ತಿಯಾಗಿದ್ದೆ" ಎಂದಿದ್ದಾರೆ.